spot_img
Monday, April 20, 2026
spot_img

ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ್ದರಿಂದಲೇ ನರೇಂದ್ರ ಮೋದಿಯಂತಹ ಜನಸಾಮಾನ್ಯರು ಪ್ರಧಾನಿಯಾಗಿದ್ದು-ಬಿ.ಕೆ ಹರಿಪ್ರಸಾದ್


ಕುಂದಾಪುರ : ಸಂವಿಧಾನದ ಆಶಯದಂತೆ ಪ್ರಜಾಪ್ರಭುತ್ವ ವ್ಯವಸ್ಥೆಯಡಿಯಲ್ಲಿ ಕಾಂಗ್ರೆಸ್ ಪಕ್ಷ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ ದೇಶದಲ್ಲಿ ಆಡಳಿತ ನೀಡಿದ್ದರಿಂದಾಗಿ ಜನಸಾಮಾನ್ಯರಾದ ನರೇಂದ್ರ ಮೋದಿಯವರಿಗೂ ಈ ದೇಶದ ಪ್ರಧಾನ ಮಂತ್ರಿಯಾಗುವ ಭಾಗ್ಯ ಲಭಿಸಿದೆ. ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.

ಕುಂದಾಪುರ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಬುಧವಾರ ಸಂಜೆ ಬ್ಲಾಕ್ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ನಡೆದ ಪ್ರಜಾ ಧ್ವನಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಕಳೆದ 70 ವರ್ಷದಲ್ಲಿ ಏನು ಸಾಧನೆ ಮಾಡಿದೆ ಎನ್ನುವ ಬಿಜೆಪಿಗರು ಇವತ್ತು ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಮಾರಾಟ ಮಾಡುತ್ತಿರುವುದು ಕಾಂಗ್ರೆಸ್ ಅವಧಿಯಲ್ಲಿಯೇ ಸ್ಥಾಪನೆಯಾಗಿದ್ದು ಎನ್ನುವುದನ್ನು ಮರೆಯಬಾರದು. ಕಾಂಗ್ರೆಸ್ ಅವಧಿಯಲ್ಲಿ ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಉದ್ದಿಮೆಗಳ ಸ್ಥಾಪನೆ ಮಾಡಲಾಗಿತ್ತು. ಇವತ್ತು 27 ಉದ್ದಿಮೆಗಳು ಮಾರಾಟವಾಗಿದೆ ಎಂದರು.

ಯಾವುದೇ ರಾಜಕಾರಣಿಗಳ ಮಕ್ಕಳು ಇವತ್ತು ಧರ್ಮ ರಾಜಕಾರಣಕ್ಕಾಗಿ ಹಾಗೂ ಧರ್ಮ ಸಂಘರ್ಷಕ್ಕಾಗಿ ಬೀದಿಗಿಳಿದು ಪ್ರಾಣ ನೀಡುವುದಿಲ್ಲ. ಜೈಲೂ ಸೇರುವುದಿಲ್ಲ. ಬಡ ಮಕ್ಕಳನ್ನು ಈ ಕಾರ್ಯಕ್ಕೆ ಪ್ರಚೋದಿಸುವ ನಾಯಕರು ತಮ್ಮ ತಮ್ಮ ಮಕ್ಕಳನ್ನು ಈ ಕಾರ್ಯಕ್ಕೆ ಕಳುಹಿಸುವ ಧೈರ್ಯ ತೋರಬೇಕು ಎಂದರು.

ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕುಂದಾಪುರ-ಗಂಗೊಳ್ಳಿ ಸೇತುವೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಅಧ್ಬುತ ಭಾಷಾ ಸೊಗಡನ್ನು ಹೊಂದಿರುವ ಕುಂದಗನ್ನಡದ ’ ಅಭಿವೃದ್ಧಿಗೆ ಸಮಗ್ರ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಮಾತನಾಡಿ, ಕಾಂಗ್ರೆಸ್ ಪಕ್ಷದಿಂದ ಈ ಬಾರಿ ಎರಡು ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುತ್ತದೆ. ಒಂದು ರಾಜ್ಯದ ಒಟ್ಟಾರೆ ಅಭಿವೃದ್ಧಿಯನ್ನು ಕೇಂದ್ರಿಕರಿಸಿಕೊಂಡು ಹಾಗೂ ಇನ್ನೊಂದು ಆಯಾ ಭೌಗೋಳಿಕ ಪ್ರದೇಶಗಳ ವ್ಯಾಪ್ತಿಯನ್ನು ಕೇಂದ್ರಿಕರಿಸಿಕೊಂಡು ಮಾಡಲಾಗಿದೆ. ಗ್ರಹ ಜ್ಯೋತಿ, ಗ್ರಹ ಲಕ್ಷ್ಮೀ ಯೋಜನೆಗಳ ಜೊತೆಯಲ್ಲಿ ಕರಾವಳಿ ಭಾಗದ ಅಭಿವೃದ್ಧಿಗಾಗಿ ೨,೫೦೦ ಕೋಟಿ ವಾರ್ಷಿಕ ಅನುದಾನದಲ್ಲಿ ಕರಾವಳಿ ಪ್ರದೇಶಾಭಿವೃದ್ದಿ, ಮಂಗಳೂರಿನಲ್ಲಿ ಐಟಿ ಪಾರ್ಕ್, ಮೀನುಗಾರರಿಗೆ ೧೦ ಲಕ್ಷ ವಿಮಾ ಯೋಜನೆ, ಮೀನುಗಾರರ ಅಭಿವೃದ್ಧಿಗೆ ಕಾರ್ಯಕ್ರಮಗಳು, ವಾರ್ಷಿಕ ೨೫೦ ಕೋಟಿ ರೂ. ಅನುದಾನದಲ್ಲಿ ಬಿಲ್ಲವ ಹಾಗೂ ಬಂಟ ಸಮುದಾಯದ ಅಭಿವೃದ್ಧಿಗಾಗಿ ಪ್ರತ್ಯೇಕ ಅಭಿವೃದ್ಧಿ ನಿಗಮಗಳ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳ ಗುರಿ ಇರಿಸಿಕೊಳ್ಳಲಾಗಿದೆ ಎಂದರು.

ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಗೋ ರಕ್ಷಣೆ ವಿಚಾರದಲ್ಲಿ ದೊಡ್ಡ ದೊಡ್ಡ ಮಾತು ಆಡುವ ಬಿಜೆಪಿಗರು ಪಶು ಸಂಗೋಪನಾ ಇಲಾಖೆಯ ಸಮಸ್ಯೆಗಳು, ಪಶು ವೈದ್ಯರ ವಿಚಾರದಲ್ಲಿ ಮೌನ ವಹಿಸಿದ್ದು ಏಕೆ? ಇವತ್ತು ಖಾಯಿಲೆಯಿಂದ ಜಾನುವಾರುಗಳು ಸೂಕ್ತ ವೈದ್ಯರು, ಚಿಕಿತ್ಸೆ ಇಲ್ಲದೇ ಸಾವನ್ನಪ್ಪುತ್ತಿವೆ ಇಂದು ಗೋರಕ್ಷಕರಿಗೆ ಕಾಣಿಸುವುದಿಲ್ಲವೇ? ಎಂದು ಪ್ರಶ್ನಿಸಿದ ಅವರು, ಕೇವಲ ರಾಜಕೀಯದ ಕಾರಣಕ್ಕಾಗಿ ಮೀನುಗಾರರ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎನ್ನುವ ಬಿಜೆಪಿ ಪಕ್ಷದವರಿಗೆ ಮೀನುಗಾರರ ಬಗ್ಗೆ ನಿಜವಾಗಿಯೂ ಕಾಳಜಿ ಇಲ್ಲ. ಕಳೆದ ಚುನಾವಣೆಯಲ್ಲಿ ಪರೇಶ್ ಮೇಸ್ತಾ ಅವರ ಸಾವನ್ನು, ಸುಳ್ಳು ಹೇಳಿ ರಾಜಕೀಯ ಲಾಭ ಮಾಡಿಕೊಂಡಿದ್ದ ಬಿಜೆಪಿಗರು ಇದೀಗ ಸಿಬಿ‌ಐ ವರದಿ ಬಂದ ಬಳಿಕ ತುಟಿ ಬಿಚ್ಚುತ್ತಿಲ್ಲ ಎಂದರು.

ಬೈಂದೂರು ವಿಧಾನ ಸಭಾ ಚುನಾವಣೆಯಲ್ಲಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ ಸುಳ್ಳು ಹಾಗೂ ಅಪಪ್ರಚಾರದಿಂದ ಚುನಾವಣೆಯನ್ನು ಗೆದ್ದಿರುವ ಬಿಜೆಪಿಗರಿಗೆ ಚುನಾವಣೆ ಮುಗಿದ ಬಳಿಕ ತಮ್ಮ ಮಾತುಗಳೇ ಮರೆತು ಹೋಗುತ್ತದೆ. ಬೈಂದೂರಿನಲ್ಲಿ ವಿಮಾನ ನಿಲ್ದಾಣ, ಮೆಡಿಕಲ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಐದು ಹೊಳೆಗಳ ಜೋಡಣೆ ಏನಾಯಿತು ?ಎಂದು ಗೋಪಾಲ ಪೂಜಾರಿ ಪ್ರಶ್ನಿಸಿದರು.

ಎ‌ಐಸಿಸಿ ಕಾರ್ಯದರ್ಶಿ ರೋಝಿ ಜೋನ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಫೂರ್ , ಜಿಲ್ಲಾ ಕಾಂಗ್ರೆಸ್ ಸಮಿತಿ ಮುಖಂಡರಾದ ದಿನೇಶ್ ಪುತ್ರನ್, ಅಲೆವೂರು ಹರೀಶ್ ಕಿಣಿ, ಕೆ.ವಿಕಾಸ್ ಹೆಗ್ಡೆ, ರಾಜು ಎಸ್ ಪೂಜಾರಿ, ದೇವಕಿ ಪಿ ಸಣ್ಣಯ್ಯ, ಪ್ರಸನ್ನಕುಮಾರ ಕೆರಾಡಿ, ಪಕ್ಷದ ಪ್ರಮುಖರಾದ ಕೊಳ್ಕೆಬೈಲು ಕಿಶನ್‌ಕುಮಾರ ಹೆಗ್ಡೆ, ದಿನೇಶ್ ಹೆಗ್ಡೆ ಮೊಳಹಳ್ಳಿ, ಬೀಜಾಡಿ ಅಶೋಕ ಪೂಜಾರಿ, ಶ್ಯಾಮಲಾ ಭಂಡಾರಿ, ಸುರೇಂದ್ರ ಶೆಟ್ಟಿ, ಬಿ.ಹೆರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಸದಾನಂದ ಶೆಟ್ಟಿ ಕೆದೂರು, ದೇವಾನಂದ ಶೆಟ್ಟಿ ಬಸ್ರೂರು, ಮದನಕುಮಾರ ಉಪ್ಪುಂದ, ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಶಂಕರ ಕುಂದರ್ ಕೋಟ, ರೋಶನ್‌ಕುಮಾರ ಶೆಟ್ಟಿ, ಸೌರಭ್ ಬಲ್ಲಾಳ್, ಇಚ್ಚಿತಾರ್ಥ ಶೆಟ್ಟಿ, ಶೇಖರ ಪೂಜಾರಿ ಬೈಂದೂರು, ಮುನಾಫ್ ಕೋಡಿ, ಎನ್‌ಎಸ್‌ಯು‌ಐನ ಸುಜನ್ ಶೆಟ್ಟಿ ಇದ್ದರು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು, ಬ್ಲಾಕ್ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ವಿನೋದ್ ಕ್ರಾಸ್ಟೋ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!