spot_img
Wednesday, January 22, 2025
spot_img

ಆಜ್ರಿ :ಶ್ರೀದೊಟ್ಟೆಕಾಲು ಚಿಕ್ಕು ನಂದಿಕೇಶ್ವರ ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠೆ

ಕುಂದಾಪುರ: ಆಜ್ರಿ ದೊಡ್ಮನೆ ಶ್ರೀದೊಟ್ಟೆಕಾಲು ಚಿಕ್ಕು ನಂದಿಕೇಶ್ವರ ಪರಿವಾರ ದೈವಸ್ಥಾನದ ಪುನರ್ ಪ್ರತಿಷ್ಠೆ, ನೂತನ ಗರ್ಭಗೃಹ ಸಮರ್ಪಣೆ,ಬಿಂಬ ಪ್ರತಿಷ್ಠೆ,ಬ್ರಹ್ಮ ಕಲಶಾಭಿಷೇಕವು ವೇ.ಮೂ ಸುಧೀರ ಅಡಿಗರು ಪಡುಮುಂಡು,ವೇ.ಮೂ.ಮಹಾಬಲ ಐತಾಳ ಗೂಂಜಾಡಿ, ಸಹ ಅರ್ಚಕ ಅನಂತ ಬಾಯರಿ ಆಜ್ರಿ ನೇತ್ರತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶುಕ್ರವಾರ ಆರಂಭಗೊಂಡು ಶನಿವಾರದ ತನಕ ನಡೆಯಿತು.

ಶ್ರೀಮಹಾಲಿಂಗೇಶ್ವರ ದೇವರ ಸನ್ನಿಧಿಯಲ್ಲಿ ಶುಕ್ರವಾರ ಬೆಳಿಗ್ಗೆ ಫಲನ್ಯಾಸ ಪೂರ್ವಕ ಪ್ರಾರ್ಥನೆ,ನಂತರ ದೈವಸ್ಥಾನದಲ್ಲಿ ಪ್ರಾರ್ಥನೆ,ಗುರುಗಣಪತಿ ಪೂಜೆ, ಪುಣ್ಯಾಹ ವಾಚನ, ಋತ್ವಿಗ್ವರಣೆ, ಗಣಯಾಗ, ನವಗ್ರಹಯಾಗ, ದೈವಗಳ ಬಿಂಬ ಶುದ್ಧಿ, ಶಯ್ಯಾ ಕಲ್ಪನೆ,ಗೇಹಪರಿಗ್ರಹ, ಸ್ಥಾನಶುದ್ದಿ, ಪ್ರಸಾದ ಶುದ್ದಿ, ರಾಕ್ಷೆಘ್ನ ಹೋಮ, ವಾಸ್ತು ಪೂಜೆ, ಬಲಿ. ದಿಗ್ಬಲಿ. ಅಧಿವಾಸ ಪೂಜೆ, ಅಧಿವಾಸಾಧಿ ಹೋಮಗಳು, ರಾತ್ರಿ ಬಿಂಬ ಪ್ರತಿಷ್ಠೆ, ಜೀವಕುಂಭಾಭಿಷೇಕ, ಪ್ರಾಣ ಪ್ರತಿಷ್ಠೆ,ಪೂಜೆ. ಶನಿವಾರ ಬೆಳಿಗ್ಗೆ ಬ್ರಹ್ಮ ಕಲಶ ಸ್ಥಾಪನೆ, ಕಲಾತತ್ವ ಹೋಮ, ಅಧಿವಾಸ ಹೋಮ, ಕಲಶಾಭಿಷೇಕ, ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ, ಸಂದರ್ಶನ ಸೇವೆ, ಧಾರ್ಮಿಕ ಸಭೆ, ಅನ್ನಸಂತರ್ಪಣೆ ನಡೆಯಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!