Sunday, September 8, 2024

ಬ್ರಹ್ಮಾವರದಲ್ಲಿ 1500 ವಿದ್ಯಾರ್ಥಿಗಳಿಂದ ಯಕ್ಷಗಾನ ಸಂಭ್ರಮ

ಬ್ರಹ್ಮಾವರದಲ್ಲಿ 8 ದಿನ ಜಾತಿ, ಧರ್ಮ ,ಭಾಷೆ ಮೀರಿ ಉಡುಪಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 15 ಶಾಲೆಯ 1500 ವಿದ್ಯಾರ್ಥಿಗಳಿಂದ ಯಕ್ಷಗಾನ ಸಂಭ್ರಮ ಆರಂಭಗೊಂಡಿದೆ.

ಉಡುಪಿಯ ಯಕ್ಷ ಶಿಕ್ಷಣ ಟ್ರಸ್ಟ್, ಪ್ರದರ್ಶನ ಸಂಘಟನಾ ಸಮಿತಿ ಬ್ರಹ್ಮಾವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ಕಿಶೋರ ಯಕ್ಷಗಾನ ಸಂಭ್ರಮವನ್ನು ಬ್ರಹ್ಮಾವರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಎಂ.ಚಂದ್ರಶೇಖರ್ ಹೆಗ್ಡೆ ಮಂಗಳವಾರ ಸಂಜೆ ಉದ್ಘಾಟಿಸಿದರು.

ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ರಂಗನಾಥ್ ಕೆ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ ಗಂಗಾಧರ ರಾವ್, ಉದ್ಯಮಿಗಳಾದ ಕೆ.ತಿಮ್ಮಪ್ಪ ಹೆಗ್ಡೆ, ಕರುಣಾಕರ ಹೆಗ್ಡೆ, ರಾಜಾರಾಮ ಶೆಟ್ಟಿ, ಭುಜಂಗ ಶೆಟ್ಟಿ, ಭಾಸ್ಕರ್ ರೈ, ವೀಣಾ ನಾಯ್ಕ ಉಪಸ್ಥಿತರಿದ್ದರು.

ಬ್ರಹ್ಮಾವರ ಪ್ರದರ್ಶನ ಸಂಘಟನಾ ಸಮಿತಿಯ ಅಧ್ಯಕ್ಷ ರಾಜೇಶ್ ಶೆಟ್ಟಿ ಬಿರ್ತಿ ಸ್ವಾಗತಿಸಿ, ಹರೀಶ್ ಶೆಟ್ಟಿ ಚೇರ್ಕಾಡಿ ನಿರೂಪಿಸಿದರು. ಪಂಚಮಿ ಮೋಹನ್ ಶೆಟ್ಟಿ, ಮುರಲಿ ಕಡೆಕಾರ್, ಸುಧೀರ್ ಕುಮಾರ್ ಶೆಟ್ಟಿ, ಉಮೇಶ್ ನಾಯ್ಕ,ಕಮಲಾಕ್ಷ ಹೆಬ್ಬಾರ್, ರಘುಪತಿ ಬ್ರಹ್ಮಾವರ ಸಹಕರಿಸಿದ್ದರು.

ಪ್ರತೀ ದಿನ ಸಂಜೆ 90 ನಿಮಿಷಗಳ ಆಯ್ದ ಪುರಾಣ ಪ್ರಸಂಗಗಳ 2 ಪ್ರದರ್ಶನ 8 ದಿನಗಳ ಕಾಲ ಉಚಿತ ಪ್ರದರ್ಶನ ನಡೆಯಲಿದೆ. ಪ್ರಥಮ ದಿನದಂದು ಕಾಳಿಂದಿ ವಿವಾಹ ಮತ್ತು ಶ್ರೀ ಕೃಷ್ಣ ಪಾರಿಜಾತ ಯಕ್ಷಗಾನ ನಡೆಯಿತು. ವಿದ್ಯಾರ್ಥಿಗಳ ಪೋಷಕರು , ಶಿಕ್ಷಕರು, ಯಕ್ಷಗಾನ ಪ್ರೇಮಿಗಳು ಕಾರ್ಯಕ್ರಮ ವೀಕ್ಷಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!