spot_img
Tuesday, April 14, 2026
spot_img

ಹೆಸಕುತ್ತೂರು: ಮಕ್ಕಳ ಹಬ್ಬದ ಸಡಗರ – ‘ಲಾಲಿತ್ಯ’

ಹೆಸಕುತ್ತೂರು: “ಮಕ್ಕಳಿಂದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಎಂಬ ಪರಿಕಲ್ಪನೆಯೊಂದಿಗೆ ಮಕ್ಕಳನ್ನೇ ಉದ್ಘಾಟಕರಾಗಿ, ಸಭಾಧ್ಯಕ್ಷರಾಗಿ, ಮುಖ್ಯ ಅತಿಥಿಗಳಾಗಿ ಶಾಲಾ ವಾರ್ಷಿಕೋತ್ಸವ ನಡೆಸುವ ಕಾರ್ಯಕ್ರಮ ವಿನೂತನ; ಎಲ್ಲಾ ಶಾಲೆಗಳಿಗೂ ಮಾದರಿ” ಎಂದು ಝೀ ಟಿವಿ ಡ್ರಾಮಾ ಜೂನಿಯರ್ಸ್ ವಿಜೇತೆ ಸಮೃದ್ಧಿ ಕುಂದಾಪುರ ನುಡಿದರು.

ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೆಸಕುತ್ತೂರು ಇಲ್ಲಿ ವಿನೂತನವಾಗಿ ಆಯೋಜಿಸಲಾಗಿದ್ದ ಮಕ್ಕಳ ಹಬ್ಬದ ಸಡಗರ – ‘ಲಾಲಿತ್ಯ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಕ್ಕಳ ದಿನಾಚರಣೆಯ ದಿನದಂದೇ ಶಾಲಾ ವಾರ್ಷಿಕೋತ್ಸವವನ್ನು ಮಕ್ಕಳ ಹಬ್ಬದ ಸಡಗರದ ರೂಪದಲ್ಲಿ ಏರ್ಪಡಿಸಲಾಗಿತ್ತು.

ಶಾಲಾ ವಿದ್ಯಾರ್ಥಿ ನಾಯಕ ಅನ್ವಿತ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಡ್ರಾಮಾ ಜೂನಿಯರ್ಸ್ ರನ್ನರ್ ಅಪ್ ಸಾನಿಧ್ಯ ಪೆರ್ಡೂರು, ಶಾಲಾ ವಿಪಕ್ಷ ನಾಯಕಿ ತನುಶ್ರೀ, ಸಾಂಸ್ಕ್ರತಿಕ ಸಚಿವೆ ಜಿ ನಿಕಿತ, ಶಾಲಾ ಉಪನಾಯಕರಾದ ಹನಿ ಆರ್, ಪ್ರಗತಿ ಉಪಸ್ಥಿತರಿದ್ದರು. 

ಬೆಳಿಗ್ಗಿನ ಅವಧಿಯಲ್ಲಿ ಶಾಲೆಯ ಎಲ್ಲಾ ಪೋಷಕರನ್ನು ವೇದಿಕೆಯಲ್ಲಿ ಗುರುತಿಸಿ ಗೌರವಿಸಲಾಯಿತು. ಆ ನಂತರ ಡಾ. ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ. ವಿರೂಪಾಕ್ಷ ದೇವರಮನೆಯವರಿಂದ ಪೋಷಕರಿಗಾಗಿ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಸಂಜೆಯ ಕಾರ್ಯಕ್ರಮದಲ್ಲಿ ಇಪ್ಪತ್ತು ವರ್ಷಗಳಿಂದ ಶಾಲಾ ಮುಖ್ಯ ಅಡುಗೆಯವರಾಗಿ ಸೇವೆ ಸಲ್ಲಿಸಿದ ಬಾಬಿ ಕುಲಾಲ ಇವರನ್ನು ಸನ್ಮಾನಿಸಲಾಯಿತು. ಹಾಗೆಯೇ ಹೋಬಳಿ ಮಟ್ಟದ ಕ್ರೀಡೆ ಮತ್ತು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ, ಯೋಗಾಸನಾ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಲಾಯಿತು. ಆ ನಂತರದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ನ್ರತ್ಯ ವೈಭವ, ಭರತನಾಟ್ಯ ಸಿಂಚನ, ಯಕ್ಷಗಾನ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಕುಂದಾಪುರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಸ್ ಕಾಂತರಾಜು, ರಾಜ್ಯ ಪ್ರಶಸ್ತಿ ಪುರಸ್ಕ್ರತ ನಿವೃತ್ತ ಮುಖ್ಯ ಶಿಕ್ಷಕರಾದ ಚಂದ್ರಶೇಖರ ಶೆಟ್ಟಿ ಕೆ ಎನ್, ಉಡುಪಿ ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಅಂಪಾರು ದಿನಕರ ಶೆಟ್ಟಿ, ದಾನಿಗಳಾದ ಕೊರಗಯ್ಯ ಶೆಟ್ಟಿ, ಜಿ ಪ್ರಸಾದ ಕಾಂಚನ್ ಶಿರಿಯಾರ, ಕೊರ್ಗಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೌರೀಶ್ ಹೆಗ್ಡೆ, ಪಂಚಾಯತ್ ಸದಸ್ಯರಾದ ರಾಘವೇಂದ್ರ ಶೆಟ್ಟಿ, ಅಶೋಕ ಮೊಗವೀರ, ಪಲ್ಲವಿ ಕುಲಾಲ, ಶಿಕ್ಷಣ ಸಂಯೋಜಕರಾದ ಶೇಖರ್ ಯು, ಸಿ ಆರ್ ಪಿ ವಸಂತ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಕೃಷ್ಣ ಕೆದ್ಲಾಯ, ಉಪಾಧ್ಯಕ್ಷರಾದ ಗಾಯತ್ರಿ ಆಚಾರ್, ಶಾಲಾ ಮುಖ್ಯ ಶಿಕ್ಷಕ ಶೇಖರ್ ಕುಮಾರ್, ಸಹ ಶಿಕ್ಷಕರಾದ ಸಂಜೀವ ಮೊಗವೀರ, ಜಯಲಕ್ಷ್ಮಿ ಬಿ, ಜಯರಾಮ ಶೆಟ್ಟಿ, ವಿಜಯಾ ಆರ್, ವಿಜಯ ಶೆಟ್ಟಿ, ರವೀಂದ್ರ ನಾಯಕ್, ಗೌರವ ಶಿಕ್ಷಕಿ ಮಧುರಾ, ಅಂಗನವಾಡಿ ಶಿಕ್ಷಕಿ ಶರ್ಮಿಳಾ ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿನಿ ಆಶ್ರಿತಾ ಸ್ವಾಗತಿಸಿದರು. ವಿದ್ಯಾರ್ಥಿ ಸುಜನ್ ವಂದಿಸಿದರು. ಶಾಲಾ ಸಹಶಿಕ್ಷಕ ಅಶೋಕ ತೆಕ್ಕಟ್ಟೆ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!