Sunday, September 8, 2024

ತೆಂಕೊಡಿಗೆ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೃಷ್ಣಮೂರ್ತಿ ಮಂಜರಿಗೆ ಸನ್ಮಾನ

ವಂಡ್ಸೆ: ಜನಸಂಖ್ಯೆಯನ್ನು ಶಿಕ್ಷಣದ ಮಾನವ ಸಂಪನ್ಮೂಲವಾಗಿಸಿ ದೇಶವನ್ನು ಅಭಿವೃದ್ದಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೊರನಾಡ ಕನ್ನಡಿಗ, ಉದ್ಯಮಿ, ಶಿಕ್ಷಣಪ್ರೇಮಿ ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಅಭಿಪ್ರಾಯ ಪಟ್ಟರು.

ಶ್ರೀ ಚಿತ್ತೇರಿ ಬ್ರಹ್ಮಲಿಂಗೇಶ್ವರ ದೇವಸ್ಥಾನ ಅಬ್ಬಿ ಮತ್ತು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ತೆಂಕೊಡಿಗೆ ಇವರ ಜಂಟಿ ಆಶ್ರಯದಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

ವೇ.ಮೂ.ದಿನಕರ ಉಡುಪ ಹರವರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಗ್ರಾ.ಪಂ ಉಪಾಧ್ಯಕ್ಷೆ ಗೀತಾ ಅವಿನಾಶ್, ಗ್ರಾ.ಪಂ ಸದಸ್ಯ ಗೋವರ್ಧನ್ ಜೋಗಿ, ನಾಗೇಂದ್ರ ಉಡುಪ, ವೆಂಕಟೇಶ್ ಶೆಟ್ಟಿ, ಕೊಳ್ತ ಗೋಪಾಲ ಶೆಟ್ಟಿ, ಸಿ.ಆರ್.ಪಿ ನಾಗರಾಜ ಶೆಟ್ಟಿ, ಶಿಕ್ಷಣ ಸಂಯೋಜಕರಾದ ಸತ್ಯನಾ ಕೊಡೇರಿ, ಆಶೀರ್ವಾದ್ ಫ್ರೆಂಡ್ಸ್ ಮಹೇಶ ಗಾಣಿಗ ಅಬ್ಬಿ, ವಿಜಯ ಪೂಜಾರಿ ತೆಂಕೊಡಿಗೆ ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಅನುಷಾ, ಸುಶ್ಮಿತಾ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಶಿಕ್ಷಕ ಉದಯ ಕಾರ್ಯಕ್ರಮ ನಿರ್ವಹಿಸಿದರು. ತೆಂಕೊಡಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಶೆಟ್ಟಿ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!