spot_img
Monday, April 13, 2026
spot_img

12ನೇ ಶತಮಾನದ ಸಮಾಜ ಸುಧಾರಕ ಅಂಬಿಗರ ಚೌಡಯ್ಯ-ಡಾ.ಎಚ್.ಕೆ ವೆಂಕಟೇಶ್

ಕುಂದಾಪುರ: ಸಮಾಜ ಸಾಧಕರೆನಿಸಿಕೊಂಡ ಅಂಬಿಗರ ಚೌಡಯ್ಯನ ಸುಧಾರಣೆಯ ನಿಲುವುಗಳಾದ ಅಸ್ಪ್ರಶ್ಯ, ಆಹಾರ ಪದ್ಧತಿ ಇವುಗಳಿಗೆ ಮಹತ್ವ ಕೊಡದೆ ಗುಣಕ್ಕೆ ಮಹತ್ವಕೊಡಬೇಕೆಂಬ ಅಂಬಿಗರ ಚೌಡಯ್ಯನ ನಿಲುವುಗಳು ಮತ್ತು ಕಾಲದ ಧಾರ್ಮಿಕ ಚಿಂತನೆಯನ್ನು ತನ್ನದೇ ಆದ ನೆಲೆಯಲ್ಲಿ ಚೌಡಯ್ಯ ಪ್ರಶ್ನಿಸಿದ ಬಗೆ ಹೀಗೆ ಹಲವು ಅಂಬಿಗರ ಚೌಡಯ್ಯನ ವಚನಗಳ ವಿಚಾರ ಧಾರೆಗಳನ್ನು ಪ್ರಸ್ತುತ ಸಂದರ್ಭಕ್ಕೆ ಸಮೀಕರಿಸಿ ೧೨ನೇ ಶತಮಾನದ ಸಮಾಜ ಸುಧಾರಕ ಅಂಬಿಗರ ಚೌಡಯ್ಯ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರಾದ ಡಾ| ಎಚ್.ಕೆ. ವೆಂಕಟೇಶ್ ಹೇಳಿದರು.

ಅವರು ಮಂಗಳೂರು ವಿಶ್ವವಿದ್ಯಾನಿಲಯ ಅಂಬಿಗರ ಚೌಡಯ್ಯ ಅಧ್ಯಯನ ಪೀಠ ಮತ್ತು ಕುಂದಾಪುರದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಅಂಬಿಗರ ಚೌಡಯ್ಯನ ವಚನಗಳಲ್ಲಿ ಸಾಮಾಜಿಕ ಚಿಂತನೆ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೊತ್ತಾಡಿ ಉಮೆಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ, ಅಂಬಿಗರ ಚೌಡಯ್ಯನ ವಿಚಾರ ಧಾರೆಗಳು ಪ್ರಸ್ತುತ ಸಾಮಾಜಿಕ ಸಂದರ್ಭಕ್ಕೆ ಅನಿವಾರ್ಯ ಎಂದರು.

ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕರಾದ ಪ್ರೊ| ಸೋಮಣ್ಣ ಪ್ರಾಸ್ತಾವಿಸಿ, ಕನ್ನಡ ವಿಭಾಗದ ಮುಖ್ಯಸ್ಥ ಹಾಗೂ ಉಪಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ಕನ್ನಡ ಸಂಘದ ಸಂಯೋಜಕಿ ಶ್ರೀಮತಿ ರೇಷ್ಮಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರವೀಣಾ ಮಹಾಬಲ ಪೂಜಾರಿ ವಂದಿಸಿದರು.

ವಿದ್ಯಾರ್ಥಿಗಳಾದ ಪ್ರತೀಕ್ಷಾ, ಅಭಿನಯ ಅನಿಸಿಕೆ ಹಂಚಿಕೊಂಡರು. ದೀಕ್ಷಾ ಪ್ರಾರ್ಥಿಸಿ, ಶಿವಾನಿ ಪಿ. ನಾಯ್ಕ್ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!