spot_img
Monday, April 13, 2026
spot_img

ಗುಂಡು ಪೂಜಾರಿ ಹರವರಿ ಅವರಿಗೆ ಕೃಷಿರತ್ನ ಪ್ರಶಸ್ತಿ

ಕುಂದಾಪುರ: ಜೆಸಿ‌ಐ ಚಿತ್ತೂರು ಮಾರಣಕಟ್ಟೆಯ ಸದಸ್ಯ ಗುಂಡು ಪೂಜಾರಿ ಅವರಿಗೆ ಪ್ರತಿಷ್ಠಿತ ವಲಯ 15ರ 2022ನೇ ಸಾಲಿನ ಕೃಷಿರತ್ನ ಪ್ರಶಸ್ತಿ ಪ್ರದಾನಿಸಿ ಗೌರವಿಸಲಾಯಿತು.

ಜೆಸಿ‌ಐ ಬೆಳ್ಮಣ್ಣು ಆಶ್ರಯದಲ್ಲಿ ಬೆಳ್ಮಣ್ಣಿನ ಮೂಹೂರ್ತ ಸಭಾಂಗಣದಲ್ಲಿ ನಡೆದ ಜೆಸಿ‌ಐ ವಲಯ 15ರ 2022ನೇ ಸಾಲಿನ ವ್ಯವಹಾರ ಸಮ್ಮೇಳನ ಸಂಕಲನ ಸಾಧಕರ ಸಭಾಂಗಣದಲ್ಲಿ ಉದ್ಯಮ, ಉದ್ಯೋಗ, ಕಲೆ, ಕೃಷಿ ಮತ್ತು ಸಮಾಜ ಸೇವೆ ಹೀಗೆ ಈ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಲವು ಜೆಸಿ‌ಐ ಸದಸ್ಯರಿಗೆ ಸಾಧನಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಜೆಸಿ‌ಐ ಚಿತ್ತೂರು ಮಾರಣಕಟ್ಟೆಯ ಸದಸ್ಯ ಗುಂಡು ಪೂಜಾರಿ ಅವರು ಕೃಷಿ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕೃಷಿರತ್ನ ಪ್ರಶಸ್ತಿ-2022 ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಜೆಸಿ‌ಐ ವಲಯ 15ರ ವಲಯಾಧ್ಯಕ್ಷ ಸೆನೆಟರ್ ರಾಯನ್ ಉದಯ ಕ್ರಾಸ್ತಾ, ವಲಯ ಉಪಾಧ್ಯಕ್ಷ ವಿಜಯ ನರಸಿಂಹ ಐತಾಳ್, ಕುಂದಾಪುರ ವ್ಯವಹಾರ ವಿಭಾಗದ ವಲಯ ನಿರ್ದೇಶಕ ಸರ್ವಜ್ಞ ತಂತ್ರಿ, ಜೆಸಿ‌ಐ ಚಿತ್ತೂರು ಮಾರಣಕಟ್ಟೆಯ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

ಗುಂಡು ಪೂಜಾರಿಯವರು ವಂಡ್ಸೆ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದವರು. ಸಾಮಾಜಿಕ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ಗುರುತಿಸಿಕೊಂಡವರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!