Sunday, September 8, 2024

ಮಣಿಪಾಲ: ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ  ಆರೈಕೆ ದಿನಾಚರಣೆ

ಮಣಿಪಾಲ: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದಲ್ಲಿ   8 ನೇ ಅಕ್ಟೋಬರ್ 2022 ರಂದು ನಡೆದ  ವಿಶ್ವ ವಿಶ್ರಾಂತಿ ಮತ್ತು ಪ್ರಶಾಮಕ  ಆರೈಕೆ ದಿನಾಚರಣೆ

ಕಾರ್ಯಕ್ರಮದಲ್ಲಿ   ತಮಿಳುನಾಡು ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ  ಆಯುಕ್ತರಾದ ಡಾ ಡೇಜ್ ಅಹಮದ್ IAS ಅವರು ಮುಖ್ಯ ಅತಿಥಿಯಾಗಿದ್ದರು.  ಮಾಹೆ ಮಣಿಪಾಲದ  ಸಹ ಕುಲಾಧಿಪತಿ  ಡಾ.ಎಚ್.ಎಸ್.ಬಲ್ಲಾಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಗೌರವ ಅತಿಥಿಗಳಾಗಿ ಕೆಎಂಸಿ ಮಂಗಳೂರಿನ ಅಸೋಸಿಯೇಟ್ ಡೀನ್ ಡಾ.ಬಿ.ಸುರೇಶ್ ಕುಮಾರ್ ಶೆಟ್ಟಿ ಆಗಮಿಸಿದ್ದರು. ಮಾಹೆ ಮಣಿಪಾಲದ  ಬೋಧನಾ  ಆಸ್ಪತ್ರೆಗಳ ಮುಖ್ಯ ನಿರ್ವಹಣಾಧಿಕಾರಿ ಡಾ.ಆನಂದ್ ವೇಣುಗೋಪಾಲ್, ಕಸ್ತೂರ್ಬಾ  ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಉಪಶಾಮಕ ಔಷಧ  ಮತ್ತು ಸಹಾಯಕ ಆರೈಕೆ ವಿಭಾಗದ ಮುಖ್ಯಸ್ಥ ಡಾ.ನವೀನ್ ಎಸ್.ಸಾಲಿನ್ಸ್ ಹಾಗೂ ಮಾಹೆ ಮಣಿಪಾಲದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಬ್ಲೂ ಮ್ಯಾಪಲ್  ನ 2 ನೇ ಆವೃತ್ತಿ – ಚಿಕಿತ್ಸೆಯ ಮಿತಿ ಮತ್ತು ಜೀವನ ಅಂತ್ಯದ ಆರೈಕೆ ಕುರಿತಾದ  ಕಿರುಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದ ಡಾ ಡೇಜ್ ಅಹಮದ್ ಐಎಎಸ್ ಅವರು,  ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳ ಮೂಲಕ ಉಪಶಾಮಕ ಆರೈಕೆ ಸಾಮಾನ್ಯ ಜನರಿಗೆ ಮತ್ತು ಸಮುದಾಯಗಳಿಗೆ ತಲುಪಬೇಕು. ಭಾರತದಲ್ಲಿ ಉಪಶಾಮಕ ಆರೈಕೆಗೆ ಹೆಚ್ಚಿನ ಬೇಡಿಕೆಯಿದೆ,  ಆದರೆ ಅರಿವು ಮತ್ತು ಜಾಗೃತಿ  ಕೊರತೆಯಿಂದಾಗಿ  ಮತ್ತು  ಪ್ರಶಾಮಕ ಆರೈಕೆಯು ಸಮುದಾಯಗಳನ್ನು ತಲುಪಲು ವಿಫಲವಾಗಿದೆ.  ಉಪಶಾಮಕ ಆರೈಕೆ ಜನರಿಗೆ ಸಿಗಲು  ಸುಲಭಗೊಳಿಸಲು ಜಿಲ್ಲಾಡಳಿತ ಮತ್ತು ಆಸ್ಪತ್ರೆಗಳು ಹೇಗೆ ಸಹಕರಿಸಬಹುದು ಎಂದು ಅವರು ಪ್ರಸ್ತಾಪಿಸಿದರು.

ಡಾ ಬಿ ಸುರೇಶ್ ಕುಮಾರ್ ಶೆಟ್ಟಿ ಮಾತನಾಡಿ, “ಮಣಿಪಾಲ ಸಮಗ್ರ ಕ್ಯಾನ್ಸರ್ ಕೇರ್ ಸೆಂಟರ್  ಬಹಳಷ್ಟು ರೋಗಿಗಳಿಗೆ ತಲುಪುವುದರ ಮೂಲಕ  ಆರೈಕಾ ಕ್ಷೇತ್ರದಲ್ಲಿ ವಿಕಸನಗೊಂಡಿದೆ ಮತ್ತು ಎತ್ತರಕ್ಕೆ ಬೆಳೆದಿದೆ.  ಪ್ರಸ್ತುತ ಸಮಗ್ರ ವ್ಯಕ್ತಿ-ಕೇಂದ್ರಿತ ಆರೈಕೆಯನ್ನು ನೀಡುವ ಮೂಲಕ ಇತರ ಕೇಂದ್ರಗಳಿಂದ ತನ್ನನ್ನು ತಾನು ಪ್ರತ್ಯೇಕಿಸಿಕೊಂಡಿದೆ, ಇದು ವಿಶೇಷ  ತರಬೇತಿ ಪಡೆದ ತಂಡದಿಂದ ಸಾಧ್ಯವಾಗಿದೆ ಎಂದರು. 

ಅಧ್ಯಕ್ಷೀಯ ಭಾಷಣದಲ್ಲಿ, ಡಾ ಎಚ್ ಎಸ್ ಬಲ್ಲಾಳ್ ಅವರು, “ದಾದಿಯರ ಉತ್ತಮ ಶುಶ್ರೂಷೆಯು ರೋಗಿಗಳ ಆರೈಕೆಯಲ್ಲಿ ದೊಡ್ಡ ಬದಲಾವಣೆಯನ್ನು ಮಾಡುತ್ತದೆ ಏಕೆಂದರೆ ಅವರು ರೋಗಿಗಳೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ.  ಇದು  ಜೀವನದ ಗುಣಮಟ್ಟ ಮತ್ತು ಸಾವಿನ ಘನತೆ ಮತ್ತು ಪ್ರತಿ ಮನುಷ್ಯನ ಮೇಲೆ ನೇರವಾಗಿ ಅಥವಾ ಪರೋಕ್ಷವಾಗಿ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ಒತ್ತಿ ಹೇಳಿದರು. ಉಪಶಾಮಕ ಆರೈಕೆ ಸೇವೆಯ ಅರಿವು ರಾಜ್ಯ ಮತ್ತು ದೇಶದಲ್ಲಿ ಹೆಚ್ಚಬೇಕು  ಎಂದು ಅವರು ಪುನರುಚ್ಚರಿಸಿದರು”.

ನಾಲ್ವರು ಕುಟುಂಬ ಸದಸ್ಯರು ತಮ್ಮ ಪ್ರೀತಿಪಾತ್ರರ ಉಪಶಾಮಕ ಆರೈಕೆಯ ಪ್ರಯಾಣದ ಅನುಭವಗಳನ್ನು ಹಂಚಿಕೊಂಡರು. ಡಾ ಆನಂದ್ ವೇಣುಗೋಪಾಲ್ ಸ್ವಾಗತಿಸಿ, ಡಾ ಅವಿನಾಶ್ ಶೆಟ್ಟಿ ವಂದಿಸಿದರು. ಡಾ. ಕೃತಿಕಾ ರಾವ್, ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!