Sunday, September 8, 2024

ಅ.9ಕ್ಕೆ ಕುಂದಾಪುರದಲ್ಲಿ ‘ರಂಗಸ್ಥಳ ಪೋಷಕ ಕಲಾವಿದ ಪುರಸ್ಕಾರ ಪ್ರದಾನ’, ಯಕ್ಷಗಾನ ಪ್ರದರ್ಶನ

ಕುಂದಾಪುರ: ರಂಗಸ್ಥಳ ಫೌಂಡೇಷನ್ ಟ್ರಸ್ಟ್ ರಿ., ಉಳ್ಳೂರು-74, ಕುಂದಾಪುರ ತಾಲೂಕು ಇವರು ಕೊಡಮಾಡುವ ರಂಗಸ್ಥಳ ಪೋಷಕ ಕಲಾವಿದ ಪುರಸ್ಕಾರ-2022 ಕೇಂಜಿ ರಘುರಾಮ ಗೌಡರಿಗೆ ಲಭಿಸಿದೆ.

ಅಕ್ಟೋಬರ್ 09 ಭಾನುವಾರ ಮಧ್ಯಾಹ್ನ 2 ಘಂಟೆಗೆ ಕುಂದಾಪುರದ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ಸಂಸ್ಥೆಯ ವಾರ್ಷಿಕ ಸಡಗರ, ಹಿರಿಯರ ನೆನಪು, ಕಾರುಣ್ಯನಿಧಿ ಸಮರ್ಪಣೆ ಕಾರ್ಯಕ್ರಮದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದು.
ಸಮಾರಂಭವನ್ನು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಉದ್ಘಾಟಿಸಲಿದ್ದಾರೆ.

‘ಕಾರುಣ್ಯ ನಿಧಿ’ಯನ್ನು ಮಾರಣಕಟ್ಟೆ ಕೃಷ್ಣಮೂರ್ತಿ ಮಂಜರು ಸಮರ್ಪಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಿ. ಗಣೇಶ ಕಿಣಿ, ಸುಬ್ರಮಣ್ಯ ಧಾರೇಶ್ವರ, ಕಿಶೋರ್ ಕುಮಾರ್ ಕುಂದಾಪುರ, ವಸಂತ ಗಿಳಿಯಾರ್, ಮಾಜಿ ಜಿ. ಪಂ. ಸದಸ್ಯರಾದ ರೋಹಿತ್ ಕುಮಾರ್ ಶೆಟ್ಟಿ, ವಕೀಲರಾದ ಬಿ.ಎಸ್. ಕಾಳಾವರ್ಕರ್, ಉದಯ ಕುಮಾರ್ ಶೆಟ್ಟಿ ಪಡುಕೆರೆರವರು ಭಾಗವಹಿಸಲಿದ್ದಾರೆ.

ಯಕ್ಷಗಾನದ ಔನತ್ಯಕ್ಕಾಗಿ ಬದುಕು ಸವೆಸಿ ಅಗಲಿದ ಹಿರಿಯ ಕಲಾವಿದರನ್ನು ನೆನಸಿಕೊಳ್ಳುವ ಹಿರಿಯರ ನೆನಪು (ಹಿರಿಯ ಕಲಾವಿದರ ಸಂಸ್ಮರಣೆ) ಸ್ಮರಿಸಿಕೊಳ್ಳುವ ಹಿರಿಯ ಕಲಾವಿದ ದಿ.ಕೋಟ ವೈಕುಂಠ ನಾಯ್ಕ್, ಅಶಕ್ತ ಕಲಾವಿದ ವಿಜಯ ನಾಯ್ಕ್, ನೀರ್ಜೆಡ್ಡು ರವರಿಗೆ ಕಾರುಣ್ಯ ನಿಧಿ ಸಮರ್ಪಣೆ, ಕೇಂಜಿ ರಘುರಾಮ ಗೌಡರವರಿಗೆ ರಂಗಸ್ಥಳ ಪೋಷಕ ಕಲಾವಿದ ಪುರಸ್ಕಾರ-2022 ನೀಡಲಾಗುವುದು.

ನಂತರ ಬಯಲಾಟದ ಅಗ್ರಮಾನ್ಯ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಬಯಲಾಟ ಸುಭದ್ರಾ ಕಲ್ಯಾಣ ನಡೆಯಲಿದೆ. ಕಲಾವಿದರು: ಹಿಮ್ಮೇಳದಲ್ಲಿ, ನಗರ ಅಣ್ಣಪ್ಪ ಶೆಟ್ಟಿ, ನಾಗೇಂದ್ರ ಅಡಿಗ ವಡ್ಡರ್ಸೆ, ವಿಜಯ ನಾಯ್ಕ, ಹಳ್ಳಾಡಿ ಜನಾರ್ದನ ಆಚಾರ್ಯ, ಮುಮ್ಮೇಳದಲ್ಲಿ ತುಂಬ್ರಿ ಭಾಸ್ಕರ, ವಿಶ್ವನಾಥ ಹೆನ್ನಾಬೈಲು, ಮಾಧವ ನಾಗೂರು, ಶೇಖರ ಶೆಟ್ಟಿ ಎಳಬೇರು, ಹಕ್ಲಾಡಿ ರವೀಂದ್ರ ಶೆಟ್ಟಿ, ಅರೆಹೊಳೆ ಸಂಜೀವ ಶೆಟ್ಟಿ, ಸುನೀಲ್ ಹೊಲಾಡು ಇನ್ನಿತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!