spot_img
Sunday, April 12, 2026
spot_img

ಬೆಂಬಲ ಬೆಲೆಗನುಗುಣವಾಗಿ ಕೂಡಲೆ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು-ರಾಜೀವ ಪಡುಕೋಣೆ

ಬೈಂದೂರು: ಕರಾವಳಿ ಜಿಲ್ಲೆಗಳಲ್ಲಿ ಭತ್ತದ ಫಸಲು ಕಟಾವು ಅಕ್ಟೋಬರ್ ತಿಂಗಳಲ್ಲಿ ಸಂಪೂರ್ಣಗೊಳ್ಳುತ್ತಿರುವುದರಿಂದ ಸರಕಾರ ನಿಗದಿಪಡಿಸಿದ ಭತ್ತದ ಬೆಂಬಲ ಬೆಲೆಗೆ ಅನುಗುಣವಾಗಿ ಈ ಕೂಡಲೆ ಕರಾವಳಿ ಜಿಲ್ಲೆಗಳಲ್ಲಿ ಖರೀದಿ ಕೇಂದ್ರ ಆರಂಭಿಸಬೇಕು, ತೆಂಗಿನ ಬೆಳೆಗೆ ಬೆಲೆ ಕುಸಿದ ಕಾರಣ ಸರಕಾರ ಕನಿಷ್ಟ ಬೆಂಬಲ ಬೆಲೆ ನಿಗದಿ ಪಡಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಬೈಂದೂರು ತಾಲೂಕು ಸಂಚಾಲಕ ರಾಜೀವ ಪಡುಕೋಣೆ ರಾಜ್ಯ ಸರಕಾರವನ್ನು ಒತ್ತಾಯಿಸಿದರು.

ಅಖಿಲ ಭಾರತ ಕಿಸಾನ್ ಸಭಾ (AIKS) ಗೆ ಸಂಯೋಜಿತ ಕರ್ನಾಟಕ ಪ್ರಾಂತ ರೈತ ಸಂಘ (KPRS) ದ ನೇತೃತ್ವದಲ್ಲಿ ರೈತರು ಬೈಂದೂರು ತಹಶೀಲ್ದಾರ್ ಕಚೇರಿ ಎದುರು ಆಯೋಜಿಸಿದ ಬೃಹತ್ ಪ್ರತಿಭಟನಾ ಸಬೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಬಳಿಕ ಬೈಂದೂರು ತಹಶೀಲ್ದಾರ್ ಶ್ರೀಕಾಂತ. ಎಸ್.ಹೆಗ್ಡೆ ಇವರ ಮೂಲಕ ಹಕ್ಕೊತ್ತಾಯದ ಮನವಿಯನ್ನು ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಬಾಲಕಷ್ಣ ಶೆಟ್ಟಿ, ಗಣೇಶ ತೊಂಡೆಮಕ್ಕಿ, ರೊನಾಲ್ಡ್, ರಾಜೇಶ್ ಕ್ವಾಡ್ರಸ್, ಶ್ರೀಧರ ಉಪ್ಪುಂದ, ವಿಜಯ ಕೋಯಾನಗರ, ಮಂಜು ಪೂಜಾರಿ ಪಡುವರಿ, ನಾಗರತ್ನ ನಾಡ, ಶೋಭ, ನಾಗರತ್ನ ಪಡುವರಿ, ರಾಜು ದೇವಾಡಿಗ, ರಮೇಶ ಗುಲ್ವಾಡಿ, ವೆಂಕಟೇಶ ಕೋಣಿ ಅಣ್ಣಪ್ಪ ದೇವಾಡಿಗ, ಮಣಿಕಂಠ ಬೈಂದೂರು ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!