Sunday, September 8, 2024

ದೇಹ ಅಳಿದ ಮೇಲೆ ನೆನಪು ಮಾತ್ರ ಶಾಶ್ವತ-ತೆಕ್ಕಟ್ಟೆ ನರ್ಮದಾ ಪ್ರಭು

ತೆಕ್ಕಟ್ಟೆ: ಸಣ್ಣ ಸಣ್ಣ ಮಕ್ಕಳು ಅಂಗಡಿಯ ಪರಿಸರಕ್ಕೆ ಬಂದರೆ ಮುದ್ದಿಸುವ ರೀತಿ, ಪರಿಸರದವರೊಂದಿಗಿನ ಪ್ರೀತಿ-ವಿಶ್ವಾಸ ಎನ್ನುವುದು ಕೃಷ್ಣ ಮೆಂಡನ್‌ರನ್ನು ಕಳೆದು ಕೊಂಡ ಈ ಸಂದರ್ಭ ಸಂಸ್ಮರಣೆಯ ನೆಪದಲ್ಲಿ ನಮ್ಮೆಲ್ಲರ ಕಣ್ಣು ಇಂದು ತೇವವಾಯಿತು. ಸ್ವಲ್ಪ ದಿನ ಈ ಭುವಿಯಲ್ಲಿ ಇದ್ದು ಹೋಗಲು ಬಂದ ಅತಿಥಿಗಳು ನಾವು. ನಮ್ಮ ಬಾಳ್ವೆಯನ್ನು ಪ್ರೀತಿ ವಿಶ್ವಾಸದಿಂದ ಕಳೆಯಬೇಕು. ಬದುಕು ಶಾಶ್ವತವಲ್ಲ. ಅಳಿದ ಕಾಲದ ನಂತರದ ನೆನಪು ಶಾಶ್ವತ ಎಂದು ಸಾಹಿತಿ ತೆಕ್ಕಟ್ಟೆ ನರ್ಮದಾ ಪ್ರಭು ಅತಿಥಿಗಳಾಗಿ ಅಭಿಪ್ರಾಯಪಟ್ಟರು.

ಸೆಪ್ಟೆಂಬರ್ 15ರಂದು ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಇವರ ಸಂಯೋಜನೆಯಲ್ಲಿ ಕೃಷ್ಣ ಮೆಂಡನ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ನರ್ಮದಾ ಪ್ರಭು ಮಾತನ್ನಾಡಿದರು.

ಪರಿಸರದಲ್ಲಿ ಪ್ರೀತಿಯ ಸಂಬಂಧದಿಂದ ಬೆಳೆದು ಬೆಳಕಾಗಿ ಅಕಾಲಿಕವಾಗಿ ಅಳಿದು ಉಳಿದವರು ಕೃಷ್ಣ ಮೆಂಡನ್. ಸಮಾಜದಲ್ಲಿ ಎಲೆಯ ಮರೆಯಾಗಿ ಅಳಿಲು ಸೇವೆ ಮಾಡುತ್ತಾ ಸರಳ ಜೀವನದಲ್ಲಿಯೂ ಹೃದಯ ಶ್ರೀಮಂತಿಕೆ ಮೆರೆದವರು ಎಂದು ಸಂಸ್ಮರಣಾ ಮಾತುಗಳಲ್ಲಿ ಶ್ರೀ ಕೈಲಾಸ ಕಲಾ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಹೆರಿಯ ಮಾಸ್ಟರ್ ಹೇಳಿದರು.

ಕೃಷ್ಣ ಮೆಂಡನ್ ಪುತ್ರ ರಂಜಿತ್ ಕುಮಾರ್ ಮಾತನ್ನಾಡಿ ತನ್ನ ತಂದೆಯ ಸಮಯಪಾಲನೆ, ಶಿಸ್ತು ಬದ್ಧ ಜೀವನವನ್ನು ಬಳಗಕ್ಕೆ ಮಾದರಿಯಾಗಿಸಿ, ನೆನಪಲ್ಲಿ ಉಳಿದವರು ಎಂದರು.

ದೇಗುಲದ ಆಡಳಿತ ನಿರ್ದೇಶಕ ರಾಮಮೂರ್ತಿ ಪುರಾಣಿಕ್, ಪ್ರಧಾನ ಅರ್ಚಕ ಜನಾರ್ಧನ್ ಐತಾಳ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಸೀತಾರಾಮ ಶೆಟ್ಟಿ ಮಲ್ಯಾಡಿ ಉಪಸ್ಥಿತರಿದ್ದರು.

ಪ್ರಶಾಂತ್ ಮಲ್ಯಾಡಿ ಕಾರ್ಯಕ್ರಮ ನಿರೂಪಿಸಿ, ಸುಹಾಸ ಕರಬ ವಂದಿಸಿದರು. ಬಳಿಕ ಸೋಣೆ ಆರತಿ ಪ್ರಯುಕ್ತ ಕೈಗೊಂಡ ಕಾರ್ಯಕ್ರಮದಲ್ಲಿ ಅಪೂರ್ವ ಮೆಲೋಡೀಸ್ ತೆಕ್ಕಟ್ಟೆ ಬಳಗದವರಿಂದ ಭಕ್ತಿ ರಸಮಂಜರಿ ಕಾರ್ಯಕ್ರಮ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!