Sunday, September 8, 2024

ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಸಾಧನೆಗೈದ ಕುಂದಾಪುರದ ಪ್ರಭಾವ್ ಶೆಟ್ಟಿ

ಕುಂದಾಪುರ: 2021-22 ನೇ ಸಾಲಿನಲ್ಲಿ ನಡೆದ ಪಿಯು ಬೋರ್ಡ್ ಎಕ್ಸಾಮ್‌ನಲ್ಲಿ 97% ಅಂಕ ಪಡೆದ ಕುಂದಾಪುರದ ಪ್ರಭಾವ್ ಶೆಟ್ಟಿ ಅವರು ಕರ್ನಾಟಕ ಸಿ‌ಇಟಿ (KCET) ಯಲ್ಲಿ 326ನೇ ರ್‍ಯಾಂಕ್ ಪಡೆದಿದ್ದು, ನ್ಯಾಷನಲ್ ಲೆವೆಲ್‌ನಲ್ಲಿ ನಡೆಯಲ್ಪಡುವ ಎ‌ಇ‌ಇ ಮೈನ್ಸ್‌ನಲ್ಲಿ 99.52 ಪರ್ಸೆಂಟೇಜ್ ಪಡೆಯುವುದರೊಂದಿಗೆ ವಿವಿಧ NIT ಗಳಲ್ಲಿ ಅರ್ಹತೆ ಪಡೆದುಕೊಂಡಿದ್ದಾರೆ. ಎ‌ಇ‌ಇ ಎಡ್ವಾನ್ಸ್‌ನಲ್ಲಿ ದೇಶದಲ್ಲೇ 3178 ರ್‍ಯಾಂಕ್ ಗಳಿಸಿ ವಿವಿಧ ಐ‌ಐಟಿ (IIT) ಗಳಲ್ಲೂ, ಐಸರ್ (IISER) ಗಳಲ್ಲೂ ಅರ್ಹತೆ ಪಡೆದು ಅಪೂರ್ವ ಸಾಧನೆ ತೋರಿದ್ದಾರೆ

ರಾಷ್ಟ್ರೀಯ ಮಟ್ಟದಲ್ಲಿ ನಡೆಯಲ್ಪಡುವ UGEE ಎಕ್ಸಾಮ್‌ನಲ್ಲಿ ಆಲ್ ಇಂಡಿಯಾ ರ್‍ಯಾಂಕಿಂಗ್ 102 (AIR 102) ಪಡೆಯುವುದರೊಂದಿಗೆ ಹೈದರಾಬಾದ್‌ನ ಪ್ರತಿಷ್ಠಿತ ಟ್ರಿಪಲ್ ಐಟಿ (IIIT) ಗೆ ಪ್ರವೇಶಾರ್ಹತೆ ಪಡೆದುದಲ್ಲದೇ ಬೆಂಗಳೂರಿನ ಟ್ರಿಪಲ್ ಐಟಿಗೂ ಅರ್ಹತೆ ಗಳಿಸಿದ್ದಾರೆ.

ಇವರು ಮಂಗಳೂರಿನ ಅ‌ಈಂಐ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಅನೇಕ ಕಾಂಪಿಟೇಟಿವ್ ಎಕ್ಸಾಮ್‌ಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಅರ್ಹತೆ ಗಳಿಸಿರುತ್ತಾರೆ. ನ್ಯಾಶನಲ್ ಟ್ಯಾಲೆಂಟ್ ಸರ್ಚ್ ಪರೀಕ್ಷೆ (NTSE) ಯಲ್ಲಿ ದೇಶಮಟ್ಟದಲ್ಲಿ ಅರ್ಹತೆ ಪಡೆದುದಲ್ಲದೆ ಕಿಶೋರ ವಿಜ್ಞಾನ ಪ್ರೋತ್ಸಾಹನ ಯೋಜನೆ (KVPY) ಯಲ್ಲಿ 3330 ರ್‍ಯಾಂಕ್ ಗಳಿಸಿದ್ದಾರೆ. ರಾಜ್ಯ ಮಟ್ಟದ ಕ್ವಿಜ್ ಕಾಂಪಿಟೇಶನ್‌ಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುತ್ತಾರೆ. ತೈಲವರ್ಣ ಜಲವರ್ಣಗಳಲ್ಲಿ ನೈಪುಣ್ಯತೆ ಪಡೆದು ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಮಾಡಿದ ಇವರದು ಬಹುಮುಖ ಪ್ರತಿಭೆ.

ಕುಂದಾಪುರ ರೋಟರಿಯ ಪೂರ್ವಾಧ್ಯಕ್ಷರು ಹಾಗೂ ಭಾರತೀಯ ಜೀವ ವಿಮಾ ನಿಗಮದ ಮುಖ್ಯ ಸಲಹೆಗಾರರು, MDRT ಸದಸ್ಯರೂ ಆಗಿರುವ ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ ಹಾಗು ಕೋಣಿಯ ಮಾತಾ ಮಾಂಟೆಸ್ಸೋರಿಯ ಪ್ರಾಂಶುಪಾಲೆ ಭಾರತಿ ಪ್ರಕಾಶ್ ಶೆಟ್ಟಿಯವರ ಪುತ್ರ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!