Sunday, September 8, 2024

ಗಂಗೊಳ್ಳಿ: ಸಂಜೀವಿನಿ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿಯ ಚೆಕ್ ವಿತರಣೆ

ಗಂಗೊಳ್ಳಿ : ಸಂಜೀವಿನಿ ಸಂಘಗಳಿಗೆ ಸರಕಾರದಿಂದ ಬರುವ ಅನುದಾನವನ್ನು ಸಮಪರ್ಕವಾಗಿ ಜೀವನೋಪಾಯಕ್ಕಾಗಿ ಬಳಸಿಕೊಂಡು ಜೀವನದಲ್ಲಿ ಸ್ವಾವಲಂಬಿಗಳಾಗಲು ಪ್ರಯತ್ನಿಸಬೇಕು. ಪಡೆದುಕೊಂಡ ಸಾಲವನ್ನು ಕ್ಲಪ್ತ ಸಮಯದಲ್ಲಿ ಮರುಪಾವತಿಸಿ ಇತರರಿಗೆ ಸಹಕಾರಿಗಳಾಗಬೇಕು. ಸಂಜೀವಿನಿ ಸಂಘದ ಸದಸ್ಯರು ಗ್ರಾಮದ ಅಭಿವೃದ್ಧಿಗೂ ಕೈಜೋಡಿಸಬೇಕಿದ್ದು ಗ್ರಾಮದ ಪ್ರತಿಯೊಂದೂ ಕಾರ್ಯಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಹೇಳಿದರು.

ಉಡುಪಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕುಂದಾಪುರ, ಗಂಗೋತ್ರಿ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಗಂಗೊಳ್ಳಿ ಹಾಗೂ ಗ್ರಾಮ ಪಂಚಾಯತ್ ಗಂಗೊಳ್ಳಿ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಸಂಜೀವಿನಿ ಸಂಘಗಳಿಗೆ ಸಮುದಾಯ ಬಂಡವಾಳ ನಿಧಿಯ ಚೆಕ್‌ನ್ನು ಬುಧವಾರ ವಿತರಿಸಿ ಅವರು ಮಾತನಾಡಿದರು.

ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ಗಂಗೊಳ್ಳಿ ಗ್ರಾಮದ ಸುಮಾರು 8 ಸಂಜೀವಿನಿ ಸಂಘಗಳಿಗೆ 75.50 ಲಕ್ಷ ಸಮುದಾಯ ಬಂಡವಾಳ ವಿತರಿಸಲಾಯಿತು. ಒಕ್ಕೂಟದ ಅಧ್ಯಕ್ಷೆ ಕಮಲಾ ಖಾರ್ವಿ, ಕಾರ್ಯದರ್ಶಿ ಶೈಲಜಾ ಪೂಜಾರಿ, ಎಂಬಿಕೆ ಶಾಂತಾ, ಬ್ಯಾಂಕ್ ಸಖಿ ರೇಖಾ, ಎಲ್‌ಸಿ‌ಆರ್‌ಪಿ ಅನಿತಾ, ಪೂರ್ಣಿಮಾ ಖಾರ್ವಿ, ಸವಿತಾ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!