Sunday, September 8, 2024

ಬೀಜಾಡಿ: ಶಿಕ್ಷಕ ದಿನಾಚರಣೆ, ಗೌರವಾರ್ಪಣೆ

ಕುಂದಾಪುರ: ಶಿಕ್ಷಕರು ವಿದ್ಯಾರ್ಥಿಗಳನ್ನು ಆದರ್ಶ ಪ್ರಜೆಗಳಾಗಿ ರೂಪಿಸುತ್ತಾರೆ. ಭವ್ಯ ಸಮಾಜವನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಶಿಕ್ಷಕರು ಸಮಾಜದ ಆಸ್ತಿ ಎಂದು ರೋಟರಿ ಸಮುದಾಯ ದಳದ ವಲಯ 1ರ ಸಂಯೋಜಕ ಡಾ.ರವಿಕಿರಣ ಹೇಳಿದರು.

ಅವರು ಬುಧವಾರ ರಜತ ಮಹೋತ್ಸವದ ಸಂಭ್ರಮದಲ್ಲಿರುವ ಬೀಜಾಡಿ ಗೋಪಾಡಿ ಮಿತ್ರ ಸಂಗಮದ ಆಶ್ರಯದಲ್ಲಿ ಬೀಜಾಡಿ ರೋಟರಿ ಸಮುದಾಯ ದಳ, ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್‌ನ ಸಹಯೋಗದಲ್ಲಿ ಬೀಜಾಡಿ ಮಿತ್ರಸೌಧದಲ್ಲಿ ನಡೆದ ಶಿಕ್ಷಕ ದಿಣಾಚರಣೆ-ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಗೌರವಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್ ಅಧ್ಯಕ್ಷ ಕೆ.ಎಸ್ ಮಂಜುನಾಥ್ ವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಾದ ಆನಂದ ಮಡಿವಾಳ, ಶ್ರೀಮತಿ ಉಪಾಧ್ಯ, ನಳಿನಿ ದೊಡ್ಮನೆ, ಜತೆಯಲ್ಲಿ ಶಿಕ್ಷಕರಾದ ಕೆ.ಎಸ್.ಮಂಜುನಾಥ, ಚಂದ್ರಶೇಖರ ಬೀಜಾಡಿ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನಿತರ ಪರವಾಗಿ ಆನಂದ ಮಡಿವಾಳ, ಶ್ರೀಮತಿ ಉಪಾಧ್ಯ ಮಾತನಾಡಿದರು. ಸನ್ಮಾನಿತರನ್ನು ಬೀಜಾಡಿ ಗ್ರಾಮ ಪಂಚಾಯಿತಿ ಸದಸ್ಯ ಚಂದ್ರ ಬಿ.ಎನ್ ಪರಿಚಯಿಸಿದರು.

ವೇದಿಕೆಯಲ್ಲಿ ರೋಟರಿ ಕ್ಲಬ್ ಕುಂದಾಪುರ ರಿವರ್‌ಸೈಡ್‌ನ ಕಾರ್ಯದರ್ಶಿ ಉಲ್ಲಾಸ್ ಕ್ರಾಸ್ತಾ, ರೋಟರಿ ಸಮುದಾಯ ದಳದ ಅಧ್ಯಕ್ಷ ನಾಗರಾಜ ಬೀಜಾಡಿ, ಕಾರ್ಯದರ್ಶಿ ಪ್ರದೀಪ್ ದೇವಾಡಿಗ, ನಿಯೋಜಿತ ಅಧ್ಯಕ್ಷ ನಾಗರಾಜ ಬಿ.ಜಿ., ನಿಯೋಜಿತ ಕಾರ್ಯದರ್ಶಿ ಮಹೇಶ್ ಮೊಗವೀರ ಉಪಸ್ಥಿತರಿದ್ದರು.

ಗ್ರಾಮ ಪಂಚಾಯಿತಿ ಸದಸ್ಯ ಬಿ.ವಾದಿರಾಜ ಹೇಬ್ಬಾರ್ ಸ್ವಾಗತಿಸಿದರು. ಮಿತ್ರ ಸಂಗಮದ ಅಧ್ಯಕ್ಷ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರಾಜೇಶ್ ಆಚಾರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!