spot_img
Sunday, April 12, 2026
spot_img

ಶಂಕರನಾರಾಯಣದಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಉದ್ಘಾಟನೆ

ಶಂಕರನಾರಾಯಣ: ಶಂಕರನಾರಾಯಣದ ಕಾಲೇಜು ರಸ್ತೆಯ ಆಧ್ಯಾ ಕಾಂಪ್ಲೆಕ್ಸ್ ನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಶಾಖೆ ಬುಧವಾರ ಉದ್ಘಾಟನೆಗೊಂಡಿತು.

ಭಾರತೀಯ ಸ್ಟೇಟ್ ಬ್ಯಾಂಕಿನ ಬೆಂಗಳೂರು ವೃತ್ತದ ಮಹಾ ಪ್ರಬಂಧಕ (ಸಿ.ಜಿ.ಎಂ) ನಂದ ಕಿಶೋರ್ ದೀಪ ಬೆಳಗುವ ಮೂಲಕ ಶಾಖೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಬೆಂಗಳೂರು ಅನುರಾಗ್ ಜೋಶಿ, ಡೆಪ್ಯೂಟಿ ಜನರಲ್ ಮೇನೇಜರ್ ಜೋಬಿ ಜೋಸ್, ರೀಜನಲ್ ಮ್ಯಾನೇಜರ್ ಸುನಿಲ್.ಆರ್. ಪರಂಜಪೆ, ಶಾಖಾಧಿಕಾರಿ ಉಮೇಶ್, ಆಫೀಸರ್ ಪ್ರವೀಣ್ ಆಚಾರ್, ಕಟ್ಟಡದ ಮಾಲೀಕ ಉದಯ ಶೆಟ್ಟಿ ಉಪಸ್ಥಿತರಿದ್ದರು.

ಕಟ್ಟಡದ ಮಾಲೀಕ ಉದಯ ಶೆಟ್ಟಿ ದಂಪತಿಗಳನ್ನು ಹಾಗೂ ಇಂಜಿನೀರ್ ಪ್ರವೀಣ್ ಶೆಟ್ಟಿ ಅವರನ್ನು ಬ್ಯಾಂಕಿನ ವತಿಯಿಂದ ಸನ್ಮಾನಿಸಲಾಯಿತು.

ಶ್ರೀ ಶಂಕರನಾರಾಯಣ ದೇಗುಲ ಮೊಕ್ತೇಸರ ಲಕ್ಷ್ಮಿ ನಾರಾಯಣ ಉಡುಪ, ವಿಶ್ವನಾಥ ಶೆಟ್ಟಿ, ಶಂಕರನಾರಾಯಣ ತಾ.ಹೋ.ಸಮಿತಿ ಸಂಚಾಲಕ ಚಿಟ್ಟೆ ರಾಜಗೋಪಾಲ ಹೆಗ್ಡೆ, ಹೋರಾಟ ಸಮಿತಿ ಅಧ್ಯಕ್ಷ ಆವರ್ಸೆ ರತ್ನಾಕರ ಶೆಟ್ಟಿ, ರವೀಂದ್ರನಾಥ್ ಶೆಟ್ಟಿ, ಸುಬ್ರಾಯ ಕಿಣಿ, ಚಂದ್ರಹಾಸ ಹೆಗ್ಡೆ, ದೇವೇಂದ್ರ ನಾಯಕ, ದಿನೇಶ್ ಶೆಟ್ಟಿ, ಶ್ರೀಕಾಂತ್ ಉಡುಪ, ಬಲಗದ್ದೆ ಉದಾಯಕುಮಾರ ಶೆಟ್ಟಿ, ಸ.ಪ್ರ.ಕಾಲೇಜು ಪ್ರಾಂಶುಪಾಲರು, ಉಪಾನ್ಯಾಸಕರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
error: Content is protected !!