Sunday, September 8, 2024

ಎಚ್. ಶ್ರೀಧರ ಹಂದೆ ಅವರಿಗೆ ಮುದ್ದಣ ಪ್ರಶಸ್ತಿ

ಕೋಟ: ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಯು ಪ್ರತಿವರ್ಷ ನೀಡುವ 2021 ರ ಸಾಲಿನ ಮಹಾ ಕವಿ ಮುದ್ದಣ ಪ್ರಶಸ್ತಿಗೆ ಈ ಬಾರಿ ಹಂಗಾರಕಟ್ಟೆ ಚೇತನಾ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯಾರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಂಗಭೂಮಿ ಕಲಾವಿದ ಕೋಟದ ಎಚ್. ಶ್ರೀಧರ ಹಂದೆ ಭಾಜನರಾಗಿದ್ದಾರೆ.

ಇದೀಗ 86 ರ ಇಳಿವಯಸ್ಸಿನ ಹಂದೆಯವರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಶಿಕ್ಷಣದಲ್ಲಿ ರಂಗಕಲೆಗಳನ್ನೂ ಅಳವಡಿಸಿಕೊಂಡು ಇತಿಹಾಸ, ವಿಜ್ಞಾನ, ಮತ್ತು ಭಾಷಾ ಪಠ್ಯಗಳನ್ನು ಬೋಧನೆಮಾಡಿದವರು. ಕಾರ್ಕಡ ಶ್ರೀನಿವಾಸ ಉಡುಪರೊಂದಿಗೆ ೧೯೭೫ ರಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಯಕ್ಷಗಾನವನ್ನು ಮೊದಲು ವಿದೇಶಕ್ಕೆ ಕೊಂಡೊಯ್ದ ದಾಖಲೆಗೆ ಪಾತ್ರರಾದವರು. ಯಕ್ಷ ಸಂಘಟಕ, ನಿರ್ದೇಶಕ ಮಾತ್ರವಲ್ಲದೆ ಸ್ವತಃ ವೇಷಧಾರಿ, ಭಾಗವತ, ಪ್ರಸಂಗಕವಿಯೂ ಆಗಿ ಗುರುತಿಸಿಕೊಂಡಿದ್ದಾರೆ.

ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 50 ಕ್ಕೂ ಹೆಚ್ಚು ವರ್ಷಗಳ ಕಾಲ ಗಣನೀಯ ಸೇವೆ ಸಲ್ಲಿಸಿದ ಹಂದೆಯವರಿಗೆ ಸೆಪ್ಟಂಬರ್ 18 ರಂದು ಬೆಂಗಳೂರಿನ ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ಮರಾಠ ಹಾಸ್ಟೆಲ್‌ನ ಸಭಾವೇದಿಕೆಯಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 25000 ನಗದು ಪುರಸ್ಕಾರದೊಂದಿಗೆ ಮುದ್ದಣ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!