Sunday, September 8, 2024

ಬಿಲ್ಲವ ಸೇವಾ ಸಂಘ ಕುಂದಾಪುರ ಮುಂಬಯಿ: ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ

ಸಾಧಕರ ಸಾಧನೆಗಳು ಸಮುದಾಯದ ಯುವ ಪೀಳಿಗೆಗಳಿಗೆ ಪ್ರೇರಣೆಯಾಗಬೇಕು-ಸೂರ್ಯ ಎಸ್. ಪೂಜಾರಿ

ಮುಂಬಯಿ: ಸಂಘಟನೆಗಳು ಅಭಿವೃದ್ಧಿಯಾಗಬೇಕು ಎಂದರೆ ಸದಸ್ಯರು ಸಕ್ರಿಯರಾಗಬೇಕು ಎಲ್ಲರೂ ಸಮರ್ಪಣ ಮನೋಭಾವದಿಂದ ದುಡಿದಾಗ ಸಂಘದ ಅಭಿವೃದ್ಧಿಯಾಗುವುದು ನಿಶ್ಚಿತ. ನಮ್ಮ ಹಿಂದಿನ ಹಿರಿಯರು ಸಲ್ಲಿಸಿದ ಉದಾತ್ತ ಸೇವೆ ಹಾಗೂ ಈಗಿನ ಕೆಲವು ಸದಸ್ಯರ ಪ್ರಾಮಾಣಿಕವಾದ ಸೇವೆಯಿಂದ ನಮ್ಮ ಸಂಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ನುಡಿದರು

ಅವರು ಅಗಸ್ಟ್ 21 ರಂದು ದಾದರ್ ಪೂರ್ವದ ಪ್ರಾಚಾರ್ಯ ಬಿ. ಎನ್. ವೈದ್ಯ ಸಭಾಗೃಹದಲ್ಲಿ ಜರಗಿದ ಸಂಘದ 35ನೇ ವಾರ್ಷಿಕೋತ್ಸವದ ಪ್ರಯುಕ್ತ ಹಮ್ಮಿಕೊಂಡ ಸಾಧಕರಿಗೆ ಸನ್ಮಾನ, ಗಾನ-ನೃತ್ಯ ವೈಭವದ ಸಾಂಸ್ಕೃತಿಕ ಉತ್ಸವ, ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನು ನಾವಿಂದು ಸತ್ಕರಿಸಿದ್ದೇವೆ ಸಾಧಕರ ಸಾಧನೆಗಳು ನಮ್ಮ ಸಮುದಾಯದ ಯುವ ಪೀಳಿಗೆಗಳಿಗೆ ಪ್ರೇರಣೆಯಾಗಬೇಕು ಇವರಂತೆ ಹಲವಾರು ಸಾಧಕರು ಬೆಳಕಿಗೆ ಬರುವಂತಾಗಲಿ ಎನ್ನುವುದೇ ನಮ್ಮ ಮಹಾದಾಸೆ ಇನ್ನು ನಮಗೊಂದು ಸುಸಜ್ಜಿತವಾದ ಕಾರ್ಯಾಲಯದ ಅಗತ್ಯವಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸುತ್ತಿದ್ದೇವೆ. ಅದೇ ರೀತಿ ತಾವೆಲ್ಲರೂ ನಮ್ಮ ಜೊತೆಗೂಡಿದರೆ ನಾವು ಭವನವನ್ನೇ ನಿರ್ಮಿಸಬಹುದು ಎಂದರು.

ಸನ್ಮಾನ ಸ್ವೀಕರಿಸಿದ ನ್ಯಾಯವಾದಿ ಶಕುಂತಲಾ ಆನಂದ ಪೂಜಾರಿ ಮಾತನಾಡುತ್ತಾ, ಹಿಂದೆಲ್ಲ ಸಂಘಕ್ಕೆ ಬರುವ ಮಹಿಳೆಯರ ಸಂಖ್ಯೆ ತುಂಬಾ ವಿರಳವಾಗಿತ್ತು ಆದರೆ ಇಂದು ಮಹಿಳೆಯರ ಸಂಖ್ಯೆ ಜಾಸ್ತಿ ಆಗಿರುವುದು ನೋಡಿದರೆ ತುಂಬಾ ಸಂತೋಷವಾಗುತ್ತದೆ. ನಮ್ಮಲ್ಲಿ ಸಾಕಷ್ಟು ಉದ್ಯಮಿಗಳು ಇರುವುದರಿಂದ ನಮ್ಮ ಕನಸಿನ ಸುಸಜ್ಜಿತವಾದ ಕಾರ್ಯಾಲಯ ಮಾಡುವುದು ಅಷ್ಟೊಂದು ಕಷ್ಟವಾಗದು. ಸಂಘದ ಕಾರ್ಯ ಚಟುವಟಿಕೆಗಳು ನಿರಂತರವಾಗಿ ಸಾಗಬೇಕಾದರೆ ಎಲ್ಲರಿಗೂ ಅನುಕೂಲವಾಗುವ ಸ್ಥಳದಲ್ಲಿ ಕಾರ್ಯಾಲಯ ಮಾಡಬೇಕಾಗಿದೆ ಎಂದರು

ಬಿಲ್ಲವ ಛೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರೀಸ್ ಇದರ ಕಾರ್ಯಾಧ್ಯಕ್ಷರಾದ ಎನ್. ಟಿ. ಪೂಜಾರಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಸಂಘದಿಂದ ಸದಸ್ಯರಿಗಾಗಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ ಅದನ್ನು ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ನಾನು ಹಲವಾರು ಸಂಘ ಸಂಸ್ಥೆಗಳ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಆದರೆ ನಮ್ಮ ಈ ಕುಂದಾಪುರ ಸಂಘದಲ್ಲಿ ನೋಡಿದಷ್ಟು ಯುವ ಜನರನ್ನು ಬೇರೆ ಯಾರ ಕಾರ್ಯಕ್ರಮದಲ್ಲೂ ನೋಡಿಲ್ಲ ಇಲ್ಲಿ ಯುವ ಜನರು ಮತ್ತು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮಹಿಳೆಯರು ಸಂಘಕ್ಕಾಗಿ ದುಡಿಯುವುದು ಸಂತಸದ ವಿಚಾರ ನಾವು ಹಿಂದಿನಿಂದಲೂ ಪ್ರೋತ್ಸಾಹಿಸುತ್ತಾ ಬಂದಿದ್ದೇವೆ ಎಂದರು.

ಸನ್ಮಾನ ಸ್ವೀಕರಿಸಿದ ಸಂಘದ ಮಾಜಿ ಉಪಾಧ್ಯಕ್ಷರಾದ ಎನ್. ಜಿ. ಪೂಜಾರಿ, ಉಪಾಧ್ಯಕ್ಷರಾದ ಎಸ್. ಕೆ. ಪೂಜಾರಿ, ಸುಶೀಲ ಸುರೇಶ ಪೂಜಾರಿ ಮಾತನಾಡಿ ಸಂಘದ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿ ಕೃತಜ್ಞತೆ ಸಲ್ಲಿಸಿದರು

ಸಾಗರ್ ಕೋ-ಆಪರೇಟವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ನಿರ್ದೇಶಕ ಕೇಶವ ಜೆ. ಪೂಜಾರಿ ಉಪ್ಪುಂದ, ಅರುಣ ಟೆಕ್ಸಟೈಲ್ಸ್ ಆಂಡ್ ಡಿಸೈನರ್‍ಸ್‌ನ ವಿಶ್ವನಾಥ ಎ. ಪೂಜಾರಿ ಕೋಡಿ, ಮುಂಬಯಿ ಉದ್ಯಮಿಗಳಾದ ತಿಮ್ಮಪ್ಪ ಸಿ. ಪೂಜಾರಿ ಬಾಗಾಳಮನೆ ಏಳಜಿತ್, ಸುರೇಶ ಸಿ. ಪೂಜಾರಿ ಬಡಾಕೆರೆ ನಾವುಂದ, ರಮೇಶ ಎ. ಬಿಲ್ಲವ ದೊಡ್ಡಮನೆ ಏಳಜಿತ್, ಪರಮೇಶ್ವರ ಎನ್. ಪೂಜಾರಿ ಬಿಜೂರು, ಮಾಜಿ ಉಪಾಧ್ಯಕ್ಷ ಎನ್. ಜಿ. ಪೂಜಾರಿ ಕೊಡೇರಿ, ಉಪಾಧ್ಯಕ್ಷರುಗಳಾದ ಎಸ್. ಕೆ. ಪೂಜಾರಿ, ಎನ್. ಎಮ್. ಬಿಲ್ಲವ, ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಕೋಶಾಧಿಕಾರಿ ಶ್ರೀಧರ ವಿ. ಪೂಜಾರಿ, ಮಹಿಳಾ ಸಮಿತಿಯ ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಸಮಿತಿಯ ಕಾರ್ಯಾಧ್ಯಕ್ಷ ನಾಗರಾಜ್ ಎಮ್. ಪೂಜಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮಾಜಿ ಅಧ್ಯಕ್ಷರುಗಳಾದ ಮಂಜುನಾಥ ಬಿಲ್ಲವ ಶಿರೂರು, ಆನಂದ ಎಮ್. ಪೂಜಾರಿ, ಆಂತರಿಕ ಲೆಕ್ಕ ಪರಿಶೋಧಕ ರಾಜೀವ್ ಎಮ್. ಪೂಜಾರಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

ಗಾನ-ನೃತ್ಯ ವೈಭವದ ಸಾಂಸ್ಕೃತಿಕ ಉತ್ಸವದಲ್ಲಿ ವೈವಿಧ್ಯಮಯ ಕಾರ್ಯಕ್ರಮ ನೀಡಿದ ಸದಸ್ಯರು ಮತ್ತು ಸದಸ್ಯರ ಮಕ್ಕಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರೆ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಅಸಹಾಯಕ ಬಡ ವಿದ್ಯಾರ್ಥಿ ಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು

ಮಲ್ಲಿಕಾ ಎಸ್. ಪೂಜಾರಿ,ಯಶೋದಾ ಎಸ್. ಪೂಜಾರಿ, ರೇಖಾ ಎನ್. ಬಿಲ್ಲವ ಪ್ರಾರ್ಥನೆಗೈದರು. ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು ಯಶೋದಾ ಎಸ್. ಪೂಜಾರಿ, ಸುಶೀಲ ಆರ್. ಪೂಜಾರಿ, ರೇಖಾ ಎನ್. ಬಿಲ್ಲವ ಹರೀಶ ಎನ್. ಪೂಜಾರಿ ಸನ್ಮಾನ ಪತ್ರ ವಾಚಿಸಿ ಅತಿಥಿಗಳನ್ನು ಪರಿಚಯಿಸಿದರು

ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರೀಶ್ ಎನ್. ಪೂಜಾರಿ, ಪ್ರತಿಭಾ ಪರಸ್ಕಾರ ಮತ್ತು ವಿದ್ಯಾರ್ಥಿವೇತನ ಜಯಶ್ರೀ ಎ. ಕೋಡಿ ಮತ್ತು ಸಭಾ ಕಾರ್ಯಕ್ರಮವನ್ನು ಲಕ್ಷ್ಮಣ ಪೂಜಾರಿ ಕೊಡೇರಿ ನಿರ್ವಹಿಸಿದರೆ ಸಂಘದ ಜೊತೆ ಕಾರ್ಯದರ್ಶಿ ಸುಶೀಲ ಆರ್. ಪೂಜಾರಿ ವಂದಿಸಿದರು. ಸಮುದಾಯದ ಉದಯೋನ್ಮುಖ ಗಾಯಕಿ ಗೀತಾ ಪೂಜಾರಿ ಬೈಂದೂರು ತಮ್ಮ ಗಾಯನದ ಮೂಲಕ ನೆರೆದ ಸಮುದಾಯ ಬಾಂಧವರ ಮನರಂಜಿಸಿದರು

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!