Sunday, September 8, 2024

ಕೊರಗರು ಮತ್ತು ಭೂಮಿಯ ನಡುವಿನ ಸಂಬಂಧ ಅನ್ಯೋನ್ಯವಾದುದು-ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಕುಂದಾಪುರದಲ್ಲಿ 14ನೇ ಭೂಮಿ ಹಬ್ಬ ಉದ್ಘಾಟನೆ


ಜನಪ್ರತಿನಿಧಿ ವಾರ್ತೆ
ಕುಂದಾಪುರ: ಕೊರಗರು ಮತ್ತು ಭೂಮಿಯ ನಡುವಿನ ಸಂಬಂಧ ಅನ್ಯೋನ್ಯವಾಗಿದ್ದು, ಪ್ರಕೃತಿ ಸಂರಕ್ಷಣೆ, ಕೃಷಿ ಅಭಿವೃದ್ದಿಗೆ ಅವರು ವಿಶೇಷ ಆಸಕ್ತಿ ವಹಿಸುತ್ತಾರೆ. ಕೊರಗ ಸಮುದಾಯದ ಸಂಸ್ಕೃತಿ, ಸಾಂಸ್ಕೃತಿಕತೆ, ಆತಿಥ್ಯ ನೀಡುವ ಕ್ರಮ ಶ್ರೇಷ್ಠವಾದುದು ಎಂದು ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟ ರಿ., ಕರ್ನಾಟಕ, ಕೇರಳ ಇದರ ನೇತೃತ್ವದಲ್ಲಿ ಕುಂದಾಪುರದ ಅಂಬೇಡ್ಕರ್ ಸಭಾಭವನದಲ್ಲಿ ನಡೆದ 14ನೇ ಭೂಮಿ ಹಬ್ಬ ಕಾರ್ಯಕ್ರಮವನ್ನು ಡೋಲು ಭಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಕೊರಗ ಸಮುದಾಯ ಭೂಮಿಗಾಗಿ ಸಾಕಷ್ಟು ಹೋರಾಟ ನಡೆಸಿದೆ. 450 ಎಕ್ರೆ ಸ್ಥಳ ಹೋರಾಟದಿಂದ ಪಡೆದಿದೆ. ಹಲವಾರು ಮಂದಿ ಕೃಷಿಯಲ್ಲಿ ಸಾಧನೆ ಮಾಡಿದ್ದಾರೆ. ಮೂಲ ಸೌಕರ್ಯವೃದ್ದಿಗೆ ಸರ್ಕಾರ, ಇಲಾಖೆಗಳು ಹೆಚ್ಚಿನ ಆದ್ಯತೆ ನೀಡುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿಯೂ ಈ ಸಮುದಾಯದ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಶೈಕ್ಷಣಿಕವಾಗಿ ಇನ್ನಷ್ಟು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಲೋನಿಗಳಲ್ಲಿ ಟ್ಯೂಶನ್ ಸೆಂಟರ್‌ಗಳನ್ನು ಆರಂಭಿಸಿ ಮನೆಯ ಸಮೀಪವೇ ಟ್ಯೂಶನ್ ನೀಡಲು ಆರಂಭಿಸಲಾಗಿದೆ ಎಂದರು.

ಶಿರಿಯಾರ ಗ್ರಾಮ ವ್ಯಾಪ್ತಿಯಲ್ಲಿ ಮಂಜೂರಾತಿಯಾದ ಭೂಮಿಗೆ ಹಕ್ಕು ಪತ್ರ ತೊಡಕ್ಕಿರುವ ಸಮಸ್ಯೆಗಳನ್ನು ತಕ್ಷಣವೇ ತಹಶೀಲ್ದಾರರಲ್ಲಿ ಚರ್ಚಿಸಿ , ಹಕ್ಕುಪತ್ರ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಅಧ್ಯಕ್ಷೆ ಅಮ್ಮಣಿ ಕೊರಗ ಅಬ್ಲಿಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಧ್ವಜಾರೋಹಣ ನೆರವೇರಿಸಿದರು. ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೊ. ಪ್ರಸನ್ನ ತೆಂಗಿನ ಸಸಿಗೆ ನೀರೇರೆಯುವ ಮೂಲಕ ಚಾಲನೆ ನೀಡಿದರು. ಸಮಾಜದ ಹಿರಿಯ ಮಹಿಳೆ ಗೌರಿ ಕೊರಗ ಹಬ್ಬದ ಜ್ಯೋತಿ ಬೆಳಗಿಸಿದರು.

ಮಂಗಳೂರು ವಿವಿಯ ಅಸಿಸ್ಟೆಂಟ್ ಪ್ರೊಪೆಸರ್ ಡಾ.ಸಬಿತಾ ಗುಂಡ್ಮಿ, ಐಟಿಡಿಪಿಯ ಯೋಜನಾ ಸಮನ್ವಯಾಧಿಕಾರಿ ದೂದ್ ಫೀರ್, ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುಡೇಶ್ವರ, ಸಮಾಜ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಣೇಕರ್, ಕೊರಗ ಅಭಿವೃದ್ದಿ ಸಂಘ ಕುಂದಾಪುರ ವಲಯ ಅಧ್ಯಕ್ಷ ಶೇಖರ ಕೊರಗ, ಜಿಲ್ಲಾ ಸಮಿತಿ ಮಾಜಿ ಅಧ್ಯಕ್ಷ ದೋಗ್ರ ಕೊರಗ, ಶೋಭಾ ಬಂಟ್ವಾಳ, ಗೋಪಾಲ ಕಾಸರಗೋಡು, ಸುರೇಶ ಪುತ್ತೂರು, ಭೂಮಿ ಹಬ್ಬದ ಉಸ್ತುವಾರಿ ಸಮಿತಿ ಅಧ್ಯಕ್ಷ, ಪುರಸಭಾ ಸದಸ್ಯ ಪ್ರಭಾಕರ ವಿ ಉಪಸ್ಥಿತರಿದ್ದರು.

ಬೇಬಿ ವಂಡ್ಸೆ ಮತ್ತು ಗಿರಿಜಾ ಜನ್ನಾಡಿ ಭೂಮಿ ಹಬ್ಬದ ಸವಿಜೇನು ಹಂಚಿದರು. ಮತ್ತಾಡಿ ಕಾಯರ್‌ಪಲ್ಕೆ, ಮೋಹನ್ ಆಡ್ವೆ, ಸುಶೀಲ ನಾಡ ಸಂದೇಶ ನೀಡಿದರು. ಎಸ್.ಎಸ್.ಎಲ್.ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸಮಾಜದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕೊರಗ ಅಭಿವೃದ್ದಿ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಪುತ್ರನ್ ಹೆಬ್ರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೊರಗ ಅಭಿವೃದ್ದಿ ಸಂಘ ಕೊಕ್ಕರ್ಣೆ ಕಾರ್ಯದರ್ಶಿ ಸುಚಿತ್ರಾ ವಂದಿಸಿದರು. ಸುನಂದಾ ಮತ್ತು ತಂಡ ದ್ಯೇಯಗೀತೆ ಹಾಡಿದರು. ಸುರೇಂದ್ರ ಕಳ್ತೂರು, ವಿಮಲಾ ಕಳ್ತೂರು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮಕ್ಕೂ ಮೊದಲು ಕುಂದಾಪುರ ನಗರದಲ್ಲಿ ಜಾಥಾ ನಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!