Sunday, September 8, 2024

ಗಂಗೊಳ್ಳಿ ಜಿ‌ಎಸ್‌ಬಿ ಮಹಿಳಾ ಮಂಡಳಿ ವತಿಯಿಂದ ಸಾಮೂಹಿಕ ಚೂಡಿ ಪೂಜೆ

ಗಂಗೊಳ್ಳಿ : ಗಂಗೊಳ್ಳಿಯ ಜಿ‌ಎಸ್‌ಬಿ ಮಹಿಳಾ ಮಂಡಳಿ ವತಿಯಿಂದ ಸಾಮೂಹಿಕ ಚೂಡಿ ಪೂಜೆ ಕಾರ್ಯಕ್ರಮ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಭಾನುವಾರ ನಡೆಯಿತು.

ಸಮಾಜದ ಸುಮಂಗಲಿಯರು ಶ್ರಾವಣ ಮಾಸದಲ್ಲಿ ಗೌಡ ಸಾರಸ್ವತ ಸಮಾಜದ ಮತ್ತೈದೆಯರ ಶ್ರೇಷ್ಠ ಆಚರಣೆಗಳಲ್ಲಿ ಒಂದಾಗಿರುವ ಚೂಡಿ ಪೂಜೆ ಸಾಮೂಹಿಕವಾಗಿ ನೆರವೇರಿಸಿದರು. ತುಳಸಿ ಕಟ್ಟೆ ಎದುರು ದೀಪ ಹಚ್ಚಿ ತುಳಸಿಗೆ ನೀರೆರೆದು ಅರಸಿನ ಕುಂಕುಮ, ಗಂಧ ಹಚ್ಚಿ, ವೀಳ್ಯ ಚೂಡಿ ಅರ್ಪಿಸಿ, ಹಣ್ಣು ಕಾಯಿ, ಪಂಚಕಜ್ಜಾಯ ನೈವೇದ್ಯ ಮಾಡಿ ಮಂಗಳಾರತಿ ಬೆಳಗಿದರು. ಬಳಿಕ ತುಳಸಿಗೆ 5 ಪ್ರದಕ್ಷಿಣೆ ಹಾಕಿ ಪ್ರತಿ ಸುತ್ತಿನಲ್ಲಿಯೂ ತುಳಸಿಗೂ ಹಾಗೂ ಸೂರ್ಯ ದೇವನಿಗೆ ಅಕ್ಷತೆ ಸಮರ್ಪಿಸಿದರು.
ಸಮಾಜದ ಪ್ರತಿಯೊಬ್ಬರಿಗೂ ಆರೋಗ್ಯ, ಆಯುಷ್ಯ, ಗೃಹಿಣಿಯರಿಗೆ ಮುತ್ತೈದೆ ಸೌಭಾಗ್ಯ ನೀಡಿ, ಕುಟುಂಬದ ಪ್ರತಿ ಸದಸ್ಯರಲ್ಲಿ ವಿಶ್ವಾಸ ಸಂಬಂಧ, ಸಂತೋಷ ನಿರಂತರವಾಗಿ ಉತ್ತಮವಾಗಿ ಇರಲೆಂದು ಸೂರ್ಯದೇವನಲ್ಲಿ ಹಾಗೂ ತುಳಸೀ ಸನ್ನಿಧಿಯಲ್ಲಿ ಕುಲ ದೇವರನ್ನು ಸ್ಮರಿಸುತ್ತಾ ಪ್ರಾರ್ಥನೆ ಸಲ್ಲಿಸಿದರು.

ಜಿ‌ಎಸ್‌ಬಿ ಮಹಿಳಾ ಮಂಡಳಿ ಅಧ್ಯಕ್ಷೆ ನಿರ್ಮಲಾ ಡಿ.ನಾಯಕ್, ಕಾರ್ಯದರ್ಶಿ ವಿಜಯಶ್ರೀ ವಿ.ಆಚಾರ್ಯ, ದೇವಸ್ಥಾನದ ಆಡಳಿತ ಮೊಕ್ತೇಸರ ಎನ್.ಸದಾಶಿವ ನಾಯಕ್, ಆಡಳಿತ ಮಂಡಳಿ ಸದಸ್ಯ ಜಿ.ವೇದವ್ಯಾಸ ಕೆ.ಆಚಾರ್ಯ, ಮಹಿಳಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!