Sunday, September 8, 2024

ಯಶಸ್ವಿ ಕಲಾವೃಂದದ ವತಿಯಿಂದ ಶಾಲೆಗಳಲ್ಲಿ ಯಕ್ಷಗಾನ ಪೂರ್ವರಂಗ ಪ್ರಸ್ತುತಿ

ತೆಕ್ಕಟ್ಟೆ: ಇತ್ತೀಚೆಗೆ ಅಪರೂಪವೆನಿಸಿದ ಯಕ್ಷಗಾನದ ಪೂರ್ವರಂಗವನ್ನು ಪರಿಚಯಿಸುವ ಪ್ರಾತ್ಯಕ್ಷಿಕೆಯನ್ನು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಇದರ ವಿದ್ಯಾರ್ಥಿಗಳು ನಡೆಸಿಕೊಡಲಿದ್ದಾರೆ.

ಉಡುಪಿ ಜಿಲ್ಲೆಯ ಐದು ಶಾಲೆಗಳಲ್ಲಿ ರಂಗ ಪ್ರಸ್ತುತಿಯ ಮೂಲಕ ಹೊಸ ಪೀಳಿಗೆಗೆ ಕೊಂಡೊಯ್ಯುವ ಪ್ರಯತ್ನ ಸಂಸ್ಥೆಯದ್ದು. ಆಗಷ್ಟ್ 13ರಂದು ಮಧ್ಯಾಹ್ನ 2ರಿಂದ ತೆಕ್ಕಟ್ಟೆಯ ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಥಮ ಕಾರ್ಯಕ್ರಮವಾಗಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟಕರಾಗಿ ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಆಗಮಿಸಲಿದ್ದಾರೆ. ಅತಿಥಿಗಳಾಗಿ ತೆಕ್ಕಟ್ಟೆ ಕುವೆಂಪು ಶಾಲೆಯ ಮುಖ್ಯೋಪಾಧ್ಯಾಯಿನಿ ಲಲಿತಾ ಸಕಾರಾಂ, ಎಸ್.ಡಿ.ಎಮ್.ಸಿ ಅಧ್ಯಕ್ಷ ಸಂತೋಷ ಪೂಜಾರಿ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಗುರುಗಳಾದ ಕೂಡ್ಲಿ ದೇವದಾಸ್ ರಾವ್ ಉಪಸ್ಥಿತರಿರುತ್ತಾರೆ. ಮುಂದಿನ ರಂಗ ಪ್ರಸ್ತುತಿಯನ್ನು ಸರಕಾರಿ ಪ್ರೌಢ ಶಾಲೆ ವಡ್ಡರ್ಸೆ, ಸರಕಾರಿ ಪ್ರೌಢ ಶಾಲೆ ಬೇಳೂರು, ಶ್ರೀ ಶಾಂಭವೀ ವಿದ್ಯಾಧಾಯಿನಿ ಅನುದಾನಿತ ಪ್ರಾಥಮಿಕ ಶಾಲೆ ಗಿಳಿಯಾರು, ತೆಕ್ಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಯಶಸ್ವಿ ಕಲಾವೃಂದದ ಕಲಾವಿದರು ನೀಡಲಿದ್ದಾರೆ ಎಂದು ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!