Sunday, September 8, 2024

ತೆಕ್ಕಟ್ಟೆಯಲ್ಲಿ ಬಿ. ಎಮ್. ರಾಮಕೃಷ್ಣ ಹತ್ವಾರ್ ಸಂಸ್ಮರಣಾ ಕಾರ್ಯಕ್ರಮ

ತೆಕ್ಕಟ್ಟೆ: ದಾನವಾಗಿ ವಿನಿಯೋಗಿಸಿದ ಮೊತ್ತ ಸಾರ್ಥಕತೆಯನ್ನು ಪಡೆಯುವುದು ಅಳಿದ ಮೇಲೆ ಸ್ಮರಿಸುವ ಸಂಸ್ಮರಣೆಯಿಂದ. ಬಿ. ಎಮ್. ರಾಮಕೃಷ್ಣ ಹತ್ವಾರ್ ತಮ್ಮ ದುಡುಮೆಯನ್ನು ದಾನವಾಗಿ ಹೊಳೆಯಂತೆ ಹರಿಸಿ ಬಿಟ್ಟಿದ್ದಾರೆ. ಎಷ್ಟು ಜನ ಸ್ಮರಿಸಿಕೊಂಡಾರು? ಕೋಟಿಗಟ್ಟಲೆ ಹಣವನ್ನು ವಿದ್ಯಾಸಂಸ್ಥೆಗೆ, ವಿದ್ಯಾರ್ಥಿಗಳಿಗೆ, ದೇಗುಲಗಳಿಗೆ ದಾನವಾಗಿ ನೀಡಿದ್ದಾರೆ. ಆದರೆ ಎಷ್ಟು ಸಂಸ್ಥೆ ನೆನಪಿಸಿಕೊಳ್ಳುತ್ತದೆ? ಶ್ರೀ ಕೈಲಾಸ ಕಲಾಕ್ಷೇತ್ರ ಪ್ರತೀ ವರ್ಷವೂ ಹತ್ವಾರ್ ಹಂಚಿದ ಮೊತ್ತವನ್ನು ನೆನಪಿಸಿ, ಸಂಸ್ಮರಣೆ ಮೂಲಕ ಸಾರುತ್ತಿದೆ ಎಂದು ನಿವೃತ್ತ ಅಧ್ಯಾಪಕ ಪಿ. ಗಣಪಯ್ಯ ಚಡಗ ಸಂಸ್ಮರಣಾ ಮಾತುಗಳನ್ನಾಡಿದರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಆಗಸ್ಟ್ ೩, ೨೦೨೨ರಂದು ಶ್ರೀ ಕೈಲಾಸ ಕಲಾಕ್ಷೇತ್ರ ತೆಕ್ಕಟ್ಟೆ ಆಯೋಜಿಸಿದ ಬಿ. ಎಮ್. ರಾಮಕೃಷ್ಣ ಹತ್ವಾರ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಚಡಗರು ಮಾತನ್ನಾಡಿದರು.

ಮುಖ್ಯ ಅತಿಥಿಗಳಾಗಿ ಉಪನ್ಯಾಸಕ ಸುಜಯೀಂದ್ರ ಹಂದೆ, ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕೃತ ಕೋಟ ಸುದರ್ಶನ ಉರಾಳ, ಬೆಟ್ಟಿನಮನೆ ವಾದಿರಾಜ ಹತ್ವಾರ್, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ, ವೆಂಕಟೇಶ ವೈದ್ಯ ಉಪಸ್ಥಿತರಿದ್ದರು. ಶ್ರೀ ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಹೆರಿಯ ಮಾಸ್ಟರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ತೆಕ್ಕಟ್ಟೆ ಯಕ್ಷಗಾನ ಕೇಂದ್ರದ ವಿದ್ಯಾರ್ಥಿ ಪುಣ್ಯವತಿ ನಾವುಡ, ಮೇಘನಾ ಪ್ರಾರ್ಥನೆಗೈದರು. ಪೂಜಾ ಆಚಾರ್ ತೆಕ್ಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ಯಕ್ಷಗಾಯಕರಾದ ಪ್ರಾಚಾರ್ಯ ಕೆ.ಪಿ. ಹೆಗಡೆ, ಕೂಡ್ಲಿ ದೇವದಾಸ್ ರಾವ್, ಗಣಪಯ್ಯ ಚಡಗ, ಕು| ಪೂಜಾ ಆಚಾರ್, ಪಂಚಮಿ ವೈದ್ಯ ಇವರ ಭಕ್ತಿಗಾಯನಕ್ಕೆ ಚೇತನ್ ಪ್ರಭು ತೆಕ್ಕಟ್ಟೆ, ಭರತ ಚಂದನ್ ಕೋಟೇಶ್ವರ ಹಿಮ್ಮೇಳದಲ್ಲಿ ಸಹಕರಿಸಿ, ರಂಗ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!