Sunday, September 8, 2024

ವಂಡ್ಸೆ: ಉದ್ಯಮಶೀಲತೆ ಅಭಿವೃದ್ದಿ ಪ್ರಾಯೋಗಿಕ ಯೋಜನೆಯಡಿ ಹೊಲಿಗೆ ತರಬೇತಿ ಉದ್ಘಾಟನೆ

ವಂಡ್ಸೆ: ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಮಂತ್ರಾಲಯ, ಭಾರತ ಸರಕಾರ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಎಂಟರ್‌ಪ್ರಿನ್ಶುರ್ ಶಿಫ್, ಎಕ್ಸೆಸ್ ಲೈವ್ಲಿಹುಡ್ಸ್, ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ, ಎನ್.ಆರ್.ಎಲ್.ಎಂ ಅಭಿಯಾನ ನಿರ್ವಹಣಾ ಘಟಕ ಕುಂದಾಪುರ-ಬೈಂದೂರು, ಗ್ರಾಮ ಪಂಚಾಯತ್ ವಂಡ್ಸೆ, ಸಂಜೀವಿನಿ ಒಕ್ಕೂಟ ವಂಡ್ಸೆ ಇವರ ಸಹಭಾಗಿತ್ವದಲ್ಲಿ ಉದ್ಯಮಶೀಲತೆ ಅಭಿವೃದ್ದಿ ಪ್ರಾಯೋಗಿಕ ಯೋಜನೆಯಡಿಯಲ್ಲಿ ಹೊಲಿಗೆ ತರಬೇತಿ ವಂಡ್ಸೆಯ ಸ್ವಾವಲಂಬನಾ ತರಬೇತಿ ಕೇಂದ್ರದಲ್ಲಿ ಜು.6ರಂದು ಆರಂಭಗೊಂಡಿತು.

ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಹೊಲಿಗೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ, ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಈ ತರಬೇತಿ ಪೂರಕವಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಭಾರತೀಯ ವಿಕಾಸ ಟ್ರಸ್ಟ್‌ನ ಅರುಣ್ ಪಟವರ್ದನ್, ಮನೋಹರ ಕಟಗೇರಿ, ರಾಘವೇಂದ್ರ, ಗ್ರಾಮ ಪಂಚಾಯತ್ ಸದಸ್ಯರಾದ ಗೋವರ್ಧನ್ ಜೋಗಿ, ಎಕ್ಸೆಸ್ ಲೈವ್ಲಿಹುಡ್ಸ್‌ನ ತೃಪ್ತಿ ಶೆಟ್ಟಿ, ಶ್ವೇತಾ ಭಟ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಆಶಾ ಶೆಟ್ಟಿ, ಹೊಲಿಗೆ ತರಬೇತುದಾರರಾದ ಮಹಾಲಕ್ಷ್ಮೀ ಉಪಸ್ಥಿತರಿದ್ದರು.

ಭಾರತೀಯ ವಿಕಾಸ ಟ್ರಸ್ಟಿನ ರಾಘವೇಂದ್ರ ಕಾರ್ಯಕ್ರಮ ನಿರ್ವಹಿಸಿ, ಸಂಜೀವಿನಿ ಒಕ್ಕೂಟದ ಆಶಾರಾಣಿ ವಂದಿಸಿದರು.

ಕೇಂದ್ರ ಸರ್ಕಾರದ ಕೌಶಲ್ಯಾಭಿವೃದ್ದಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ಮೂಲಕ ಸ್ವಾವಲಂಬನೆಗೆ ಒತ್ತು ನೀಡುವ ಸಲುವಾಗಿ 15 ದಿನಗಳ ತರಬೇತಿ ನೀಡಿ, ಬಳಿಕ ಸೂಕ್ತ ಯೋಜನೆಗಳ ತಯಾರಿಸಿ, ಅದಕ್ಕೆ ಆರ್ಥಿಕ ನೆರವು, ಮಾರುಕಟ್ಟೆ ಒದಗಿಸುವ ಮಹತ್ವಕಾಂಕ್ಷಿ ಕಾರ್ಯಕ್ರಮ ಇದಾಗಿದೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!