spot_img
Thursday, April 2, 2026
spot_img

ಬಾರಕೂರು ಮೂಲದ ಸ್ವೀಝಲ್ ಫುರ್ಟಾಡೊ ‘ಸೂಪರ್ ಮಾಡೆಲ್ ಇಂಡಿಯಾ’ದ ರನ್ನರ್ ಅಪ್

ಬ್ರಹ್ಮಾವರ : ಕರ್ನಾಟಕದ ಉಡುಪಿ ಜಿಲ್ಲೆಯ ಬಾರಕೂರು ಮೂಲದ ಸ್ವೀಝಲ್ ಫುರ್ಟಾಡೊ ಸೂಪರ್ ಮಾಡೆಲ್ ಇಂಡಿಯಾ 2022 ರ ರನ್ನರ್ ಅಪ್ ಆಗಿದ್ದಾರೆ.

ಸ್ಟಾರ್ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಇವರು ಜೂನ್ 26 ರಂದು ನವದೆಹಲಿಯ ಲೀಲಾ ಪ್ಯಾಲೇಸ್‌ನಲ್ಲಿ ನಡೆಸಿದ ಸ್ಪರ್ಧೆಯಲ್ಲಿ ರೋಹಿತ್ ಖಂಡೆಲ್ ವಾಲ (ಮಿಸ್ಟರ್ ವರ್ಲ್ಡ್2016) ಮತ್ತು ಸುಮನ್ ರಾವ್ (ಮಿಸ್ ವರ್ಲ್ಡ್ ಏಷಿಯಾ ಎರಡನೇ ರನ್ನರ್ ಅಪ್) ಹಾಗೂ ಆಡ್ಲೈನ್ ಕ್ಯಾಸ್ಟೊಲಿನ್ (ಮಿಸ್ ಯುನಿವರ್ಸ್ ಮೂರನೇ ರನ್ನರ್ ಅಪ್) ಇವರು ತೀರ್ಪುಗಾರರಾಗಿ ವಿಜೇತರನ್ನು ಆಯ್ಕೆ ಮಾಡಿದ್ದರು.

ಈಕೆ 2021 ಬೆಂಗಳೂರಿನಲ್ಲಿ ನಡೆದ ಇಗ್ನೈಟ್ ಇಂಡಿಯಾ ಮೆರಾಕ್ಕಿ ಫ್ಯಾಶನ್ ಸ್ಪರ್ಧೆಯ ಆರು ಜನ ವಿಜೇತರಲ್ಲಿ ಸ್ವೀಝಲ್ ಕೂಡ ಒಬ್ಬರಾಗಿದ್ದು, “ಫ್ರೆಶ್ ಫೇಸ್ ಆಫ್ ಇಗ್ನೈಟ್ ಇಂಡಿಯಾ 2021” ರ ಜೈಪುರ್ ನಲ್ಲಿ ನಡೆದ “ಸ್ಟಾರ್ ಮಿಸ್ ಟೀನ್ ಇಂಡಿಯಾ ಕಿರೀಟವನ್ನು ಕೂಡಾ ಮುಡಿಗೇರಿಸಿಕೊಂಡಿದ್ದರು.

ಫೆಬ್ರವರಿ 2022 ಜೈಪುರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ “ಕ್ವೀನ್ ಆಫ್ ಕಾಸ್ಮೋಸ್ 2022″ರ ಸ್ಪರ್ಧೆಯಲ್ಲಿ ಫೈನಲ್ ಹಂತವನ್ನು ತಲುಪಿದ್ದರು.

ಬಾರಕೂರು ಸವಿತಾ ಪ್ರುಟಾರ್ಡೊರವರ ಮಗಳಾದ ಈಕೆ ಪ್ರಸ್ತುತ ಬೆಂಗಳೂರಿನ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಬಾಲ್ಯದಿಂದಲೂ ಫ್ಯಾಶನ್ ಮತ್ತು ಮಾಡೆಲಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿದ್ದು 2017ರಲ್ಲಿ “ದಕ್ಷಿಣ ಭಾರತದ ಸೂಪರ್ ಮಾಡೆಲ್ ” ಮಕ್ಕಳ ವಿಭಾಗದಲ್ಲಿ ಕೂಡಾ ಪ್ರಶಸ್ತಿಯನ್ನು ಪಡೆದಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!