7.1 C
New York
Tuesday, March 21, 2023

Buy now

spot_img

ಅಗ್ನಿಪಥ್ ಯೋಜನೆಯಡಿ ವಾಯುಸೇನೆ ನೇಮಕಾತಿಗೆ ಪ್ರವೇಶ ಪರೀಕ್ಷೆ: ಅರ್ಜಿ ಆಹ್ವಾನ

ಉಡುಪಿ: ಅಗ್ನಿಪಥ್ ಯೋಜನೆಯಡಿ ಭಾರತೀಯ ವಾಯುಸೇನೆಯ ತಾಂತ್ರಿಕ ಮತ್ತು ತಾಂತ್ರಿಕೇತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಜುಲೈ 24 ರಂದು ನಡೆಯುವ ಆನ್‌ಲೈನ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ.

1999 ಡಿಸೆಂಬರ್ 29ರಿಂದ 2005 ಜೂನ್ 29 ರ ಒಳಗೆ ಜನಿಸಿರುವ, ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಕಲಾ, ವಾಣಿಜ್ಯ, ವಿಜ್ಞಾನ, ವಿಭಾಗದಲ್ಲಿ ಶೇ. 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರುವ, ಅಭ್ಯರ್ಥಿಗಳು ಜುಲೈ 5 ರ ಒಳಗೆ ವೆಬ್‌ಸೈಟ್ http://agnipathvayu.cdac.in ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದಿ, ಮಣಿಪಾಲ, ಉಡುಪಿ ಅಥವಾ ಮೊ.ನಂ. 9945856670, 8197440155 ಮತ್ತು 8105618291 ನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Stay Connected

21,961FansLike
3,745FollowersFollow
0SubscribersSubscribe
- Advertisement -spot_img
- Advertisement -spot_img

Latest Articles

error: Content is protected !!