Thursday, March 28, 2024

ಜೀವನದಲ್ಲಿ ಮರೆಯಬೇಡ, ಮುರಿಯಬೇಡ, ಮೆರೆಯಬೇಡ-ವಿದ್ಯಾರ್ಥಿಗಳಿಗೆ ಡಾ.ಪಿ.ವಿ ಭಂಡಾರಿ ಕಿವಿಮಾತು

ಸಿದ್ದಾಪುರ ಸರಸ್ವತಿ ವಿದ್ಯಾಲಯದಲ್ಲಿ ಪೂರ್ವ ವಿದ್ಯಾರ್ಥಿಗಳ ಸಹಮಿಲನ ‘ನವಚೇತನ’, ಅಭಿನಂದನಾ ಕಾರ್ಯಕ್ರಮ

ಸಿದ್ದಾಪುರ, ಜೂ.25: ಜೀವನದಲ್ಲಿ ಮರೆಯಬೇಡ, ಮುರಿಯಬೇಡ, ಮೆರೆಯಬೇಡ ಎನ್ನುವ ಮೂರು ಅಂಶಗಳನ್ನು ಮೈಗೂಡಿಸಿಕೊಳ್ಳಬೇಕು. ಕಲಿತ ಶಾಲೆಯನ್ನು ಯಾವತ್ತೂ ಮರೆಯಬಾರದು. ಜೀವನದಲ್ಲಿ ಉನ್ನತ ಸ್ಥಾನಕ್ಕೇರಿದಾಗ ಶಾಲೆಯ ಅವಶ್ಯತೆಗಳಿಗೆ ಸ್ಪಂದಿಸುವ ಗುಣ ಮೈಗೂಡಿಸಿಕೊಳ್ಳಬೇಕು, ಕಲಿತ ಶಾಲೆಯ ಸಹಪಾಠಿಗಳ ಸ್ನೇಹ ಬಾಂಧವ್ಯವನ್ನು ಯಾವತ್ತೂ ಮುರಿಯಬಾರದು. ಜೀವನದಲ್ಲಿ ಎಷ್ಟೇ ದೊಡ್ಡ ಸ್ಥಾನಕ್ಕೇರಿದರೂ ಕಲಿತ ಶಾಲೆ, ಸ್ನೇಹಿತರನ್ನು ಮರೆತು ಮೆರೆಯಬಾರದು ಎಂದು ಡಾ.ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿ ಹೇಳಿದರು.

ಅವರು ಸಿದ್ದಾಪುರ ಸರಸ್ವತಿ ವಿದ್ಯಾಲಯದಲ್ಲಿ ನಡೆದ ಪೂರ್ವ ವಿದ್ಯಾರ್ಥಿಗಳ ಸಹಮಿಲನ ‘ನವಚೇತನ’, ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣದಲ್ಲಿ ಅಂಕ ಪಡೆಯುವುದಷ್ಟೇ ಪ್ರಮುಖವಲ್ಲ, ನಾಯಕತ್ವ, ಕ್ರೀಡೆ, ಶಿಸ್ತು ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಸಾಧನೆಯನ್ನು ಉತ್ತೇಜಿಸುವ ಕಾರ್ಯ ಅವರ ಮುಂದಿನ ಸಾಧನೆಗೆ ಪೂರಕವಾಗುತ್ತದೆ. ಆ ಹಿನ್ನೆಲೆಯಲ್ಲಿ ಸಿದ್ಧಾಪುರದ ಸರಸ್ವತಿ ವಿದ್ಯಾಲಯ ಇವತ್ತು ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಯಶಸ್ಸಿನ ಪಯಣ ನಿಲ್ಲಬಾರದು ನಿರಂತರವಾಗಿರಬೇಕು ಎಂದರು.

ಈ ವಿದ್ಯಾಲಯ ಯಶಸ್ವಿ 21 ವರ್ಷಗಳನ್ನು ಪೂರೈಸಿದ್ದು, 2011ರಿಂದ ಎಸ್.ಎಸ್.ಎಲ್.ಸಿಯನ್ನು 12 ಬ್ಯಾಚ್‌ಗಳನ್ನು ಮುಗಿಸಿದ್ದಾರೆ. ನಿರಂತರ ಶೇ.100 ಫಲಿತಾಂಶವನ್ನು ದಾಖಲಿಸುತ್ತಾ ಬಂದಿರುವ ಸಂಸ್ಥೆಯ 2011ರಿಂದ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿಗಳ ಸಹಮಿಲನ ‘ನವಚೇತನ’ ಕಾರ್ಯಕ್ರಮದಲ್ಲಿ ನೂತನ ಹಳೆ ವಿದ್ಯಾರ್ಥಿಗಳ ಸಂಘವನ್ನು ರಚನೆ ಮಾಡಲಾಯಿತು.

ಸರಸ್ವತಿ ವಿದ್ಯಾಲಯದ ಆಡಳಿತ ಸಮಿತಿ ಸಂಚಾಲಕರಾದ ದಕ್ಕೇರಬಾಳು ಗೋಪಾಲಕೃಷ್ಣ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವಸ್ಥ ಮಂಡಳಿ ಸದಸ್ಯರಾದ ಟಿ.ಜಿ ಪಾಂಡುರಂಗ ಪೈ, ಲಕ್ಮಣ್ ರೈ ಪ್ರಭು, ವಾಸುದೇವ್ ಉಡುಪ, ರಾಮ್ ರೈ ಕಾಮತ್, ಮಂಜುನಾಥ್ ಕಾಮತ್, ವಿಠೋಭಾ ಶಣೈ, ವಿನಾಯಕ ಶಣೈ, ಗೋಪಿನಾಥ್ ಕಾಮತ್, ಪಾಂಡುರಂಗ ಕಾಮತ್, ಶ್ರೀನಾಥ್ ಪೈ, ರತ್ನಾಕರ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

ಮುಖ್ಯ ಶಿಕ್ಷಕಿ ಅಕ್ಷತಾ ಸ್ವಾಗತಿಸಿ, ಶಾಲೆಯ ಪ್ರಾಂಶುಪಾಲರಾದ ಪ್ರಿಯಾ ಶಾಲೆಯ ವರದಿಯನ್ನು ವಾಚಿಸಿದರು. ಪ್ರಶಾಂತ್ ಪಿ. ವಂದಿಸಿದರು. ಪ್ರಜ್ಜಾ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
21,600SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!