spot_img
Thursday, April 2, 2026
spot_img

ಸಿದ್ಧಾಪುರ ಸರಸ್ವತಿ ವಿದ್ಯಾಲಯದಲ್ಲಿ ಪೂರ್ವ ವಿದ್ಯಾರ್ಥಿಗಳ ಪುನರ್‌ಮಿಲನ : ಎಸ್.ಎಸ್.ಎಲ್.ಸಿ ಸಾಧಕರಿಗೆ ಅಭಿನಂದನೆ

ಕುಂದಾಪುರ: ಸಂಸ್ಕಾರಯುತ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ದಕ್ಕೇರಬಾಳು ಶ್ರೀನಿವಾಸ ಕಾಮತರ ಆಶಯದಂತೆ 2001ರಲ್ಲಿ ಸಿದ್ಧಾಪುರದಲ್ಲಿ ಆರಂಭವಾದ ಸರಸ್ವತಿ ವಿದ್ಯಾಲಯ ಶಿಶುಮಂದಿರದಿಂದ ಆರಂಭಗೊಂಡು ಪ್ರೌಢಶಿಕ್ಷಣದ ತನಕ ಮೌಲ್ಯಯುತ ಶಿಕ್ಷಣವನ್ನು ನೀಡುತ್ತಿದ್ದು, 21 ವರ್ಷಗಳನ್ನು ಪೂರೈಸಿದ್ದು, 2011ರಿಂದ ಎಸ್.ಎಸ್.ಎಲ್.ಸಿಯನ್ನು 12 ಬ್ಯಾಚ್‌ಗಳನ್ನು ಮುಗಿಸಿದ್ದು, ನಿರಂತರ ಶೇ.100 ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ. ಸಂಸ್ಥೆಗೆ 21 ವರ್ಷ ತುಂಬಿದ ಸಂದರ್ಭದಲ್ಲಿ ಜೂನ್ 25 ಶನಿವಾರ ಪೂರ್ವ ವಿದ್ಯಾರ್ಥಿಗಳ ಸಹಮಿಲನ ನವಚೇತನ, ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಿದೆ ಎಂದು ಸರಸ್ವತಿ ವಿದ್ಯಾಲಯದ ಆಡಳಿತ ಸಮಿತಿ ಸಂಚಾಲಕರಾದ ದಕ್ಕೇರಬಾಳು ಗೋಪಾಲಕೃಷ್ಣ ಕಾಮತ್ ಹೇಳಿದರು.

ಅವರು ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದರು.
ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದ್ದು ಮುಖ್ಯ ಅತಿಥಿಗಳಾಗಿ ಡಾ.ಎ.ವಿ ಬಾಳಿಗ ಆಸ್ಪತ್ರೆಯ ಮನೋವೈದ್ಯರಾದ ಡಾ.ಪಿ.ವಿ ಭಂಡಾರಿ, ಬೆಂಗಳೂರಿನ ಆರ್.ಎನ್.ಎಸ್ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಸುಧೀರ್ ಪೈ, ಎಂಐ.ಟಿಯ ಡಾ.ನಾರಾಯಣ ಶೆಣೈ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ 2011ರಿಂದ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.

70 ವಿದ್ಯಾರ್ಥಿಗಳಿಂದ ವಿದ್ಯಾಸಂಸ್ಥೆ ಆರಂಭಗೊಂಡಿದ್ದು ಈಗ 410 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕೆಲವೊಂದು ಶೈಕ್ಷಣಿಕ ವರ್ಷಗಳಲ್ಲಿ 600 ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ್ದರು. 2011-12ರ ಪ್ರಥಮ ಬ್ಯಾಚ್‌ನಲ್ಲಿ 615 ಅಂಕ ಪಡೆದು ಕೀರ್ತನ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ೫ನೇ ಸ್ಥಾನ ಪಡೆದಿದ್ದರು ಎಂದರು.

2016-17ರಿಂದ ಸಂಸ್ಥೆಯಲ್ಲಿ ಫ್ರೀ ಕೆ.ಜಿಯಿಂದ 10ನೇ ತರಗತಿವರೆಗೂ ಸಂಪೂರ್ಣ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಯಾವುದೇ ಡೋನೇಷನ್ ಸ್ವೀಕರಿಸದೇ, ಶೈಕ್ಷಣಿಕ ಶುಲ್ಕ ಮಾತ್ರ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ವಿದ್ಯಾಸಂಸ್ಥೆಗೆ ವಿದ್ಯಾಭಾರತಿ ಕರ್ನಾಟಕ ಇದರ ಮಾರ್ಗದರ್ಶನವೂ ದೊರೆಯುತ್ತಿದೆ ಎಂದರು.

ಸುದ್ಧಿಗೋಷ್ಠಿಯಲ್ಲಿ ವಿಶ್ವಸ್ಥ ಮಂಡಳಿ ಸದಸ್ಯ ಟಿ.ಜಿ ಪಾಂಡುರಂಗ ಪೈ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!