Sunday, September 8, 2024

ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಮಟ್ಟದ ರ್‍ಯಾಂಕ್‌ಗಳೊಂದಿಗೆ ಉತ್ಕೃಷ್ಟ ಫಲಿತಾಂಶ ಪಡೆದ ಕುಂದಾಪುರದ ಶ್ರೀ ವೆಂಕಟರಮಣ ಪದವಿಪೂರ್ವ ಕಾಲೇಜು

ಕುಂದಾಪುರ: ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಹಲವು ರ್‍ಯಾಂಕ್ ಪಡೆಯುವುದರ ಮೂಲಕ ಕಾಲೇಜಿನ ಗರಿಮೆಯನ್ನು ಹೆಚ್ಚಿಸಿಕೊಂಡಿದೆ.

ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಮೈತ್ರೇಯಿ (594) ರಾಜ್ಯಕ್ಕೆ ಐದನೇ ರ್‍ಯಾಂಕ್, ಮನಿಷ್. ಆರ್. ಹೆಬ್ಬಾರ್ (592) ಏಳನೇ ರ್‍ಯಾಂಕ್, ಪ್ರಾಚಿ. ಎನ್ (590) 9ನೇ ರ್‍ಯಾಂಕ್, ಕಾರ್ತಿಕ್ ಐತಾಳ್ (589) ಹತ್ತನೇ ರ್‍ಯಾಂಕ್ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ದೀಕ್ಷಾ ಭಟ್ ಮತ್ತು ಪಂಚಮಿ ಕಿಣಿ (592) ಐದನೇ ರ್‍ಯಾಂಕ್ ಹಾಗೂ ಶ್ರೀಶ (591) 6ನೇ ರ್‍ಯಾಂಕ್, ಕೃತಿಕಾ (590) 7ನೇ ರ್‍ಯಾಂಕ್, ಅದಿತಿ, ಶ್ರದ್ಧಾ ಸಾಲಿಯಾನ್ (589) ಎಂಟನೇ ರ್‍ಯಾಂಕ್, ದೇವಾಡಿಗ ಅಂಜಲಿ ಚಂದ್ರ, ರಕ್ಷಿತಾ ಆನಂದ ಪೂಜಾರಿ (588) ಒಂಭತ್ತನೇ ರ್‍ಯಾಂಕ್‌ಗಳಿಸುವುದರ ಮೂಲಕ 12 ವಿದ್ಯಾರ್ಥಿಗಳು ರಾಜ್ಯದ ಅಗ್ರ ಸ್ಥಾನಿಯರಲ್ಲಿ ಸ್ಥಾನ ಪಡೆದಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 216 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು 120 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 87 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ವಿಜ್ಞಾನ ವಿಭಾಗದಲ್ಲಿ 337 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 166 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 155ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!