spot_img
Thursday, April 2, 2026
spot_img

ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಹಿರಿಯರಿಗೆ ಸನ್ಮಾನ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯ ಪ್ರತಿಭೆ ನಿಮ್ಮದು, ವೇದಿಕೆ ನಮ್ಮದು ವಿನೂತನ 72ನೇ ಸರಣಿ ಕಾರ್ಯಕ್ರಮ ಇತ್ತೀಚೆಗೆ ಗೊಂಬೆ ಮನೆಯಲ್ಲಿ ಜರುಗಿತು.

ದೇವರಾಯ ಬಿಡುವಾಳ್ ಪ್ರತಿಷ್ಠಾನ, ಹೇರೂರು, ರಾಗಿಹಕ್ಲು ಇದರ ಅಧ್ಯಕ್ಷರು ಮತ್ತು ಉಪ್ಪಿನಕುದ್ರು ಗೊಂಬೆಯಾಟದ ಹಿರಿಯ ಸೂತ್ರಧಾರಿ ವೆಂಕಟರಮಣ ಬಿಡುವಾಳ್ ಹಾಗೂ ಹಿರಿಯರಾದ ಉದ್ಯಮಿ ಗೋವಿಂದರಾಯ ಪೈ, ಹೆಮ್ಮಾಡಿ ರವರನ್ನು ಅಕಾಡೆಮಿಯ ವತಿಯಿಂದ ಸನ್ಮಾನಿಸಲಾಯಿತು.

ಸಭಾಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಶುಪಾಲ ರತ್ನಾಕರ ಪೈ, ಉಪನ್ಯಾಸಕ ಕುಮಾರ ಶಂಕರನಾರಾಯಣ, ಕೊಗ್ಗ ದೇವಣ್ಣ ಕಾಮತ್ ಪ್ರಶಸ್ತಿ ವಿಜೇತ ಹಾಗೂ ಯಕ್ಷಗಾನ ಕಲಾವಿದರಾಮ ಎಂ. ಚಂದನ್, ಹೆಮ್ಮಾಡಿ, ಅಕಾಡೆಮಿಯ ಅಧ್ಯಕ್ಷರಾದ ಭಾಸ್ಕರ್ ಕೊಗ್ಗ ಕಾಮತ್ ಉಪಸ್ಥಿತರಿದ್ದರು.

ವೆಂಕಟರಮಣ ಬಿಡುವಾಳ್ ರವರು ಅಕಾಡೆಮಿಯ ಸದಸ್ಯರು ಹಾಗೂ ಎಲ್ಲಾ ಕಲಾವಿದರನ್ನು ಗೌರವಿಸಿದರು. ತದ ನಂತರ ದೇವರಾಯ ಬಿಡುವಾಳ್ ಪ್ರತಿಷ್ಠಾನ, ಹೇರೂರು, ರಾಗಿಹಕ್ಲು ಇದರ ವತಿಯಿಂದ ವೆಂಕಟರಮಣ ಬಿಡುವಾಳ್ ಪ್ರಾಯೋಜಕತ್ವದಲಿ, ಭಾಗವತ ಉಮೇಶ್ ಸುವರ್ಣರವರ ನೇತೃತ್ವದಲ್ಲಿ ಯಕ್ಷಗಾನ ತಾಳಮದ್ದಲೆ ಶ್ರೀ ಕೃಷ್ಣ ಸಂಧಾನ ಸಾಂಗವಾಗಿ ನೆರವೇರಿತು. ಶಿಕ್ಷಕ ನಾಗೇಶ್ ಶ್ಯಾನುಭಾಗ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!