spot_img
Thursday, April 2, 2026
spot_img

ವಿಕಾಸ್ ಬೈಕ್ ಯಾತ್ರೆ ಹಾಸ್ಯಾಸ್ಪದ-ಕುಂದಾಪುರ ಬ್ಲಾಕ್ ಕಾಂಗ್ರೆಸ್

ಕುಂದಾಪುರ: ಪ್ರದಾನಿ ನರೇಂದ್ರ ಮೋದಿಯವರ ಸರ್ಕಾರದ 8 ವರ್ಷ ಆಡಳಿತವನ್ನು ಪೂರೈಸಿದ ಸಂದರ್ಭದಲ್ಲಿ ವಿಕಾಸ್ ತೀರ್ಥ ಬೈಕ್ ಯಾತ್ರೆ ಆಯೋಜನೆ ಹಾಸ್ಯಾಸ್ಪದ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಆರೋಪಿಸಿದೆ.

ಕಳೆದ 8ವರ್ಷಗಳಿಂದ ಪೆಟ್ರೋಲ್, ಡಿಸೇಲ್, ಗ್ಯಾಸ್‌ನಂತಹ ದಿನಬಳಕೆ ಆಹಾರ ವಸ್ತುಗಳ ಬೆಲೆ ಗಗನಕ್ಕೆರಿದೆ. ಇದರಿಂದ  ಬಡವರು ಮತ್ತು ಮಾಧ್ಯಮ ವರ್ಗದವರು ತೀವ್ರ  ನೊಂದಿದಾರೆ. ಕಟ್ಟಡ ಸಾಮಗ್ರಿಗಳ ಬೆಲೆ ಗಗನಕ್ಕೇರಿದೆ.

ಕೇಂದ್ರದ ಬಿಜೆಪಿ ಸರಕಾರ ಮತ್ತು ಪಕ್ಷ ತನ್ನ ವೈಫಲ್ಯವನ್ನು ಮುಚ್ಚಿಡಲು ಕೋಮುಗಲಭೆಯಂತಹ ಸೂಕ್ಷ್ಮ ವಿಚಾರಗಳನ್ನು ಸೃಷ್ಟಿಸಿ ಜನರ ಶಾಂತಿ ಸಾಹಬಾಳ್ವೆ ಮತ್ತು ನೆಮ್ಮದಿಯನ್ನು ಕೆಡಿಸುತ್ತಿಸುತ್ತಿದೆ. 

ದೇಶದ ಪ್ರಧಾನಿಯಾದವರು ಪಾಲಿಸಬೇಕಾದ ರಾಜಧರ್ಮ ನರೇಂದ್ರ ಮೋಧಿಯಿಂದ ಪಾಲನೆಯಾಗುತ್ತಿಲ್ಲ. ಸಾಂವಿಧಾನಿಕ ಹುದ್ದೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರನ್ನು ಬೆದರಿಸಲಾಗುತ್ತಿದೆ.

ದೇಶ ಕಳೆದ ೮ ವರ್ಷದಿಂದ 30 ವರ್ಷ ಹಿಂದೆ ತಳ್ಳಲ್ಪಟ್ಟಿದೆ. ಈ ವಿಕಾಸ ಬೈಕ್ ಯಾತ್ರೆ ಯಾವ ಉದ್ದೇಶಕ್ಕೆ ನೆಡೆಸಲಾಗುತ್ತಿದೆ ಎಂದು ಜನರಿಗೆ ತಿಳಿಸಬೇಕೆಂದು ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ ಶೆಟ್ಟಿ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!