spot_img
Thursday, April 2, 2026
spot_img

ಶಿಕ್ಷಣವನ್ನು ತರ್ಕವಾಗಿ ತುರುಕಿಸಬೇಡಿ ಮುಗ್ದ ಮನಸ್ಸಿಗೆ ಅರ್ಥವಾಗಿಸಿ ಹೇಳಿ-ಶಂಕರ್ ಐತಾಳ್

ಕೋಟ: ಸರಕಾರಿ ಪ್ರೌಢ ಶಾಲೆ ವಡ್ಡರ್ಸೆಯಲಿ ಪಠ್ಯ ಪರಿಕರವನ್ನು ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ನೀಡಲಾಯಿತು.

ಸುಮಾರು 45 ಸಾವಿರ ಮೌಲ್ಯದ ನೋಟ್ಸ್ ಪುಸ್ತಕವನ್ನು ವಿತರಿಸಿದ ಗೀತಾ ಎಚ್.ಎಸ್.ಎನ್.ಪೌಂಡೇಶನ್ ಪ್ರವರ್ತಕರಾದ ಶಂಕರ್ ಐತಾಳ್, ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳು ವಿದ್ಯಾರ್ಥಿಸ್ನೇಹಿಯಾಗಿ ನಡೆಯಬೇಕು ವಿದ್ಯಾರ್ಥಿ ಹಾಗೂ ಗುರುಗಳ ನಡುವೆ ತಾಯಿಯ ಮಮತೆ‌ ಇರಬೇಕು ಹಾಗೆ ಮಕ್ಕಳಿಗೆ ಶಿಕ್ಷಣ ನೀಡಬೇಕು ವಿನಃ ತುರಕಬಾರದು. ಗುರುಕುಲ ಮಾದರಿಯಲ್ಲಿ ಊರಿನ ಶಾಲಾ ಭೌತಿಕ ವ್ಯವ್ಯಸ್ಥೆ ರೂಪಿಸ ಬೇಕು ಎಂದು ಹೇಳಿದರು.

ಶ್ರೀ ಮಹಾತೋಬಾರ ಮಹಾಲಿಂಗೇಶ್ವರ ದೇವಸ್ಥಾನ ವಡ್ಡರ್ಸೆ ಇದರ ಧರ್ಮದರ್ಶಿ ಉದಯಕುಮರ್ ಶೆಟ್ಟಿ ಶಾಲಾ ವಿವಿಧ ಶೈಕ್ಷಣಿಕ ಕ್ಲಬ್‌ಗಳ ಉದ್ಘಾಟನೆ ಮಾಡಿ, ಪಠ್ಯದೊಂದಿಗೆ ಸಹ ಪಠ್ಯವು ಅತೀ ಮುಖ್ಯವಾದುದು, ಊರಿನ ಪ್ರತಿಯೊಬ್ಬರು ಶಾಲೆಯ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ, ಸಂಸ್ಥೆಯು ರಜತ ಮಹೋತ್ಸವವನ್ನು ಉತ್ತಮವಾಗಿ ನಿರ್ವಹಿಸಲಿ ಎಂದರು.

ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ರಾಜ್ಯ ಮಟ್ಟದಲ್ಲಿ ದಾಖಲೆಯ ಸಾಧನೆ ಮಾಡಿದ ಸಂಸ್ಥೆಯ ಸಾಧಕ ಶಿಕ್ಷಕಿ ಗೀತಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಶಂಕರ ಹೆಗ್ಡೆ, ವಿದ್ಯಾರ್ಥಿಗಳು ಭವಿಷ್ಯ ಚಿಂತಕರು‌ ಅವರಿಗೆ ಸಮಯ ಹೆಚ್ಚು ಇರುವುದು. ದೇವರು ಕೊಟ್ಟ ಸಮಯದ ಬುತ್ತಿಯನ್ನು ಸರಿಯಾಗಿ ಬಳಸಿಕೊಂಡಾಗ ಮಾತ್ರ ಸಾಧನೆಯ ಗುರಿ ತಲುಪಬಹುದು ಎಂದರು.

ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ರಮ್ಯ ವಹಿಸಿದ್ದರು. ಊರಿನ ಶಿಕ್ಷಣ ತಜ್ಞರಾದ ಚಂದ್ರ ಶೆಟ್ಟಿ ಯಾಳಹಕ್ಲು ದತ್ತಿನಿಧಿಯನ್ನು ಸಾಧಕ ವಿದ್ಯಾರ್ಥಿಗಳಿಗೆ ವಿತರಿಸಿದರು.

ಮುಖ್ಯೋಪಾಧ್ಯಾರಾದ ಆನಂದ ಶೆಟ್ಟಿ ಸ್ವಾಗತಿಸಿದರು. ಶಿಕ್ಷಕಿ ಭಾರತಿ ಪ್ರಾಸ್ತಾವಿಕ ಮಾತನಾಡಿದರು, ಗೀತಾ ಶೆಟ್ಟಿ ವಂದಿಸಿದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,800SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!