Sunday, September 8, 2024

ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ ರಚನೆ

ಬೈಂದೂರು: ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ವಿದ್ಯಾರ್ಥಿ ಸಂಸತ್ತು ರಚನಾ ಕಾರ್ಯಕ್ರಮ ನಡೆಯಿತು.

ನಾವುಂದ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಾನಕಿ ಮೊಗವೀರ ಕಾರ್ಯಕ್ರಮ ಉದ್ಫಾಟನೆ ಮಾಡಿ ಚುನಾಯಿತರಾದ ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಮಕ್ಕಳ ನಾಯಕತ್ವದ ವರ್ಚಸ್ಸನ್ನು ಬೆಳೆಸುವ ಮತ್ತು ಮುಂದಾಳತ್ವವನ್ನು ಎಳೆವೆಯಲ್ಲಿಯೇ ರೂಪಿಸಲು, ಶುಭದಾ ಶಾಲೆ ಮತದಾನದ ಪ್ರಕ್ರಿಯೆಯ ಮೂಲಕ ನಡೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಚುನಾಯಿತರಾದ ಶಾಲಾ ನಾಯಕ ಮತ್ತು ವಿವಿಧ ಕ್ಲಬ್‌ಗಳ ನಾಯಕರಿಗೆ ಪುಷ್ಪವನ್ನು ನೀಡಿ ಸ್ವಾಗತಿಸಿ, ಬ್ಯಾಡ್ಜ್ ನೀಡಲಾಯಿತು.

ಮುಖ್ಯ ಶಿಕ್ಷಕರಾದ ರವಿದಾಸ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳನ್ನಾಡಿದರು, ಆಡಳಿತ ಮಂಡಳಿ ಸದಸ್ಯರಾದ ಆರ್.ಕೆ ಬಿಲ್ಲವ, ರಾಜೀವ ಶೆಟ್ಟಿ ಮತ್ತು ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ನಾಗರತ್ನ ಸ್ವಾಗತಿಸಿ, ಶಿಕ್ಷಕಿ ಗಾಯತ್ರಿ ವಂದಿಸಿದರು, ಶಿಕ್ಷಕಿ ಚೈತ್ರಾ ಕಾರ್ಯಕ್ರಮವನ್ನು ನಿರೂಪಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!