Sunday, September 8, 2024

ಸಮಾಜಸೇವೆ ಹಾಗೂ ಸಾಂಸಾರಿಕವಾಗಿ ಆದರ್ಶಯುತ ಬದುಕು ಕಟ್ಟೆ ಬೋಜಣ್ಣರದ್ದು-ಡಾ.ಜಿ.ಶಂಕರ್

ಕುಂದಾಪುರ, ಜೂ.11: ಹುಟ್ಟಿದ ಮೇಲೆ ಸಮಾಜಸೇವೆ ಹಾಗೂ ಸಾಂಸಾರಿಕವಾಗಿ ಆದರ್ಶಪ್ರಾಯರಾಗಿ ಬದುಕಬೇಕು. ಆ ಹಿನ್ನೆಲೆಯಲ್ಲಿ ನೋಡುವಾಗ ಕಟ್ಟೆ ಬೋಜಣ್ಣ ಅವರು ಸಂಸಾರ ಮತ್ತು ಸಮಾಜದಲ್ಲಿ ಉತ್ತಮವಾದ ತುಂಬು ಜೀವನ ನಡೆಸಿದವರು. ಅಗಲಿದ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿಯನ್ನು ಅನುಗ್ರಹಿಸಲಿ, ಅವರ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ.ಜಿ.ಶಂಕರ್ ಹೇಳಿದರು.

ಅವರು ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬಯಿ, ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ವತಿಯಿಂದ ಬಗ್ವಾಡಿ ಶ್ರೀ ಮಹಿಷಾಮರ್ದಿನಿ ಸಭಾಭವನದಲ್ಲಿ ನಡೆದ ಮೇ 26ರಂದು ನಿಧನರಾದ ಮೊಗವೀರ ಸಮಾಜದ ಮುಂದಾಳು ಆಗಿದ್ದ ಕಟ್ಟೆ ಗೋಪಾಲಕೃಷ್ಣ ರಾವ್ (ಬೋಜಣ್ಣ) ಅವರಿಗೆ ಶ್ರದ್ದಾಂಜಲಿ ಸಭೆಯಲ್ಲಿ ಅವರು ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬೈ, ಬಗ್ವಾಡಿ ಹೋಬಳಿ ಕುಂದಾಪುರ ಶಾಖೆಯ ನಿಕಟಪೂರ್ವ ಅಧ್ಯಕ್ಷರಾದ ಕೆ.ಕೆ ಕಾಂಚನ್ ಮಾತನಾಡಿ, ಬಗ್ವಾಡಿ ಮಹಿಷಾಸುರಮರ್ದಿನಿ ದೇವಸ್ಥಾನ ಜೀರ್ಣೋದ್ದಾರ ಸಂದರ್ಭದಲ್ಲಿ ಅವರು ವ್ರತಾನಿಷ್ಠರಾಗಿದ್ದುಕೊಂಡು, ನಿಗಧಿತ ಅವಧಿಯಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಮಹತ್ವದ ಪಾತ್ರ ವಹಿಸಿದ್ದರು. ಬಾಹ್ಯ ನೋಟಕ್ಕೆ ಅವರು ಗಂಭೀರರಾಗಿ ಕಂಡರೂ ಮಗುವಿನಂತಹ ಮನಸ್ಥಿತಿ ಅವರದ್ದಾಗಿತ್ತು ಎಂದರು.

ಮೊಗವೀರ ಮಹಾಜನ ಸೇವಾ ಸಂಘ ರಿ., ಮುಂಬೈ, ಬಗ್ವಾಡಿ ಹೋಬಳಿ ಮಾಜಿ ಅಧ್ಯಕ್ಷರಾದ ಮಹಾಬಲ ಕುಂದರ್ ನುಡಿನಮನ ಸಲ್ಲಿಸಿ, ಕಟ್ಟೆ ಬೋಜಣ್ಣ ಅವರ ಸೇವೆ ಯಾರೂ ಮರೆಯುವಂತಿಲ್ಲ. ಧಾರ್ಮಿಕವಾಗಿ, ಸಾಮಾಜಿಕವಾಗಿ ಅವರ ಸಲ್ಲಿಸಿದ ಸೇವೆ ಗಮನಾರ್ಹವಾದುದು ಎಂದರು.

ಕುಂದಾಪುರ ಶಾಖೆಯ ಮಾಜಿ ಅಧ್ಯಕ್ಷರಾದ ಎಂ.ಎಂ.ಸುವರ್ಣ ಮಾತನಾಡಿ, ಕಟ್ಟೆ ಬೋಜಣ್ಣ ಬಗ್ವಾಡಿ ದೇವಸ್ಥಾನ ಜೀರ್ಣೋದ್ಧಾರ ಸಂದರ್ಭದಲ್ಲಿ ನಿರ್ವಹಿಸಿದ ಕಾರ್ಯವೈಖರಿ, ಶ್ರದ್ದೆ, ತಾಳ್ಮೆ, ಛಲ ಸ್ಮರಣೀಯವಾದುದು. ದೊಡ್ಡ ಉದ್ಯಮಿಯಾಗಿದ್ದರೂ ಕೂಡಾ ಸಲಹೆಗಳನ್ನು ಸ್ವೀಕರಿಸುತ್ತಿದ್ದರು ಎಂದರು.

ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ.ಉಮೇಶ ಪುತ್ರನ್ ಮಾತನಾಡಿ, ಅವರಿಗೆ ೭೯ ವರ್ಷ ಪ್ರಾಯವಾದರೂ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಇದ್ದಿರಲಿಲ್ಲ. ಉತ್ತಮ ದೈಹಿಕ ಕ್ಷಮತೆ ಹೊಂದಿದ್ದರು. ಪ್ರವಾಸದ ಸಮಯದ ಅನುಭವಗಳನ್ನು ದಿನಚರಿಯಲ್ಲಿ ದಾಖಲಿಸುತ್ತಿದ್ದರು. ಅವರು ಜೀವನದಲ್ಲಿ ಅನುಸರಿಸುತ್ತಿದ್ದ ಶಿಸ್ತಿನ ಜೀವನ ಕ್ರಮ, ಆರೋಗ್ಯ, ಆಹಾರದಲ್ಲಿಯೂ ಅವರು ಅನುಸರಿಸುತ್ತಿದ್ದ ಕಟ್ಟುನಿಟ್ಟು ಅಂತಹದ್ದು. ೩೫ಕ್ಕೂ ಹೆಚ್ಚು ವರ್ಷಗಳ ಕಾಲ ಶಬರಿಮಲೈ ಯಾತ್ರೆ ಮಾಡಿದ್ದ ಅವರ, ಭಕ್ತಿ, ವ್ರತಾಚರಣೆ, ವೇಗವನ್ನು ಅವರೊಂದಿಗಿದ್ದ ಯುವಕರಿಗೂ ಅವರನ್ನು ಅನುಸರಿಸುವುದು ಕಷ್ಟವಾಗಿತ್ತಂತೆ ಎಂದು ಹೇಳಿದರು.

ಡಾ.ಚಿನ್ಮಯಿ ಮಾತನಾಡಿ, ಅಜ್ಜನಿಂದ ನಾನು ಸಾಕಷ್ಟು ಕಲಿತಿದ್ದೇನೆ. ಗ್ಯಾರೇಜ್‌ನಿಂದ ಬದುಕಿನ ಹೆಜ್ಜೆಗಳನಿಟ್ಟು ಪರಿಶ್ರಮದ ಮೂಲಕ ಬೆಳೆದ ಅಜ್ಜ ನನಗೆ ಮಾದರಿ. ಅವರು ಕಲಿಸಿದ ಜೀವನಮೌಲ್ಯಗಳನ್ನು ನಾನು ಯಾವತ್ತೂ ಮರೆಯಲಾರೆ ಎಂದರು.

ಮೊಗವೀರ ಮಹಾಜನ ಸೇವಾ ಸಂಘದ ಮಾಜಿ ಅಧ್ಯಕ್ಷರಾದ ಬಿ. ಹಿರಿಯಣ್ಣ ಚಾತ್ರಬೆಟ್ಟು, ಬಾರ್ಕೂರು ಸಂಯುಕ್ತ ಸಭಾದ ಅಧ್ಯಕ್ಷರಾದ ಸತೀಶ್ ಅಮೀನ್, ಮೊಗವೀರ ಯುವ ಸಂಘಟನೆಯ ನಿಕಟಪೂರ್ವ ಜಿಲ್ಲಾಧ್ಯಕ್ಷರಾದ ಶಿವರಾಮ ಕೆ.ಎಂ., ಉದ್ಯಮಿ ಎನ್.ಡಿ ಚಂದನ್, ಕಟ್ಟೆ ಬೋಜಣ್ಣನವರ ಕುಟುಂಬದ ರಾಜೇಂದ್ರ ಕಟ್ಟೆ, ಸುಮಾ ಪುತ್ರನ್, ಡಾ.ಚಿರಾಯು, ಮೊಗವೀರ ಯುವ ಸಂಘಟನೆಯ ಪದಾಧಿಕಾರಿಗಳು, ಮೊಗವೀರ ಸ್ತ್ರೀಶಕ್ತಿಯ ಪದಾಧಿಕಾರಿಗಳು, ಮಹಿಷಾಮರ್ದಿನಿ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಮೊಗವೀರ ಮಹಾಜನ ಸೇವಾ ಸಂಘ ಬಗ್ವಾಡಿ ಹೋಬಳಿ, ಕುಂದಾಪುರ ಶಾಖಾಧ್ಯಕ್ಷರಾದ ಉದಯಕುಮಾರ್ ಹಟ್ಟಿಯಂಗಡಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.
ಶ್ರದ್ದಾಂಜಲಿ ಸಭೆಯ ಅಂಗವಾಗಿ ಮಹಿಷಾಸುರಮರ್ದಿನಿ ಭಜನಾ ಮಂಡಳಿ ಸದಸ್ಯರಿಂದ ಭಜನಾ ಕಾರ್ಯಕ್ರಮ ನೆಡೆಯಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!