spot_img
Wednesday, January 22, 2025
spot_img

ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್: 116ನೇ ಸೇವಾಯಜ್ಞ

ಕುಂದಾಪುರ: ದೇವಾಡಿಗ ಅಕ್ಷಯ ಕಿರಣ ಸೇವಾ ಫೌಂಡೇಶನ್ ತನ್ನ ಸೇವಾ ಕೈಂಕರ್ಯದ 115 ಮತ್ತು 116ನೇ ಸೇವಾಯಜ್ಞ ಪೂರೈಸಿದೆ.

ಕಳೆದ ವಾರ ಬಹಳ ತ್ವರಿತವಾಗಿ ತುರ್ತು ಆರ್ಥಿಕ ಅವಶ್ಯಕತೆ ಇರುವ ವೈದ್ಯಕೀಯ ಮನವಿ ಬಂದ ಹಿನ್ನೆಲೆಯಲ್ಲಿ ಜೂನ್ 2 ರಂದು ಬಳಗದ ಸೇವಾದಾರರು ಬೀಜಾಡಿಯ ಶ್ರೀ ಸುರೇಂದ್ರ ದೇವಾಡಿಗರ ಮನೆಗೆ ಭೇಟಿ ನೀಡಿ ಅಕ್ಷಯ ಕಿರಣ ಫೌಂಡೇಶನ್ ಪರವಾಗಿ ರೂ 30,000 ಮತ್ತು ಎಲ್ ಜಿ ಫೌಂಡೇಶನ್ ಕುಂದಾಪುರ ಪರವಾಗಿ ರೂ 10,000 (ಒಟ್ಟು ರೂ 40,000) ವನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೇವಾದಾರರು ಶಂಕರ್ ಅಂಕದಕಟ್ಟೆ, ರಾಜ ದೇವಾಡಿಗ ಗಂಗೊಳ್ಳಿ, ದಿನೇಶ್ ದೇವಾಡಿಗರು ಕುಂದಾಪುರ, ಸತೀಶ್ ದೇವಾಡಿಗರು ಕಾರ್ಕಡ, ಶ್ರೀನಿವಾಸ್ ದೇವಾಡಿಗರು ಮಾರ್ಕೋಡು ಮತ್ತು ಕೃಷ್ಣ ದೇವಾಡಿಗರು ಕುಂದಾಪುರ ಉಪಸ್ಥಿತರಿದ್ದರು.

ಕಳೆದ ತಿಂಗಳು ಕಿಡ್ನಿ ಸಮಸ್ಯೆಯಿಂದ ಬಳಳುತ್ತಿರುವ 28ರ ಹರೆಯದ ಪರ್ಕಳ ನಿವಾಸಿ ವಿಶ್ವನಾಥ್ ದೇವಾಡಿಗರ ಮನೆಗೆ ಜೂನ್ ದಿನಾಂಕ 5 ರಂದು ಸೇವಾದಾರರು ಭೇಟಿ ನೀಡಿ ರೂ 40,000 ಹಸ್ತಾಂತರಿಸಿ ಇಡೀ ಕುಟುಂಬ ಕ್ಕೆ ಆತ್ಮಸ್ಥೈರ್ಯ ತುಂಬಿದರು. ಈ ಸಂದರ್ಭದಲ್ಲಿ ಸೇವಾದಾರರು ಮಲ್ಪೆಯ ತೊನ್ಸ್ ಪಾರ್ ಅಂಡ್ ರೆಸ್ಟೋರೆಂಟ್ ನ ಮಾಲಕರು ಚಂದ್ರಕಾಂತ್ ದೇವಾಡಿಗರು ಮತ್ತು ಮುಂಬೈ ಸೇವಾದಾರರರು ಉಮಾವತಿ ಗುಜರನ್ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!