Sunday, September 8, 2024

ರಾಜ್ಯ ಸರ್ಕಾರಿ ನೌಕರರ ಸಂಘದ ಸಾಂಸ್ಕೃತಿಕ ಸ್ಪರ್ಧೆ: ಉಡುಪಿ ಜಿಲ್ಲಾ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ಕುಂದಾಪುರ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕ್ರತಿಕ ಸ್ಪರ್ಧೆ-2021-2022ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಡುಪಿ ಜಿಲ್ಲಾ ತಂಡ ನಾಟಕ ರಾಜ್ಯ ಮಟ್ಟದಲ್ಲಿ ಪ್ರಥಮಸ್ಥಾನಿಯಾಗಿ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದೆ.

ಶಶಿರಾಜ್ ಕಾವೂರು ರಚನೆಯ ‘ಬರ್ಬರಿಕ’ ನಾಟಕವನ್ನು ಈ ತಂಡ ಅದ್ಬುತವಾಗಿ ಪ್ರದರ್ಶಿಸಿದೆ. ನಾಟಕದ ನಿರ್ದೇಶನ, ವಿನ್ಯಾಸ ಮತ್ತು ಬೆಳಕು-ಬಿ.ಎಸ್ ರಾಮ್ ಶೆಟ್ಟಿ ಹಾರಾಡಿ, ವರ್ಣಾಲಂಕಾರ-ರಮೇಶ್ ಕಪಿಲೇಶ್ವರ ಇವರದ್ದು.

ರವಿ.ಎಸ್.ಪೂಜಾರಿ ಬೈಕಾಡಿ-(ಬರ್ಬರೀಕ), ಹರೀಶ್.ಪೂಜಾರಿ.ಎಸ್-(ಭೀಮಸೇನ, ರಾಕ್ಷಸ), ಸುರೇಂದ್ರ ಕೋಟ-(ಗೂರ), ನಾಗರತ್ನ.ಜಿ-(ಹಿಡಿಂಬೆ), ವನಿತಾ ಶೆಟ್ಟಿ-(ಮೌರ್ವಿ), ಲಕ್ಷ್ಮೀನಾರಾಯಣ ಪೈ-(ವಿಜಯ ಮುನಿ), ಮಹೇಶ್ ಮೊಗೇರ-(ಕಾಡು ಮನುಷ್ಯ, ಧರ್ಮರಾಯ), ಸತೀಶ್.ನಾಯ್ಕ್.ಎಸ್ ಬೇಳಂಜೆ-(ಕೃಷ್ಣ) ಸದಾಶಿವ ಕೆಂಚನೂರು-(ಕಾಡು ಮನುಷ್ಯ, ರಾಕ್ಷಸ, ಘಟೋತ್ಕಚ), ಗುರುಪ್ರಸಾದ್ ಮಾರಣಕಟ್ಟೆ-(ಕಾಡು ಮನುಷ್ಯ, ಚೆಂಡೆ ಸಹಕಾರ), ರವೀಂದ್ರ ಶೆಟ್ಟಿ-(ಕಾಡು ಮನುಷ್ಯ, ಅರ್ಜುನ) ಪಾತ್ರ ನಿರ್ವಹಿಸಿದ್ದಾರೆ.
ಚೆಂಡೆ ಮತ್ತು ತಾಳ ಸಹಕಾರ- ಕೇದಾರ್ ಪೈ, ಸರ್ವ ಸಹಕಾರ-ಭೂಮಿಕಾ (ರಿ) ಹಾರಾಡಿ ಅವರದ್ದು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!