spot_img
Monday, March 30, 2026
spot_img

ಪ್ರಭಲ ಗುರುಗಳಿಂದ ಬಲಿಷ್ಠವಾಗಿರುವ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳಿಗೆ ಸುಯೋಗ-ಹೇರಂಜಾಲು ಗೋಪಾಲ ಗಾಣಿಗ

ತೆಕ್ಕಟ್ಟೆಯಲ್ಲಿ ಯಕ್ಷಗಾನ ಹಿಮ್ಮೇಳ ತರಗತಿ ಉದ್ಘಾಟನೆ
ತೆಕ್ಕಟ್ಟೆ, ಜೂ.4: ಯಶಸ್ವೀ ಕಲಾವೃಂದ ಶಾಶ್ವತವಾಗಿ ಯಕ್ಷಗಾನ ಹಿಮ್ಮೇಳ ತರಗತಿಯನ್ನು ನಡೆಸಿಕೊಂಡು ಬರುತ್ತಿರುವುದು ನಿಜಕ್ಕೂ ಸ್ತುತ್ಯರ್ಹ. ಇಂತಹ ಸಂಸ್ಥೆಗಳ ಮೂಲಕವೇ ನಡುತಿಟ್ಟಿನ ಯಕ್ಷಗಾನ ಬೆಳಗಬೇಕಾಗಿದೆ. ಪ್ರಬಲ ಗುರುಗಳಿಂದ ಬಲಿಷ್ಠವಾಗಿರುವ ಈ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸದಾವಕಾಶ ದೊರೆತಿದೆ. ಕಲಿಕೆಯ ಮೂಲಕ ಯಕ್ಷಗಾನ ಪರಂಪರೆಯನ್ನು ಉಳಿಸುವ ಕಾರ್ಯ ಯಕ್ಷ ವಿದ್ಯಾರ್ಥಿಗಳಿಂದ ಆಗಲಿ ಎಂದು ಯಶಸ್ವಿ ಯಕ್ಷಗಾನ ಕಲಿಕಾ ಕೇಂದ್ರದ ತರಗತಿಯನ್ನು ಉದ್ಘಾಟಿಸಿ ಪ್ರಸಿದ್ಧ ಭಾಗವತರಾದ ಹೇರಂಜಾಲು ಗೋಪಾಲ ಗಾಣಿಗ ಅಭಿಪ್ರಾಯ ಪಟ್ಟರು.

ತೆಕ್ಕಟ್ಟೆ ಹಯಗ್ರೀವ ಕಲ್ಯಾಣ ಮಂಟಪದಲ್ಲಿ ಜೂನ್ 4ರಂದು ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆ ಆಶ್ರಯದಲ್ಲಿ 11ನೇ ವರ್ಷದ ಯಕ್ಷಗಾನ ಹಿಮ್ಮೇಳ ತರಗತಿಯನ್ನು ಉದ್ಘಾಟಿಸಿ ಹೇರಂಜಾಲು ಮಾತನ್ನಾಡಿದರು.

ಮುಖ್ಯ ಅತಿಥಿಗಳಾದ ಉಪನ್ಯಾಸಕ ಸುಜಯೀಂದ್ರ ಹಂದೆ ಮಾತನ್ನಾಡಿ, ಯಶಸ್ವೀ ಕಲಾವೃಂದ ಹಲವು ಮುಖಗಳಲ್ಲಿ ತನ್ನನ್ನು ತೆರೆದುಕೊಂಡು ಕ್ರಿಯಾಶೀಲವಾದ ಸಂಸ್ಥೆ. ಮಾನವ ಕ್ರಿಯಾಶೀಲತೆಯಿಂದ ಇತರ ಜೀವಿಗಳಿಗಿಂತ ಭಿನ್ನವಾಗಿದ್ದು ಇತಿಹಾಸವನ್ನು ಸೃಷ್ಠಿಸಬೇಕು. ಹಾಗಾಗಿ ಅಧ್ಯಯನಶೀಲತೆ ಮೈಗೂಡಿಸಿಕೊಂಡು ಕ್ರಿಯಾಶೀಲರಾಗಿರಬೇಕು. ಅದರಿಂದಲೇ ಬದುಕು ಅರ್ಥಪೂರ್ಣ. ಕರಾವಳೀ ಭಾಗದವರು ಹೆಚ್ಚು ಕ್ರೀಯಾಶೀಲರು ಎಂಬ ಅಭಿಪ್ರಾಯ ಇತರ ಪ್ರಾಂತ್ಯಗಳಲ್ಲಿದೆ. ಯಾಕೆಂದರೆ ಯಕ್ಷಗಾನ ಈ ಭಾಗದಲ್ಲಿ ಹೆಚ್ಚು ಹೆಚ್ಚು ಕ್ರಿಯಾಶೀಲರಾಗಿರುವುದರಿಂದ ಈ ಅಭಿಪ್ರಾಯ ಜನಜನಿತವಾಯಿತು ಎಂದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ಪಿ. ಹೆಗಡೆ, ಕೂಡ್ಲಿ ದೇವದಾಸ ರಾವ್, ಲಂಬೋದರ ಹೆಗಡೆ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊಕೂರು ಸೀತಾರಾಮ ಶೆಟ್ಟಿ ಉಪಸ್ಥಿತರಿದ್ದರು.

ಕೀರ್ತನ್ ಮಿತ್ಯಂತಾಯ ಸ್ವಾಗತಿಸಿ, ಪಂಚಮಿ ವೈದ್ಯ ಪ್ರಾರ್ಥಿಸಿ, ಪವನ್ ವಂದಿಸಿದರು. ಪೂಜಾ ಕಾರ್ಯಕ್ರಮ ನಿರ್ವಹಿಸಿದರು.

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!