Sunday, September 8, 2024

ಯಕ್ಷಗಾನ ಇತಿಹಾಸದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾದವರು ಕಾಳಿಂಗ ನಾವಡರು-ಮುಷ್ತಾಕ್ ಹೆನ್ನಾಬೈಲ್

ತೆಕ್ಕಟ್ಟೆ: ಕಲೆಯ ಮೂಲಕ ಬೆಳೆದದ್ದಕ್ಕೆ ಬಳುವಳಿಯಾಗಿ ಕಲೆಯಲ್ಲಿ ತಾನು ಬೆಳೆದು ಕಲೆಗೆ ಬಳುವಳಿಯಾದವರಲ್ಲಿ ಯಕ್ಷ ಪ್ರಪಂಚದ ಗುಂಡ್ಮಿ ಕಾಳಿಂಗ ನಾವಡ ಒಬ್ಬರು. ಯಕ್ಷಗಾನ ಇತಿಹಾಸದಲ್ಲಿ ಯಕ್ಷಗಾನ ಹಾಗೂ ಕಾಳಿಂಗ ನಾವಡ ಇವೆರಡನ್ನು ನಾವು ತುಲನಾತ್ಮಕವಾಗಿ ನೋಡಿದಾಗ ಎಲ್ಲೋ ಒಂದು ಕಡೆ ಹೆಚ್ಚು ಚರ್ಚೆಗೆ ಒಳಗಾದದ್ದು ಕಾಳಿಂಗ ನಾವಡರು. ಕಾಳಿಂಗ ನಾವಡರ ರಂಗ ಪ್ರವೇಶ ರೋಮಾಂಚನ. ಪ್ರೇಕ್ಷಕ ವರ್ಗ ಕಾಳಿಂಗ ನಾವಡರ ಆಗಮನವನ್ನು ಕಾತರದಿಂದ ನಿರೀಕ್ಷಿಸುತ್ತಿದ್ದುದು, ತುಂಬಿದ ಜನಸಂದಣಿಯಿಂದ ಟೆಂಟ್ ಕೀಳುವುದು, ಜನರ ಚಪ್ಪಾಳೆ, ಶಿಳ್ಳೆಯ ಉದ್ಘೋಷಗಳು ನಾವಡರ ಕಾಲದ ಪ್ರೇಕ್ಷಕರು ಎಂದು ಮರೆಯಲಾರರು ಎಂದು ಲೇಖಕ, ಕಲಾವಿದ ಮುಷ್ತಾಕ್ ಹೆನ್ನಾಬೈಲ್ ಅಭಿಪ್ರಾಯಪಟ್ಟರು.

ತೆಕ್ಕಟ್ಟೆ ಹಯಗ್ರೀವದಲ್ಲಿ ಮೇ ೨೯, ೨೦೨೨ರಂದು ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಪ್ರಾಯೋಜನೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಕಾರದೊಂದಿಗೆ ಆಯೋಜಿಸಿದ ಕಾಳಿಂಗ ನಾವಡರ ನೆನಪು ಕಾರ್ಯಕ್ರಮದಲ್ಲಿ ಅವರು ಸಂಸ್ಮರಣಾ ಮಾತುಗಳನ್ನಾಡಿದರು.

ಕಾಳಿಂಗ ನಾವಡರ ಗೆಳೆಯ ಸಾಲಿಗ್ರಾಮ ಗಣಪತಿ ಪೈ ಮಾತನಾಡಿ, ಹಳೇ ಬೇರು ಹೊಸ ಚಿಗುರು ಕಾರ್ಯಕ್ರಮದಲ್ಲಿ ನಾವಡರು ಗಮನ ಸೆಳೆದದ್ದು, ಹೂವಿನ ಕೋಲು ಕಾರ್ಯಕ್ರಮದಲ್ಲಿ ಗುರುತಿಸಿಕೊಂಡ ಬಗೆ, ಪುತ್ತೂರು-ಕಾಸರಗೋಡು ಕಡೆಯಿಂದ ಹರಿದು ಬರುವ ಜನಸಾಗರದ ನೋಟ, ಕಲಾವಿದರಲ್ಲಿ ನಡೆದುಕೊಳ್ಳುವ ರೀತಿ, ಪ್ರಸಂಗವನ್ನು ಉತ್ತುಂಗಕ್ಕೇರಿಸುವ ಬಗೆ, ಮಿತ್ರತ್ವಕ್ಕೆ ಜೀವ ಕೊಡುವ ರೀತಿ, ಆಗದವರನ್ನು ಹೊರಗಿಡುವ ಬಗೆ, ಹೀಗೆ ಹಲವಾರು ಬಗೆಬಗೆಯ ಒಡನಾಟದ ಎಸಳುಗಳನ್ನು ಬಿಡಿಬಿಡಿಯಾಗಿ ತೆರೆದಿಟ್ಟರು.

ಕುಟುಂಬದ ನೆಲೆಯಿಂದ ಅತಿಥಿಯಾಗಿ ಆಗಮಿಸಿದ ಸಹೋದರ ಗಣಪಯ್ಯ ನಾವಡ, ಕೈಲಾಸ ಕಲಾಕ್ಷೇತ್ರದ ಅಧ್ಯಕ್ಷ ಕೊಕೂರು ಸೀತಾರಾಮ ಶೆಟ್ಟಿ ಕಾರ್ಯದರ್ಶಿ ವೆಂಕಟೇಶ ವೈದ್ಯ ಉಪಸ್ಥಿತರಿದ್ದು ಪುಷ್ಪನಮನವನ್ನು ಸಲ್ಲಿಸಿದರು.

ಯಶಸ್ವಿ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಪ್ರಶಾಂತ ಮಲ್ಯಾಡಿ ವಂದಿಸಿದರು. ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತಿನೊಂದಿಗೆ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ವೆಂಕಟೇಶ ವೈದ್ಯ ಬಳದವರಿಂದ ಕಾಳಿಂಗ ನಾವಡ ವಿರಚಿತ ಯಕ್ಷಗಾನ ಪ್ರಸಂಗ ನಾಗಶ್ರೀ ರಂಗದಲ್ಲಿ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!