Sunday, September 8, 2024

ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘ ಕೋಟೇಶ್ವರ ವತಿಯಿಂದ ಸಾಧಕಿ ನಿಶಾ ಜೋಗಿ ಕಾಳಾವರ ಇವರಿಗೆ ಅಭಿನಂದನೆ

ಕುಂದಾಪುರ: 2021-2022ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಬಂದಿರುವ ಜೋಗಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾಗಿರುವ ಕಾಳಾವರದ ಆಶಾ ಮತ್ತು ಶ್ರೀನಿವಾಸ ಜೋಗಿಯವರ ಪುತ್ರಿ ನಿಶಾ ಜೋಗಿ ಕಾಳಾವರ ಇವರನ್ನು ಇವರ ಸ್ವ-ಗೃಹದಲ್ಲಿ ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘ (ನಿ.), ಕೋಟೇಶ್ವರ ಇವರ ವತಿಯಿಂದ ಸನ್ಮಾನಿಸಿ ಮುಂದಿನ ಶಿಕ್ಷಣಕ್ಕೆ ಬೇಕಾದ ನೋಟ್ಸ್ ಪುಸ್ತಕ ಹಾಗೂ ಲೇಖನ ಸಾಮಗ್ರಿಗಳನ್ನು ನೀಡಲಾಯಿತ್ತು. ಹಾಗೆ ಸಂತೋಷ ಜೋಗಿ ಕಾಳಾವರ ಎಸ್.ಎಸ್.ಎಲ್.ಸಿ.96% ಅಂಕ ಪಡೆದ ವಿದ್ಯಾರ್ಥಿಯನ್ನು ಇದೆ ಸಂದರ್ಭದಲ್ಲಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ ಉಪವಿಭಾಗ ಕುಂದಾಪುರ ಸಹಾಯಕ ನಿಬಂಧಕರಾದ ಅರುಣ ಕುಮಾರ ಎಸ್.ವಿ., ದ.ಕ.ಜಿ.ಕೇಂದ್ರ ಸಹಕಾರ ಬ್ಯಾಂಕ್ ಶಾಖೆ ಕೋಟೇಶ್ವರದ ಶಾಖಾ ವ್ಯವಸ್ಥಾಪಕ ಸುಬ್ರಮಣ್ಯ ಬಾಯರಿ, ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘ (ನಿ.), ಕೋಟೇಶ್ವರ ಇದರ ಅಧ್ಯಕ್ಷರಾದ ಶೇಖರ ಬಳೆಗಾರ ಕಟ್‌ಬೇಲ್ತೂರು, ನಿರ್ದೇಶಕರಾದ ಗೋವರ್ಧನ ಜೋಗಿ ಹರವರಿ, ಆಶಾ ಜೋಗಿ ಶಂಕರನಾರಾಯಣ, ಸತ್ಯನಾರಾಯಣ ಜೋಗಿ ಹಂಗಳೂರು, ಸಾವಿತ್ರಿ ಜೋಗಿ ಹೆಮ್ಮಾಡಿ, ಸುರೇಶ ಜೋಗಿ ಕೊರ್ಗಿ, ಜೋಗಿ ಸಮಾಜ ವಿವಿಧೋದ್ದೇಶ ಸಹಕಾರ ಸಂಘ (ನಿ.), ಕೋಟೇಶ್ವರ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಘವೇಂದ್ರ ಜೋಗಿ ಕಟ್‌ಬೇಲ್ತೂರು ಶಾಖಾ ವ್ಯವಸ್ಥಾಪಕರಾದ ಸಂದೀಪ ಕಟ್‌ಬೇಲ್ತೂರು, ಭಾಸ್ಕರ ಬಿಲ್ಲವ ವ್ಯವಸ್ಥಾಪಕರು ಸಾಯಿ ಮಹಿಳಾ ಆರ್ಥಿಕ ಸೇವಾ ಸಹಕಾರ ಸಂಘ (ನಿ.), ಮುಳ್ಳಿಕಟ್ಟೆ, ಮಂಜುನಾಥ ಜೋಗಿ ಕಾಳಾವರ, ಕುಮಾರಸ್ವಾಮಿ ಜೋಗಿ ಕೋಟೇಶ್ವರ, ವಿದ್ಯಾರ್ಥಿನಿ ತಂದೆ-ತಾಯಿ ಶ್ರೀನಿವಾಸ ಜೋಗಿ, ಆಶಾ ಜೋಗಿ ಕಾಳಾವರ, ಸಾಧು ಜೋಗಿ ಹಾಗೂ ಕಮಲ ಜೋಗಿ ಕಾಳಾವರ ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!