Sunday, September 8, 2024

ಉಪ್ಪುಂದ ದುರ್ಗಾಪರಮೇಶ್ವರಿ ದೇವಸ್ಥಾನ ರಾಜಗೋಪುರ ಕಳಸ ಸ್ಥಾಪನೆ: ಶತಚಂಡಿಕಾ ಯಾಗ ಪೂರ್ಣಾಹುತಿಯಲ್ಲಿ ಭಾಗಿಯಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಬೈಂದೂರು, ಮೇ.20: ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಭವ್ಯವಾದ ರಾಜಗೋಪುರವನ್ನು ಶ್ರೀಮತಿ ರಂಜನಾ ಯು.ಬಿ ಶೆಟ್ಟಿ ಮತ್ತು ಯು.ಬಿ.ಶೆಟ್ಟಿ ಮಾದಯ್ಯ ಶೆಟ್ರಮನೆ ಮೂಲಸ್ಥಾನ-ಉಪ್ಪುಂದ ಇವರು ಕೊಡುಗೆಯಾಗಿ ನಿರ್ಮಾಣ ಮಾಡಿದ್ದು ಮೇ.20ರಂದು ಶುಕ್ರವಾರ ಬೆಳಿಗ್ಗೆ ರಾಜಗೋಪುರದ ಕಳಶ ಸ್ಥಾಪನೆ, ಶತಚಂಡಿಕಾ ಯಾಗ ಪೂರ್ಣಾಹುತಿ-ಶ್ರೀ ದೇವಿಗೆ ಕಲಶಾಭಿಷೇಕ ನಡೆಯಿತು.

ಶತಚಂಡಿಕಾ ಯಾಗ ಪೂರ್ಣಾಹುತಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಭಾಗವಹಿಸಿ, ಯಾಗಕ್ಕೆ ದ್ರವ್ಯಗಳ ಅರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು, ಯು.ಬಿ ಶೆಟ್ಟಿಯವರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಈ ಸೇವೆ ಮಾಡಿದ್ದಾರೆ. ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಎಲ್ಲರ ಕಷ್ಟಗಳನ್ನು ದೂರ ಮಾಡಿ ಸುಖ ಶಾಂತಿಯನ್ನು ನೀಡಲಿ ಎಂದು ಹೇಳಿದ ಅವರು, ಈ ಪವಿತ್ರವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ನನಗೆ ಸಂತೋಷವಾಗುತ್ತಿದೆ ಎಂದರು.

ಇದೇ ವೇಳೆ ಉದ್ಯಮಿ ಯು.ಬಿ ಶೆಟ್ಟಿ ದಂಪತಿಗಳು ಡಿ.ಕೆ ಶಿವಕುಮಾರ್ ಅವರನ್ನು ಗೌರವಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ ಕುಮಾರ್ ಕೊಡವೂರು, ಮಾಜಿ ಶಾಸಕ ಯು.ಸಭಾಪತಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!