Sunday, September 8, 2024

ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರೀ ಅಯುತ ಚಂಡಿಕಾ ಮಹಾಯಾಗ ಸಂಪನ್ನ

ಕುಂದಾಪುರ: ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉಡುಪಿ ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ಅತ್ಯಂತ ಅಪರೂಪದ ಶ್ರೀ ಅಯುತ ಚಂಡಿಕಾ ಮಹಾಯಾಗ ಯಶಸ್ವಿಯಾಗಿ ಸಂಪನ್ನಗೊಂಡಿತು.

ಮೇ.8ರಂದು ಆರಂಭಗೊಂಡ ಈ ಮಹಾನ್ ಯಾಗ ಏಕಕಾಲದಲ್ಲಿ 100 ಯಾಗಕುಂಡಗಳಲ್ಲಿ ಆರಂಭಗೊಂಡಿತು. ಶ್ರೀ ಚಂಡಿಕಾ ಪಾರಾಯಣ ಮತ್ತು ಜಪ, ಸೋಮವಾರ ಶ್ರೀ ಚಂಡಿಕಾ ಪಾರಾಯಣ ಮತ್ತು ಜಪ, ಮೇ.10 ಮಂಗಳವಾರ ಶ್ರೀ ಅಯುತ ಮಹಾಯಾಗದ ಪೂರ್ಣಾಹುತಿಯೊಂದಿಗೆ ಸಂಪನ್ನ ಕಂಡಿತು. ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಯಿತು.

ಜ್ಯೋತಿಶಾಸ್ತ್ರ ವಿದ್ವಾನ್ ಶ್ರೀ ಟಿ.ವಾಸುದೇವ ಜೋಯಿಸರ ಧಾರ್ಮಿಕ ಮಾರ್ಗದರ್ಶನ ನೀಡಿದರು. ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ಎಸ್.ಸಚ್ಚಿದಾನಂದ ಚಾತ್ರ, ಅನುವಂಶಿಕ ಧರ್ಮದರ್ಶಿ ಎ.ಚಂದ್ರಶೇಖರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮೂರು ದಿನಗಳ ಕಾಲ ಕಮಲಶಿಲೆಗೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿದ್ದರು. ಪೂರ್ಣಾಹುತಿಯ ಮಂಗಳವಾರ ಬೆಳಿಗ್ಗೆಯಿಂದ ಭಕ್ತಸಂದಣಿ ನೆರೆದಿತ್ತು. ಉಡುಪಿ ಜಿಲ್ಲೆ ಮಾತ್ರವಲ್ಲದೇ ರಾಜ್ಯದ ಬೇರೆ ಬೇರೆ ಭಾಗಗಳಿಂದ ಭಕ್ತರ ಸಂದೋಹವೇ ಹರಿದು ಬಂತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!