Sunday, September 8, 2024

ತೆಕ್ಕಟ್ಟೆ: ‘ರಜಾರಂಗು’ ಬೇಸಿಗೆ ಶಿಬಿರದ ಮಕ್ಕಳ ಸಂತೆ ಉದ್ಘಾಟನೆ

ತೆಕ್ಕಟ್ಟೆ: ರಜಾರಂಗು ಶಿಬಿರವು ತಿಂಗಳುಗಳ ಕಾಲ ಹಸಿರು ತುಂಬಿದ ವನದಲ್ಲಿ ನಿತ್ಯೋತ್ಸವವಾಯಿತು. ಪರಿಸರದ ಮರಗಳು ಚಿಣ್ಣರಿಂದಾಗಿ ನಲಿದವು. ಕಾಲದ ಪರಿವರ್ತನೆಯಿಂದಾಗಿ ಇಂತಹ ವಾತಾವರಣ ಸಿಗಲಾರದು. ಧ್ವನಿಪೂರ್ಣ ಭಾಷೆ ಕನ್ನಡ ಎಂಬುದು ರಜಾರಂಗು ಶಿಬಿರದ ಸಂತೆ ಸಾರುತ್ತದೆ. ಪ್ರಕೃತಿಯ ರಂಗವಲ್ಲಿಗೆ ರಜಾರಂಗು ಶಿಬಿರ ಇನ್ನೊಂದು ರೇಖೆ ಸೇರಿಸಿ ಪ್ರಕೃತಿಯಲ್ಲಿ ಎರಡಾಗಲಿಲ್ಲ, ಬದಲಾಗಿ ಒಂದಾಯಿತು. ಹಲವಾರು ಸಂಪನ್ಮೂಲ ವ್ಯಕ್ತಿಗಳನ್ನು ಹೊಂದಿ ಜ್ಞಾನ ಸಂಪನ್ನರಾಗಿರುವ ಶಿಬಿರ ನಿಜಕ್ಕೂ ಅರ್ಥಪೂರ್ಣ ಎಂದು ಕುಂದಾಪುರದ ನ್ಯಾಯವಾದಿ ಎ. ಎಸ್. ಎನ್. ಹೆಬ್ಬಾರ್ ಶಿಬಿರದ ಮಕ್ಕಳ ಸಂತೆ ಉದ್ಘಾಟಿಸಿ ಮಾತನ್ನಾಡಿದರು.

ತೆಕ್ಕಟ್ಟೆಯ ಸೇವಾಸಂಗಮ ಶಿಶುಮಂದಿರ ಹತ್ತಿರದ ಹಾಡಿಯ ಪರಿಸರದಲ್ಲಿ ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಯಶಸ್ವೀ ಕಲಾವೃಂದ ಕೊಮೆ, ತೆಕ್ಕಟ್ಟೆ ಆಯೋಜಿಸಿದ ತಿಂಗಳಪೂರ್ತಿ ರಜಾರಂಗು-೨೨ ಬೇಸಿಗೆ ಶಿಬಿರದ ಮಕ್ಕಳ ಸಂತೆಯನ್ನು ಮೇ ೬ರಂದು ಉದ್ಘಾಟಿಸಿ ಅಭಿಪ್ರಾಯಪಟ್ಟರು.

ತಾರತಮ್ಯವಿಲ್ಲದ ಬದುಕು ನಮ್ಮದಾಗಲಿ ಎಂಬ ಆಶಯ ರಜಾರಂಗು ಶಿಬಿರದ್ದು. ಈ ಶಿಬಿರಕ್ಕೆ ನಿಮ್ಮ ಚಿಣ್ಣರನ್ನು ಸೇರಿಸಿ ಸಾಧಕರಾಗುವಂತೆ ಮಕ್ಕಳನ್ನು ಪ್ರೇರೇಪಿಸಿದ್ದೀರಿ. ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ಈ ಶಿಬಿರ ಸಹಕಾರಿಯಾಗಿದೆ ಎಂದು ರಾಷ್ಟ್ರೀಯ ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ಅತಿಥಿಯಾಗಿ ಅಭಿಪ್ರಾಯ ಪಟ್ಟರು.

ಕೈಲಾಸ ಕಲಾಕ್ಷೇತ್ರದ ಟ್ರಸ್ಟಿ ಶ್ಯಾಮಲಾ ದಿವಾಕರ್, ಸೀತಾರಾಮ ಶೆಟ್ಟಿ, ಯಶಸ್ವಿ ಅಧ್ಯಕ್ಷರಾದ ಮಲ್ಯಾಡಿ ಸೀತಾರಾಮ ಶೆಟ್ಟಿ, ಉಪಸ್ಥಿತರಿದ್ದು, ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಾಸ್ತಾವಿಕ ಮಾತನ್ನಾಡಿದರು. ಪೋಷಕರು ಹಾಗೂ ಶಿಬಿರಾರ್ಥಿಗಳ ಅಭಿಪ್ರಾಯ ಮಂಡನೆಯ ಬಳಿಕ ರಂಗ ನಿರ್ದೇಶಕ ರೋಹಿತ್ ಎಸ್. ಬೈಕಾಡಿ ನಿರ್ದೇಶನದ ಎಚ್. ಎಸ್. ವೆಂಕಟೇಶ ಮೂರ್ತಿ ರಚನೆಯ ನಾಟಕ ಕುಣಿಕುಣಿ ನವಿಲೆ ಹಾಗೂ ಅಮೃತಾ ಉಪಾಧ್ಯ ನಿರ್ದೇಶನದ ನೃತ್ಯ ಚುಕುಬುಕು ರೈಲು ರಂಗದಲ್ಲಿ ಶಿಬಿರಾರ್ಥಿಗಳಿಂದ ಪ್ರಸ್ತುತಿಗೊಂಡಿತು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!