spot_img
Wednesday, January 22, 2025
spot_img

ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು: ಯಕ್ಷಪರ್ವ, ಗುರುವಂದನೆ, ಸನ್ಮಾನ

ಕುಂದಾಪುರ: ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ನಾಗಯಕ್ಷಿ ದೇವಸ್ಥಾನದ ವರ್ಧಂತ್ಯುತ್ಸವದ ಅಂಗವಾಗಿ 2ನೇ ವರ್ಷದ ಯಕ್ಷಪರ್ವ ಕಾರ್ಯಕ್ರಮ ಎ.23ರಂದು ನಡೆಯಿತು.

ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ಅಧ್ಯಕ್ಷರಾದ ಕೆ.ಸುರೇಶ ವಿಠಲವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ಯಿ ಪುರಸ್ಕೃತ ಯಕ್ಷಕವಿ, ಭಾಗವತರಾದ ಪ್ರಸಾದ ಕುಮಾರ್ ಮೊಗೆಬೆಟ್ಟು ಕಾರ್ಯವನ್ನು ದೀಪ ಪ್ರಜ್ವಲನೆಗೊಳಿಸುವ ಮೂಲಕ ಉದ್ಘಾಟಿಸಿದರು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಭಾಗವತರಾದ ಜಿ.ರಾಘವೇಂದ್ರ ಮಯ್ಯ ಹಾಲಾಡಿ ಶುಭಶಂಸನೆಗೈದರು.

ಮುಖ್ಯ ಅತಿಥಿಗಳಾಗಿ ಕುಂದಾಪುರ ಸರ್ಕಾರಿ ಆಸ್ಪತ್ರೆಯ ಡಾ.ನಾಗೇಶ ಎಂ.ಡಿ ಪಿಜಿಶಿಯನ್, ಕೋಟೇಶ್ವರದ ನಾರಾಯಣ ಹೆಲ್ತ್‌ಕೇರ್‌ನ ಡಾ.ಪ್ರಸಾದ ಶೆಟ್ಟಿ, ಕೋಟೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೃಷ್ಣ ಗೊಲ್ಲ, ಕೋಟೇಶ್ವರ ಗ್ರಾಮ ಪಂಚಾಯತಿ ಸದಸ್ಯರಾದ ಚಂದ್ರ ಮೋಹನ, ಜಯಲಕ್ಷ್ಮೀ, ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರದ ಇದರ ಗೌರವಾಧ್ಯಕ್ಷರಾದ ಜಗದೀಶ ಮೊಗವೀರ ಮಾರ್ಕೋಡು ಆಗಮಿಸಿದ್ದರು.

ಈ ಸಂದರ್ಭದಲ್ಲಿ ಯಕ್ಷಗಾನ ಗುರುಗಳಾದ ಬೇಳೂರು ವಿಷ್ಣುಮೂರ್ತಿ ನಾಯಕ್ ಇವರಿಗೆ ಗುರುವಂದನೆ ಸಲ್ಲಿಸಲಾಯಿತು. ಕೋಟೇಶ್ವರ ಸ.ಪ.ಪೂ ಕಾಲೇಜು ಉಪನ್ಯಾಸಕ, ತಾಳಮದ್ದಲೆ ಅರ್ಥಧಾರಿ ಕುಮಾರ ಶಂಕರನಾರಾಯಣ, ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಫ್‌ನಲ್ಲಿ ಚಿನ್ನದ ಪದಕ ವಿಜೇತೆ ಧನ್ವಿತಾ, ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಫ್‌ನಲ್ಲಿ ಕಂಚಿನ ಪದಕ ವಿಜೇತೆ ಸಾನಿಕಾ ಅವರನ್ನು ಅಭಿನಂದಿಸಲಾಯಿತು.

ಸ.ಹಿ.ಪ್ರಾ.ಶಾಲೆ ಕೊರವಡಿ ಇಲ್ಲಿನ ಶಿಕ್ಷಕಿ ಶೋಭಾ ದಿನೇಶ ಪೂಜಾರಿ, ಮೂಡು ಗೋಪಾಡಿ ಸ.ಹಿ.ಪ್ರಾ.ಶಾಲೆ ಶಿಕ್ಷಕಿ ಹೇಮಲತಾ ಗಣೇಶ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು. ಶ್ರೀ ನಾಗಯಕ್ಷಿ ಯಕ್ಷಕೂಟದ ಉಪಾಧ್ಯಕ್ಷ ಆನಂದ ಬರೆಕಟ್ಟು, ಕಾರ್ಯದರ್ಶಿ ಶ್ರೀನಿವಾಸ ಪೂಜಾರಿ ಮಾರ್ಕೋಡು,ಕೋಶಾಧಿಕಾರಿ ಉಷಾ ಸಹಕರಿಸಿದರು.

ಬಳಿಕ ಬೇಳೂರು ವಿಷ್ಣುಮೂರ್ತಿ ನಾಯಕ ನಿರ್ದೇಶನದಲ್ಲಿ ಶ್ರೀ ನಾಗಯಕ್ಷಿ ಯಕ್ಷಕೂಟ ಮಾರ್ಕೋಡು, ಕೋಟೇಶ್ವರ ಇದರ ವಿದ್ಯಾರ್ಥಿಗಳಿಂದ ಶಕ್ತಿ ಶರ ಸಂಧಾನ, ಶಿವರಾಮ ದರ್ಶನ ಯಕ್ಷಗಾನ ಪ್ರದರ್ಶನಗೊಂಡಿತು.

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!