Sunday, September 8, 2024

ಧಾತು syndrome… ವೀರ್ಯ ಸ್ಖಲನ ಸುಸ್ತಿಗೆ ಕಾರಣವೇ?

“ಧಾತು syndrome “ ಏನಿದು ಧಾತು syndrome..

ಇದು ದಕ್ಷಿಣ ಏಷ್ಯಾ ಸಂಸ್ಕೃತಿಯಲ್ಲಿ ಅಂದರೆ ಪಾಕಿಸ್ತಾನ್ ,ಭಾರತ, ಬಾಂಗ್ಲಾದೇಶ ,ನೇಪಾಳ ಮತ್ತು ಶ್ರೀಲಂಕಾ ದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಒಂದು ಮಾನಸಿಕ ಸಮಸ್ಯೆ.

ಹೆಚ್ಚಾಗಿ ಪ್ರೌಢಾವಸ್ಥೆಗೆ ಬಂದ ಗಂಡಸರಿಗೆ ಮೂತ್ರದಲ್ಲಿ ವೀರ್ಯ ಕಳೆದು ಕೊಳ್ಳುತ್ತಾ ಇದ್ದೇವೆ ,ಆ ಕಾರಣದಿಂದ ಶೀಘ್ರ ಸ್ಖಲನ ಅಥವಾ ನಪೂಂಸಕತೆ ಉಂಟಾಗುತ್ತದೆ ಎಂಬ ಭಯ .ಇದಕ್ಕೆ ಮುಖ್ಯ ಕಾರಣ ಕೆಲವು ಧಾರ್ಮಿಕ ಪುಸ್ತಕಗಳು ,ಧರ್ಮಗುರುಗಳು ತಿಳಿಸುವ ಕೆಲವು ಅವೈಜ್ಞಾನಿಕ ವಿಷಯಗಳು.

ಇದು ಹೆಚ್ಚಿನ ಧರ್ಮಗಳಲ್ಲಿ ಇರುವ ಒಂದು ಅಪನಂಬಿಕೆ.ಹಿಂದೂ ,ಕ್ರೈಸ್ತ ಹಾಗೂ ಮುಸ್ಲಿಂ ಧಾರ್ಮಿಕ ಪುಸ್ತಕಗಳಲ್ಲಿ ವೀರ್ಯ ನಾಶವೂ ರಕ್ತ ನಾಶದಂತೆ ಎಂಬ ಒಂದು ತಪ್ಪು ವಿಷಯ ಬೋಧಿಸುತ್ತದೆ.ಒಂದು ಹನಿ ವೀರ್ಯ ಎಳು ಹನಿ ರಕ್ತಕ್ಕೆ ಸಮಾನ ಎಂದು ತಿಳಿಸುವ ಧರ್ಮ ಗ್ರಂಥಗಳು ಇದೆ.ಆದರೆ ಇದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ.

ಮನುಷ್ಯನಿಗೆ ವೀರ್ಯ ಸ್ಖಲನ ಆಗುವುದು ಒಂದು ಸಹಜ ಪ್ರಕೃತಿ ಬದ್ಧವಾದ ಸತ್ಯ. ಹಾಗೆಯೇ ತನ್ನ ಲೈಂಗಿಕ ಕಾಮನೆಗಳನ್ನು ಪೂರೈಸಲು ಹಸ್ತ ಮೈಥುನ ಮಾಡಿಕೊಳ್ಳೋದು ಕೂಡ ಒಂದು ಸಹಜ ಕ್ರಿಯೆ.ಹದಿ ಹರೆಯದಲ್ಲಿ ಲೈಂಗಿಕ ಕಾಮನೆಗಳನ್ನು ಪೂರೈಸಲು ಹಸ್ತ ಮೈಥುನ ಮಾಡುವುದೂ ಕೂಡ ಅಗತ್ಯ.ಆದರೆ ಹೆಚ್ಚಿನ ಧರ್ಮಗಳು ಹಸ್ತ ಮೈಥುನ ಮಾಡುವುದೂ ಒಂದು ದೊಡ್ಡ ತಪ್ಪು .ಆ ಸಮಯದಲ್ಲಿ ವೀರ್ಯ ಸ್ಖಲನ ಗೊಂಡಾಗ ಅದರಿಂದ ಸುಸ್ತು,ನಿತ್ರಾಣ,ಓದುವ ಏಕಾಗ್ರತೆ ಕಡಿಮೆ ಆಗುವುದು ,ಹಾಗೆಯೇ ಇದರಿಂದ ಮೈ ಕೈ ನೋವು ಸುಸ್ತು ಪ್ರಾರಂಭವಾಗುತ್ತದೆ ಎಂದೆಲ್ಲ ಬೋಧಿಸುತ್ತವೆ. ಇದನ್ನು ಓದಿದ ಹಲವು ಯುವಕರು ಸಾಮಾನ್ಯ ವಾಗಿ ನಿದ್ರೆಯಲ್ಲಿ ಉಂಟಾಗುವ ಸ್ವಪ್ನ ಸ್ಖಲನದ ಬಗ್ಗೆಯೂ ಕೂಡ ಗಾಬರಿ ಗೊಳ್ಳುವುದು ಹಾಗೆಯೇ ಅವರೇನಾದರೂ  ಹಸ್ತ ಮೈಥುನ ಮಾಡಿಕೊಂಡರೆ ಪಾಪ ಪ್ರಜ್ಞೆ ಇಟ್ಟುಕೊಳ್ಳುವುದು.ತಾವೇನೂ ದೊಡ್ಡ ದುರಂತಕ್ಕೆ ಒಳಗಾಗುತ್ತೇವೆ ಅಂದುಕೊಳ್ಳುವುದು ,ಹೆದರುವುದು,ನಿದ್ರಾ ಹೀನತೆ, ದೇಹದ ಸುಸ್ತು ಇದರ ಬಗ್ಗೆ ಯೋಚನೆ ಮಾಡಿ ರಕ್ತ ಸ್ರಾವದಂತೆ ವೀರ್ಯ ಸ್ರಾವ ಕೂಡ ಒಂದು ಸಮಸ್ಯೆ ಎಂದು ನಂಬುವವರು ಇದ್ದಾರೆ.

ಇದು ದಕ್ಷಿಣ ಏಷ್ಯಾ ಪ್ರಾಂತ್ಯದ ಹೆಚ್ಚಿನ ದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ,ಬೇರೆ ಬೇರೆ ಧರ್ಮದ ಯುವಕರು ಬಳಲುವುದು ಕಂಡು ಬಂದಿದೆ.

ನಾವು ಮನೋ ವೈದ್ಯರು ಇದನ್ನು culture bound syndrome ಎಂದು ಕರೆಯುತ್ತೇವೆ. ಈ “ಧಾತ್ ಸಿಂಡ್ರೋಮ್ ”  ಎಂಬ ಹೆಸರನ್ನು ಇಟ್ಟು ಇದರ ಬಗ್ಗೆ ಬಹಳಷ್ಟು ಅಧ್ಯಯನ ಮಾಡಿದವರು ಡಾ.ಎನ್.ಎನ್. ವಿಗ್ ಎಂಬ ಮನೋವೈದ್ಯರು.ಮೂಲತಃ ಅವರು ಚಂಡೀಗಢ ದ ವೈದ್ಯಕೀಯ ಸ್ನಾತಕೋತ್ತರ ಶಿಕ್ಷಣ ಸಂಸ್ಥೆ ಇಲ್ಲಿಯ ವೈದ್ಯರು.

ಹೆಚ್ಚಿನ ಸಂದರ್ಭ ಈ ಸಮಸ್ಯೆ ಯಿಂದ ಬಳಲುವ ಯುವಕರು ಅವರ ಈ ನಂಬಿಕೆಗಳನ್ನು ಬೇರೆ ಯಾರ ಜೊತೆಗೂ ಚರ್ಚಿಸಲು ಆಗದೆ,ಕೇವಲ ಧಾರ್ಮಿಕ ಪುಸ್ತಕಗಳಲ್ಲಿ ಅಥವಾ ತಮ್ಮದೇ ವಯಸ್ಸಿನ ಇತರ ಸ್ನೇಹಿತರ ಬಾಯಿ ಯಿಂದ ಕೇಳಿಕೊಂಡು ಅದನ್ನೇ ಸತ್ಯ ಎಂದು ನಂಬಿಕೊಂಡು ಹೆದರಿ ಬಳಲುತ್ತಾ ಇರುತ್ತಾರೆ.ಇದು ದೀರ್ಘ ಕಾಲಿನವಾದಾಗ ಹಲವಾರು ಯುವಕರು ಖಿನ್ನತೆ,ಆತಂಕ ಮುಂತಾದ ಸಮಸ್ಯೆಗಳಿಗೂ ತುತ್ತಾಗುತ್ತಾರೆ.ಹಲವಾರು ಜನ ವಿವಾಹ,ವಿವಾಹದ ನಂತರದ ಲೈಂಗಿಕ ಜೀವನ ಈ ಬಗ್ಗೆ ಹೆದರಿ ಶೀಘ್ರ ಸ್ಖಲನ,ನಪೂಂಸಕತೆ ಉಂಟಾಗುತ್ತದೆ ಎಂದು ನಂಬಿ ಮದುವೆ ಕೂಡ ಆಗುವುದಿಲ್ಲ.

ಮನಸ್ಸಿನಲ್ಲಿ ಇರುವ ಈ ವಿಚಾರ ವೈದ್ಯರೊಂದಿಗೆ ಚರ್ಚಿಸದೆ ತಮಗೆ ದೈಹಿಕ ಅಥವಾ ಲೈಂಗಿಕ ಸಮಸ್ಯೆ ಇದೆ ಎಂದು ನಂಬಿ ಪದೇಪದೇ ಹಲವಾರು ಸಾಮಾನ್ಯ ವೈದ್ಯರ ಹತ್ತಿರ ಹೋಗುವುದು,ನಂತರ ಸಮಾಧಾನಗೊಳ್ಳದೆ ಲೈಂಗಿಕ ತಜ್ಞರ ಹತ್ತಿರ ಹೋಗಿ ಸಲಹೆ ಕೇಳುವುದು ಮಾಡುತ್ತಾರೆ.

ಈ ಸಮಸ್ಯೆಗೆ ಪರಿಹಾರ ಕಾಣದೆ ಕೆಲವೊಮ್ಮೆ ನರರೋಗ ತಜ್ಞರು,endocrinologist ಗಳು .. ಹೀಗೇ ಬೇರೆಬೇರೆ ತಜ್ಞರ ಬಳಿಗೆ ಹೋಗಿ ಅವರು ಸಮಸ್ಯೆ ಗುರುತಿಸಿ ಮನೋವೈದ್ಯ ರ ಹತ್ತಿರ ಕಳಿಸುತ್ತಾರೆ.

ಮನೋವೈದ್ಯರು ಮುಖ್ಯವಾಗಿ ಇಂತಹ ಸಮಸ್ಯೆ ಇರುವ ಯುವಕರಿಗೆ ಅವರ ಖಿನ್ನತೆ ಆತಂಕ ದೂರ ಪಡಿಸುವ ಮಾತ್ರೆಗಳು ಹಾಗೂ ಆಪ್ತ ಸಲಹೆ ಕೊಡುವುದು ಅತೀ ಅಗತ್ಯ ವಾಗಿರುತ್ತದೆ. ಇಂತಹ ಸಮಸ್ಯೆಗಳಿಗೆ ಮನೋವೈದ್ಯರು ಉಪಯೋಗಿಸುವ ಚಿಕಿತ್ಸಾ ವಿಧಾನ cognitive behaviour therapy . ಇಲ್ಲಿ ವ್ಯಕ್ತಿ ತನ್ನ ಯೋಚನಾ ಲಹರಿ ಬದಲಿಸುವ ವಿಧಾನಗಳನ್ನು ವೈದ್ಯರು ತಿಳಿಸಬೇಕು ಆಗುತ್ತದೆ. ಹಲವೊಮ್ಮೆ ಅವೈಜ್ಞಾನಿಕ ವಿಷಯಗಳನ್ನು ಪುಸ್ತಕಗಳಲ್ಲಿ ಓದಿ ಅದೇ ಸರಿಯೆಂದು ಹಲವಾರು ತಪ್ಪು ಯೋಚನೆಗಳನ್ನು ಈ ವ್ಯಕ್ತಿ ಮಾಡುತ್ತಾ ಇರುತ್ತಾನೆ.ಆ ಯೋಚನಾ ಅಸ್ಪ್ರಷ್ಠತೆ (cognitive distortion s) ಕಂಡುಹಿಡಿದು ಅದನ್ನು ಸರಿಪಡಿಸಲು ವೈಜ್ಞಾನಿಕವಾಗಿ ಅದನ್ನು ಅಲುಗಾಡಿಸಲು ಹೇಗೆ ಮನಸ್ಸಿನಲ್ಲೇ ತಕರಾರು ಮಾಡಬಹುದು(disputing) ಎಂದು ಹೇಳಿಕೊಡುವುದು ಇವೆಲ್ಲ ಚಿಕಿತ್ಸೆಯ ಭಾಗವಾಗಿರುತ್ತದೆ.

ಹಾಗೆಯೇ ಆತಂಕ ನಿವಾರಣೆಗಾಗಿ ಕೆಲವು relaxation exercises ಹೇಳಿ ಕೊಡಲಾಗುತ್ತದೆ.

ಈ “ದಾತ್ ಸಿಂಡ್ರೋಮ್ “ಅನ್ನುವುದು ದೀರ್ಘಕಾಲೀನ ಸಮಸ್ಯೆ ಆಗಿದ್ದು ಮನೋವೈದ್ಯರ ಬಳಿ ಅವರು ಹೇಳಿದಂತೆ ಹೋಗಿ ಚಿಕಿತ್ಸೆ ಪಡೆಯಬೇಕು .

ಇಲ್ಲಿ ತಿಳಿಯುವ ಮುಖ್ಯ ಅಂಶವೆಂದರೆ ಹಲವು ಅವೈಜ್ಞಾನಿಕ ಸಂಗತಿಗಳು ಜಾತ್ಯಾತೀತವಾಗಿ ಎಲ್ಲಾ ಧರ್ಮಗಳಲ್ಲೂ ಬೋಧಿಸಲು ಪಡಿಸುತ್ತದೆ.ಇದನ್ನು ಓದಿ ಅಥವಾ ಧರ್ಮ ಗುರುಗಳ ಬಾಯಿ ಯಲ್ಲಿ ಇಂತಹ ವಿಷಯ ಕೇಳಿ ಹಲವಾರು ಜನ ಪಾಪ ಪ್ರಜ್ಞೆ ,ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ.

ಹಸ್ತ ಮೈಥುನ ನಮ್ಮ ಲೈಂಗಿಕ ಜೀವನದ ಒಂದು ಪ್ರಮುಖ ಭಾಗ.ಹಸ್ತ ಮೈಥುನದ ಸಂದರ್ಭದಲ್ಲಿ ಉಂಟಾಗುವ ವೀರ್ಯ ಸ್ಖಲನ ಯಾವುದೇ ಸಮಸ್ಯೆಗೆ ಕಾರಣವಲ್ಲ. ಹಾಗೆಯೆ ಮೂತ್ರದಲ್ಲಿ ವೀರ್ಯ ಹೋಗುವುದು ಸಾಧ್ಯವಿಲ್ಲ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!