Sunday, September 8, 2024

ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರರಿಗೆ ‘ಪದ್ಮ ಕುಲ ತಿಲಕ’ ಬಿರುದು ಪ್ರದಾನ

ಕುಂದಾಪುರ : ಅಮಾಸೆಬೈಲು ಬಳ್ಮನೆ ಶ್ರೀ ಚಿತ್ತೇರಿ ಚರ್ತುರ್ಮುಖ ಬ್ರಹ್ಮ ಹಾಗೂ ಪರಿವಾರ ದೇವಸ್ಥಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ವಾಸ್ತುತಜ್ಙ, ಪ್ರಸಂಗಕರ್ತ ಡಾ. ಬಸವರಾಜ್ ಶೆಟ್ಟಿಗಾರರು 29 ಸಂವತ್ಸರಗಳಿಂದ ಸತತ 16 ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಲುವಾಗಿ ಪದ್ಮ ಕುಲ ತಿಲಕ ಬಿರುದು ಪ್ರದಾನ ಮಾಡಿ 424ನೇ ಸನ್ಮಾನದಲ್ಲಿ ಶಾರದೆಯ ಕಿರೀಟವನ್ನು ತೊಡಿಸಿ ಗೌರವಿಸಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ದೇವಸ್ಥಾನದ ಅಧ್ಯಕ್ಷರಾದ ಕರುಣಾಕರ ಶೆಟ್ಟಿಗಾರ್ ವಹಿಸಿದ್ದರು.
ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರಿನ ಕದ್ರಿ ಯೋಗೀಶ್ವರ ಮಠದ ಶ್ರೀ ಶ್ರೀ ರಾಜ ನಿರ್ಮಲ್ ನಾಥ್ ಸ್ವಾಮೀಜೀಯವರು ಬಸವರಾಜ್ ಶೆಟ್ಟಿಗಾರರಿಗೆ ನಾಡಿನ ಸಾಹಿತಿಗಳು ಹಾಗೂ ಅಭಿಮಾನಿಗಳು ಅಭಿನಂದನಾಪೂರ್ವಕವಾಗಿ ಅರ್ಪಿಸಿದ ಕರುನಾಡ ಕಣ್ಮಣಿ ಗ್ರಂಥವನ್ನು ಲೋಕಾರ್ಪಣೆ ಮಾಡಿದರು.

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿಯವರು ಅಭಿನಂದನಾ ಭಾಷಣ ಮಾಡಿದರು.

ಸಮಾರಂಭದ ಮುಖ್ಯ ಅತಿಥಿಗಳಾಗಿ ವಿಜಯ ಬ್ಯಾಂಕ್‌ನ ನಿವೃತ್ತ ಡಿಜಿ‌ಎಂ ಎಚ್.ರಘುರಾಮ್ ಶೆಟ್ಟಿ, ಕುಂದಾಪುರ ತಾಲೂಕು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ಅಧ್ಯಕ್ಷರಾದ ರಾಘವೇಂದ್ರ ಶೆಟ್ಟಿಗಾರ್, ದೇವಸ್ಥಾನದ ಗೌರವ ಅಧ್ಯಕ್ಷರಾದ ಕುಶಾಲ್ ತೋಳಾರ್, ಧರ್ಮಸ್ಥಳ ಜನಜಾಗೃತಿ ವೇದಿಕೆಯ ಕುಂದಾಪುರ ತಾಲೂಕು ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ, ಕರುನಾಡ ಕಣ್ಮಣಿಯ ಅಭಿನಂದನಾ ಗ್ರಂಥದ ಪ್ರಧಾನ ಸಂಪಾದಕರಾದ ಶಶಿರಾಜ್ ಶಾಂತಪುರ ಉಪಸ್ಥಿತರಿದ್ದರು.

ಶಿಕ್ಷಕ ಶಶಿಧರ ಶೆಟ್ಟಿ ಸ್ವಾಗತಿಸಿ, ವಾಸ್ತುತಜ್ಞ ಡಾ. ಬಸವರಾಜ್ ಶೆಟ್ಟಿಗಾರ್ ಧಾರ್ಮಿಕ ಪ್ರವಚನವನ್ನು ಮಾಡಿದರು. ನ್ಯಾಯವಾದಿ ಗುರುರಾಜ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಸನ್ಮಾನ ಸಮಾರಂಭವನ್ನು ಮುಂಬಯಿ ಪದ್ಮಶಾಲಿ ಸಮಾಜ ಸಂಘದ ಅಧ್ಯಕ್ಷರಾದ ಉತ್ತಮ್ ಶೆಟ್ಟಿಗಾರ್ ಪ್ರಾಯೋಜಿಸಿದರು. ಲೋಕೇಶ್ ಕುಮಾರ್ ಶುಭ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಆಶಾ ಬಸವರಾಜ್ ಶೆಟ್ಟಿಗಾರ್ ಅವರನ್ನು ಗೌರವಿಸಲಾಯಿತು. ಸನ್ಮಾನ ಪತ್ರವನ್ನು ಅವಿನಾಶ್ ಹೆಗ್ಡೆ ವಾಚಿಸಿ, ಸುರೇಶ್ ನಾಯ್ಕ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!