spot_img
Tuesday, March 24, 2026
spot_img

ಐಪಿ‌ಎಲ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಗೆ ಹೊಸ ಸ್ಪರ್ಶ


-ಪಿ ಎಸ್ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ

ಐಪಿ‌ಎಲ್ ಟ್ವೆಂಟಿ-20 ಕ್ರಿಕೆಟ್ ಪಂದ್ಯಾಟಕ್ಕಾಗಿ ಎಲ್ಲರೂ ಕಾತರದಿಂದ ಕಾಯುತ್ತಿದ್ದಾರೆ. ಇದು ವಿಶ್ವದಾದ್ಯಂತ ಎಲ್ಲಾ ಕ್ರಿಕೆಟ್ ಅಭಿಮಾನಿಗಳನ್ನು ಒಂದುಗೂಡಿಸುವ ಕ್ರಿಕೆಟಿನ ಮಹಾ ವೇದಿಕೆ . ಆಯಾ ದೇಶಗಳ ತಂಡದ ಸಹ ಆಟಗಾರರನ್ನೇ ಪ್ರತಿಸ್ಪರ್ಧಿಗಳನ್ನಾಗಿ ಮಾಡಿರುವ ಐಪಿ‌ಎಲ್ ಟ್ವೆಂಟಿ-20 ಕ್ರಿಕೆಟ್ ಕ್ಷಣ ಮಾತ್ರದಲ್ಲಿ ಆಟದ ಸ್ವರೂಪವನ್ನೇ ಬದಲಾಯಿಸಿ ಬಿಡುತ್ತದೆ. ಆದರೆ , ಈ ಬಾರಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ
( ಬಿಸಿಸಿ‌ಐ) ಐಪಿ‌ಎಲ್ ಆಯೋಜನೆಗೆ ವಿಶೇಷ ನಿಯಮಗಳನ್ನು ರೂಪಿಸಿ ಹೊಸ ಸ್ಪರ್ಶವನ್ನು ಐಪಿ‌ಎಲ್ ಟೂರ್ನಿಗೆ ನೀಡಿದೆ.

ಈ ಬಾರಿಯ ಐಪಿ‌ಎಲ್ ಕ್ರಿಕೆಟ್ ಉತ್ಸವ ಪಂದ್ಯಾಟದ ರೂಪದಲ್ಲಿ ಇದೇ ಮಾರ್ಚ್ ತಿಂಗಳ- 26 ರಿಂದ ಆರಂಭ ಗೊಂಡು ಮೇ-19ರವರೆಗೆ ನಡೆಯಲಿದೆ. ಈ ಬಾರಿಯ ಲೀಗ್‌ನಲ್ಲಿ ಸಾಕಷ್ಟು ಹೊಸತನ ಕಾಣಲಿದೆ. ಲೀಗ್‌ನಲ್ಲಿ ತಂಡಗಳ ಸಂಖ್ಯೆ 8 ರಿಂದ 10 ಕ್ಕೆ ಏರಿದೆ. ಈ ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳ ನಡುವೆ 70 ಪಂದ್ಯಗಳು ನಡೆಯಲಿದೆ .ಈ ಎಲ್ಲಾ ಪಂದ್ಯಗಳು ಮುಂಬೈ ಮತ್ತು ಪುಣೆಯ ನಾಲ್ಕು ಸ್ಟೇಡಿಯಂಗಳಲ್ಲಿ ಆಯೋಜಿಸಲಾಗಿದೆ. ಅದರಂತೆ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂನಲ್ಲಿನ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ20 ಪಂದ್ಯಗಳು ಹಾಗೂ ಪುಣೆಯ ಎಂಸಿ‌ಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ.

ಹನ್ನೆರಡು ಆಟಗಾರರು :
ಬಿಸಿಸಿ‌ಐ ಪ್ರಕಟಿಸಿರುವ ನಿಯಮದಲ್ಲಿ ಎಲ್ಲರ ಗಮನ ಸೆಳೆದಿರುವ ಒಂದು ನಿಯಮವೆಂದರೆ ತಂಡದಲ್ಲಿ ಕನಿಷ್ಠ 12 ಆಟಗಾರರು ಅತ್ಯಗತ್ಯ . ಅಂದರೆ ಈ ಬಾರಿ ಒಂದು ತಂಡವು ಐಪಿ‌ಎಲ್ ಆಡಬೇಕಿದ್ದರೆ ಆ ತಂಡದಲ್ಲಿ 12 ಆಟಗಾರರು ಇರಲೇಬೇಕು. ಪ್ರಸ್ತುತ 10 ತಂಡಗಳಲ್ಲಿ 20ಕ್ಕಿಂತ ಹೆಚ್ಚಿನ ಆಟಗಾರರಿದ್ದಾರೆ. ಆದರೆ , ಆಟಗಾರರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡರೆ ಎಂಬ ಭೀತಿಯಲ್ಲಿ ಬಿಸಿಸಿ‌ಐ ಈ ನಿಯಮವನ್ನು ಫ್ರಾಂಚೈಸಿಗಳ ಮುಂದಿಟ್ಟಿದೆ. ಆಡುವ ಹನ್ನೊಂದರ ಬಳಗದಲ್ಲಿ ಏಳು ಮಂದಿ ಭಾರತೀಯ ಆಟಗಾರರು ಇರಬೇಕು. ಮತ್ತು ಒಬ್ಬ ಬದಲಿ ಆಟಗಾರ ಸೇರಿದಂತೆ ಒಟ್ಟು ಒಂದು ತಂಡದಲ್ಲಿ 12 ಆಟಗಾರರು ಇರಬೇಕು.

ಕೊರೊನಾ ಆತಂಕ :
ಕೊರೋನಾ ಸೋಂಕಿಗೆ ಒಳಗಾಗಿ ಬಹುತೇಕ ಆಟಗಾರರು ಕ್ವಾರಂಟೈನ್ ಒಳಗಾದರೆ, ಆ ತಂಡದಲ್ಲಿ 12 ಆಟಗಾರರು ಇಲ್ಲದಿದ್ದರೆ ಅಂದಿನ ಪಂದ್ಯವನ್ನು ಕೈಬಿಡಲಾಗುತ್ತದೆ. ಅಷ್ಟೇ ಅಲ್ಲದೆ ಆ ತಂಡದ ಪಂದ್ಯವನ್ನು ಮುಂದೂಡಿ ಬೇರೊಂದು ದಿನ ಆಡಿಸಲು ಬಿಸಿಸಿ‌ಐ ನಿಯಮ ರೂಪಿಸಿದೆ. ಅದರಂತೆ ಕೋವಿಡ್ ಸೋಂಕು ಕಾಣಿಸಿಕೊಂಡು ಸಮಸ್ಯೆ ಎದುರಾದರೆ, ಒಂದು ತಂಡದಲ್ಲಿ ಬದಲಿ ಆಟಗಾರ ಸೇರಿ ಒಟ್ಟು 12 ಆಟಗಾರರು ಇದ್ದರೆ ಮಾತ್ರ ಪಂದ್ಯವನ್ನು ಆಡಿಸಲಾಗುತ್ತದೆ. ಈ ಪಂದ್ಯದ ಮರು ವೇಳಾಪಟ್ಟಿಯನ್ನು ಐಪಿ‌ಎಲ್ ಟೆಕ್ನಿಕಲ್ ಸಮಿತಿ ನಿರ್ಧರಿಸಲಿದೆ. ಹೀಗಾಗಿ ಕೊರೋನಾತಂಕ ಎದುರಾದರೂ ತಂಡದಲ್ಲಿ 12 ಆಟಗಾರರಿದ್ದರೆ ಪಂದ್ಯ ನಡೆಯುವುದು ಖಚಿತ.

ಎರಡು ಗ್ರೂಪ್ :
ಈ ಬಾರಿ ಐಪಿ‌ಎಲ್ ಪಂದ್ಯಾಟದ ಫಾರ್ಮ್ಯಾಟ್ ಬದಲಿಸಲಾಗಿದ್ದು, ಅದರಂತೆ ಈ ಬಾರಿ ಒಟ್ಟು 10 ತಂಡಗಳು ಎರಡು ಗುಂಪುಗಳಾಗಿ ಕಣಕ್ಕಿಳಿಯಲಿದೆ. ಈ ಹಿಂದಿನ ಫಾರ್ಮ್ಯಾಟ್ ನಲ್ಲಿ ಪಂದ್ಯ ನಡೆಸಿದರೆ ಒಟ್ಟು 94ಪಂದ್ಯಗಳನ್ನು ಆಡಬೇಕಾಗುತ್ತದೆ. ಹೀಗಾಗಿ ಬಿಸಿಸಿ‌ಐ ಈ ಬಾರಿ ರೌಂಡ್ ರಾಬಿನ್ ಫಾರ್ಮ್ಯಾಟ್ ನಲ್ಲಿ ಐಪಿ‌ಎಲ್ ಟೂರ್ನಿ ನಡೆಸಲಿದೆ. 10 ತಂಡಗಳನ್ನು 5 ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಆ ಬಳಿಕ ತಲಾ 14 ಪಂದ್ಯಗಳನ್ನು ಆಡಿಸಲಾಗುತ್ತದೆ. ಅಂದರೆ ಗ್ರೂಪ್ ’ ಎ ’ ನಲ್ಲಿರುವ 5 ತಂಡಗಳು ಪರಸ್ಪರ ಎರಡೆರಡು ಪಂದ್ಯಗಳನ್ನು ಆಡಲಿದೆ. ಆ ಬಳಿಕ ಗ್ರೂಪ್ ’ ಬಿ’ ನಲ್ಲಿರುವ ತಂಡದ ವಿರುದ್ದ ಒಂದೊಂದು ಪಂದ್ಯವಾಡಲಿದೆ. ಇದೇ ಮಾದರಿಯಲ್ಲಿ ಗ್ರೂಪ್ ’ ಬಿ ’ ತಂಡಗಳು ಕೂಡ ಆಡಲಿದೆ.

ಪಾಯಿಂಟ್ ಟೇಬಲ್ ನಲ್ಲಿ ಬದಲಾವಣೆ ಇಲ್ಲ :
ಪಂದ್ಯಗಳ ಸ್ಪರ್ಧೆಯಲ್ಲಿ ಬದಲಾವಣೆ ಇದ್ದರೂ ಕೂಡ ಪಾಯಿಂಟ್ ಟೇಬಲ್ ನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ . ಅಂದರೆ 10 ತಂಡಗಳಿಗೂ ಒಂದೇ ಪಾಯಿಂಟ್ ಟೇಬಲ್ ಇರಲಿದೆ. ಪಾಯಿಂಟ್ ಟೇಬಲ್ ನಲ್ಲಿ ಮೊದಲ ನಾಲ್ಕು ಸ್ಥಾನ ಪಡೆಯುವ ನಾಲ್ಕು ತಂಡಗಳು ಪ್ಲೇ ಆಫ್ ಗೆ ಪ್ರವೇಶಿಸಲಿದೆ. ಇನ್ನು ಪ್ಲೇ‌ಆಫ್ ಈ ಹಿಂದಿನಂತೆ ಇರಲಿದ್ದು, ಮೊದಲ ಕ್ವಾಲಿಫೈಯರ್ ಪಂದ್ಯ, ಬಳಿಕ ಎಲಿಮಿನೇಟರ್ ಪಂದ್ಯ. ಆ ನಂತರ 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಅದರಂತೆ ಫೈನಲ್ ಸೇರಿದಂತೆ ಪ್ಲೇ‌ಆಫ್ ನಲ್ಲಿ 4 ಪಂದ್ಯಗಳನ್ನು ಆಡಲಾಗುತ್ತದೆ.

ಡಿ‌ಆರ್‌ಎಸ್ ಹೆಚ್ಚು ಬಳಕೆ :
ಐಪಿ‌ಎಲ್‌ನ ಹೊಸ ನಿಯಮಗಳಲ್ಲಿ ಡಿ‌ಆರ್‌ಎಸ್‌ಗೆ ಸಂಬಂಧಿಸಿದಂತೆ ಮತ್ತೊಂದು ವಿಶೇಷ ನಿಯಮವನ್ನು ಅಳವಡಿಸಲಾಗಿದೆ. ಬಿಸಿಸಿ‌ಐ ಹೊಸ ನಿಯಮದ ಪ್ರಕಾರ ಪ್ರತಿ ಇನ್ನಿಂಗ್ಸ್‌ನಲ್ಲಿ ಡಿ‌ಆರ್‌ಎಸ್ ಸಂಖ್ಯೆಯನ್ನು ಒಂದರಿಂದ ಎರಡಕ್ಕೆ ಹೆಚ್ಚಿಸಲಾಗಿದೆ. ಇದು ಪ್ರತಿ ಇನ್ನಿಂಗ್ಸ್‌ನಲ್ಲಿ ಎರಡು ಬಾರಿ ನಿರ್ಧಾರ ವಿಮರ್ಶೆ ವ್ಯವಸ್ಥೆಯನ್ನು ಬಳಸಲು ಅನುಮತಿಸುತ್ತದೆ. ಈ ಮೊದಲು ಪ್ರತಿ ಇನ್ನಿಂಗ್ಸ್‌ನಲ್ಲಿ ಒಮ್ಮೆ ಡಿಸಿಷನ್ ರಿವ್ಯೂ ಸಿಸ್ಟಮ್ ಅನ್ನು ಬಳಸಲಾಗುತ್ತಿತ್ತು. ಈಗ ಒಂದು ತಂಡವು ಫೀಲ್ಡಿಂಗ್‌ನಲ್ಲಿ 2 ಬಾರಿ ಡಿ‌ಆರ್ ಎಸ್ ಮತ್ತು ಬ್ಯಾಟಿಂಗ್‌ನಲ್ಲಿ 2ಬಾರಿ ಡಿ‌ಆರ್ ಎಸ್ ನ್ನು ಬಳಸುವ ಅವಕಾಶವನ್ನು ಹೊಂದಿರುತ್ತದೆ.

ಲೀಗ್ ಹಂತದ ಆಟ ಪರಿಗಣನೆಗೆ :
ಈ ಬಾರಿಯ ಐಪಿ‌ಎಲ್ ಪಂದ್ಯಾಟದಲ್ಲಿ ಮತ್ತೊಂದು ನಿಯಮವು ತುಂಬಾ ವಿಶೇಷವಾಗಿರಲಿದೆ. ಈ ಬಾರಿ ಪ್ಲೇ‌ಆಫ್ ಅಥವಾ ಫೈನಲ್ ಪಂದ್ಯದಲ್ಲಿ ಟೈ ಆದ ನಂತರ ಸೂಪರ್ ಓವರ್ ಅಥವಾ ಇನ್ನೊಂದು ಸೂಪರ್ ಓವರ್ ಮೂಲಕ ಯಾವುದೇ ಫಲಿತಾಂಶ ನಿರ್ಧಾರವಾಗದಿದ್ದರೆ ಲೀಗ್ ಹಂತದ ಆಟ ಪರಿಗಣನೆಗೆ ಬರಲಿದೆ. ಲೀಗ್ ಹಂತದಲ್ಲಿ ಅಗ್ರಸ್ಥಾನ ಪಡೆಯುವ ತಂಡವನ್ನು ವಿಜೇತ ಎಂದು ಪರಿಗಣಿಸಲಾಗುತ್ತದೆ. ಅಂದರೆ, ಪ್ಲೇ‌ಆಫ್‌ನಲ್ಲಿ ಅರ್ಹತೆ ಪಡೆಯುವುದರೊಂದಿಗೆ ಗುಂಪು ಹಂತದಲ್ಲಿ ಅಂಕಗಳನ್ನು ಅಗ್ರಸ್ಥಾನಕ್ಕೇರಿಸುವುದು ಈಗ ಎಲ್ಲಾ ತಂಡಗಳಿಗೆ ಸವಾಲಾಗಿದೆ

Related Articles

Stay Connected

21,961FansLike
3,912FollowersFollow
22,900SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img
- Advertisement -spot_img

Trending

ಬಡತನ ನಿವಾರಣೆಗೆ ಈ ದೇಶದ ಸಂಪತ್ತು ಹಂಚಿಕೆಯಾಗಬೇಕು-ಸಿದ್ಧರಾಮಯ್ಯ

ಕಾರ್ಕಳ: ನಾನು ಬಡತನದಲ್ಲಿಯೇ ಹುಟ್ಟಿ ಬೆಳೆದು ಬಂದವ. ಬಡತನ ಅನುಭವ ನನಗೆ ಚೆನ್ನಾಗಿ ಇದೆ. ತುತ್ತು ಅನ್ನಕ್ಕೂ ಜನ ಒದ್ದಾಡುತ್ತಿರುವುದನ್ನು ನೋಡಿದ್ದೇನೆ. ಹಾಗಾಗಿ ಅನ್ನಭಾಗ್ಯ ಯೋಜನೆಯನ್ನು ಜ್ಯಾರಿಗೆ ತಂದಿದ್ದು. ಅನ್ನಭಾಗ್ಯ ಯೋಜನೆ ಜ್ಯಾರಿಗೆ...
- Advertisement -spot_img
- Advertisement -spot_img
- Advertisement -spot_img
- Advertisement -spot_img
error: Content is protected !!