Sunday, September 8, 2024

ಸಂಸ್ಕಾರ-ಸಂಸ್ಕೃತಿಗಳನ್ನು ಹಿರಿಯರು ಕಿರಿಯರಿಗೆ ಕಲಿಸಬೇಕು- ಸುಬ್ರಹ್ಮಣ್ಯ ಭಟ್

ಬೈಂದೂರು ಹಿರಿಯ ನಾಗರಿಕ ವೇದಿಕೆಯ ಮಾಸಿಕ ಸಭೆ ಬೈಂದೂರು ಮಹಾಕಾಳಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಂಬದಕೋಣೆ ಸಂವೇದನ ಕಾಲೇಜಿನ ಪ್ರಾಂಶುಪಾಲ ಡಾ.ಸುಬ್ರಮಣ್ಯ ಭಟ್ಟರು ಮಾತನಾಡಿ, ಬದಲಾಗುತ್ತಿರುವ ಕಾಲಘಟ್ಟದಲ್ಲಿ ನಮ್ಮ ಸಂಸ್ಕಾರ-ಸಂಸ್ಕೃತಿಗಳು ನಮಗರಿವಿಲ್ಲದಂತೆ ವಿಕೃತ ಗೊಳ್ಳುತ್ತಿದ್ದು, ಆ ಮೂಲಕ ಇಂದಿನ ಯುವಪೀಳಿಗೆಗೆ ಸರಿಯಾದ ಸಂಸ್ಕಾರ ಸಿಗದೆ ಅನೇಕ ಕೆಟ್ಟ ಚಟಗಳಿಗೆ ದಾಸರಾಗುತ್ತಿದ್ದಾರೆ. ತಮ್ಮ ಬದುಕಿನ ನೆಲೆ ಬೆಲೆಯನ್ನು ಮರೆಯುತ್ತಿದ್ದಾರೆ. ಹಿರಿಯರು ಸಂಸ್ಕಾರ-ಸಂಸ್ಕೃತಿಗಳನ್ನು ಕಿರಿಯರಿಗೆ ಮನೆಯಲ್ಲೇ ಕಲಿಸಿದರೆ ಹಿರಿ-ಕಿರಿಯರು ಎನ್ನುವ ಕಂದಕ ಕಡಿಮೆಯಾಗುತ್ತದೆ; ಬದುಕು ಹಸನಾಗುತ್ತದೆ; ಸಮಾಜವು ಸುಧಾರಿಸುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ ಇದರ ಉಡುಪಿ ಜಿಲ್ಲೆಯ ನೂತನ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಡಾ.ಸುಬ್ರಹ್ಮಣ್ಯ ಭಟ್ಟರನ್ನು ಗೌರವಿಸಲಾಯಿತು. ವೇದಿಕೆಯ ಅಧ್ಯಕ್ಷ ಎಂ ಗೋವಿಂದ ಸ್ವಾಗತಿಸಿದರು. ನಾಗೇಶ್ ಪ್ರಾರ್ಥನೆ ನೆರವೇರಿಸಿದರು. ಕಾರ್ಯದರ್ಶಿ ಸಂಜೀವ ಆಚಾರ್ ವರದಿ ವಾಚಿಸಿದರು. ಉಪಾಧ್ಯಕ್ಷ ಎ. ಶ್ರೀನಿವಾಸ್ ಉಪಸ್ಥಿತರಿದ್ದರು. ಹೆಚ್.ರಾಮ ಸೇರಿಗಾರ್ ವಂದಿಸಿದರು. ಕೆ.ಪುಂಡಲೀಕ ನಾಯಕ್ ಕಾರ್ಯಕ್ರಮಕ್ಕೆ ಸಹಕರಿಸಿದರು.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!