Sunday, September 8, 2024

ಉಡುಪಿ ಜಿಲ್ಲೆಗೆ ಅತ್ಯಂತ ನೀರಸ ಬಜೆಟ್-ವಿಕಾಸ್ ಹೆಗ್ಡೆ ವಿಶ್ಲೇಷಣೆ

ಕುಂದಾಪುರ: ಬಜೆಟ್ ಘೋಷಣೆಗಳೂ ಕೂಡ ರಾಜಕೀಯ ಭಾಷಣಗಳಂತೆ ಪ್ರಚಾರಕ್ಕೆ ಮಾತ್ರ ಸೀಮಿತವಾಗುತ್ತಿದ್ದು, ಇನ್ನು ಈ ಬಾರಿಯ ಬಜೆಟ್ ಉಡುಪಿ ಜಿಲ್ಲೆಗೆ ಅತ್ಯಂತ ನೀರಸ ಬಜೆಟ್. ಐದು ಜನ ಶಾಸಕರು, ಐವರೂ ಆಡಳಿತ ಪಕ್ಷದ ಶಾಸಕರು ಅದರಲ್ಲಿ ಒಬ್ಬರು ಕ್ಯಾಬಿನೆಟ್ ಸಚಿವರು ಇದ್ದು ನಮ್ಮ ಜಿಲ್ಲೆಗೆ ವಿಶೇಷ ಯಾವುದೇ ಯೋಜನೆ, ಕಾರ್ಯಕ್ರಮಗಳು ಇಲ್ಲ ಎಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿಕಾಸ ಹೆಗ್ಡೆ ವಿಶ್ಲೇಷಿಸಿದ್ದಾರೆ.

ಜಿಲ್ಲೆಯ ಅಗತ್ಯತೆಗಳಾದ ವಾರಾಹಿ ನೀರಾವರಿ ಯೋಜನೆಗೆ ವಿಶೇಷ ಅನುದಾನ, ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಪುನರ್ ನಿರ್ಮಾಣಕ್ಕೆ ವಿಶೇಷ ಅನುದಾನ, ಬಹು ಬೇಡಿಕೆಯ ಸರ್ಕಾರಿ ವೈದ್ಯಕೀಯ ಶಿಕ್ಷಣ ಕಾಲೇಜು ಮಂಜೂರಾತಿ, ಪ್ರವಾಸೋದ್ಯಮದ ಉತ್ತೇಜನಕ್ಕೆ ವಿಶೇಷ ಕಾರ್ಯಕ್ರಮ, ಉದ್ಯೋಗ ಸೃಷ್ಟಿಗೆ ಯೋಜನೆ, ಕುಂದಾಪುರಕ್ಕೆ ಉಪ ಸಾರಿಗೆ ಆಯುಕ್ತರ ಕಛೇರಿ, ಆರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಹೊಸ ಹೊಸ ಯೋಜನೆಗಳು, ಮೂರ್ತೆದಾರರು, ಮೀನುಗಾರರಿಗೆ ವಿಶೇಷ ಕಾರ್ಯಕ್ರಮ ಯಾವುದೂ ಇಲ್ಲ. ನಮ್ಮ ಜಿಲ್ಲೆಯ ಸಚಿವರು ಹಾಗೂ ಶಾಸಕರುಗಳ ಇಚ್ಛಾಶಕ್ತಿಯ ಕೊರತೆ, ನಿಷ್ಕ್ರಿಯತೆ ಈ ಬಜೆಟ್ ನಲ್ಲಿ ಏದ್ದು ಕಾಣುತ್ತಿದೆ, ಇನ್ನಾದರೂ ಎಚ್ಚೆತ್ತುಕೊಂಡು ಬಜೆಟ್ ಮೇಲೆ ಚರ್ಚೆಯಾಗುವಾಗ ಜಿಲ್ಲೆಯ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿ ಕೊನೆಗೆ ಬಜೆಟ್ ಮೇಲಿನ ಚರ್ಚೆಗೆ ಮುಖ್ಯಮಂತ್ರಿಗಳ ಉತ್ತರದಲ್ಲಿ ಉಡುಪಿ ಜಿಲ್ಲೆಯ ನಾಗರಿಕರ, ಜನಸಾಮಾನ್ಯರ ಬೇಡಿಕೆಗಳನ್ನು ಘೋಷಿಸುವಂತಾಗಲಿ ಎಂದು ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.

Related Articles

Stay Connected

21,961FansLike
3,912FollowersFollow
22,000SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!