Thursday, November 21, 2024

ಆಸ್ಟ್ರೊ ಮೋಹನ್ ಅವರಿಗೆ ಅಮೆರಿಕದ ಫೊಟೋಗ್ರಾಫಿಕ್ ಸೊಸೈಟಿ ವಿಶೇಷ ಗೌರವ

ಉಡುಪಿ: ಛಾಯಾಚಿತ್ರ ಕಲಾ ಶಿಕ್ಷಣದ ಅಭಿವೃದ್ಧಿ ಹಾಗೂ ಸಂಘಟನೆಗೆ ನಡೆಸಿದ ಅವಿರತ ಶ್ರಮ ಮತ್ತು ಕೊಡುಗೆಯನ್ನು ಗುರುತಿಸಿ ಅಮೆರಿಕದ ಫೊಟೋ ಗ್ರಾಫಿಕ್ ಸೊಸೈಟಿಯು ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೊ ಮೋಹನ್ ಅವರಿಗೆ ಅಸೋಸಿಯೇಟ್ ಪದವಿ ನೀಡಿ ಗೌರವಿಸಿದೆ.

ಕರ್ನಾಟದ ಪತ್ರಿಕಾ ಛಾಯಾಗ್ರಾಹಕರಿಗೆ ಈ ಗೌರವ ಪ್ರಾಪ್ತವಾಗುತ್ತಿರುವುದು ಛಾಯಾಚಿತ್ರ ಲೋಕದಲ್ಲೇ ಅತಿವಿಶಿಷ್ಟ ವೆಂದೆನಿಸಿಕೊಂಡಿದೆ.ಸಾಮಾನ್ಯವಾಗಿ ಛಾಯಾಚಿತ್ರ ಕಲಾವಿದರ ಕಲಾಕೃತಿ , ನೈಪುಣ್ಯತೆಯನ್ನು ಪರಿಗಣಿಸಿ ಇಂತಹ ಸ್ಥಾನಮಾನ ನೀಡಲಾಗುತ್ತದೆ. ಆದರೆ ಸೃಜನಶೀಲ ಛಾಯಾಚಿತ್ರದೊಂದಿಗೆ ಉದಯೋನ್ಮುಖ ಹಾಗೂ ಆಸಕ್ತರಿಗೆ ಛಾಯಾಚಿತ್ರ ಶಿಕ್ಷಣ ನೀಡುವಿಕೆಯನ್ನು ಪರಿಗಣಿಸಿ ಅಸೋಸಿಯೇಟ್ ಶಿಪ್ ನೀಡಿ ಗೌರವಿಸಿರುವುದು ವಿಶೇಷವೆಂದೆನಿಸಿದೆ.

ಈ ಕುರಿತು ಅಮೆರಿಕೆಯ ಫೋಟೋಗ್ರಾಫಿ ಸೊಸೈಟಿಯ ನವೆಂಬರ್ 2021 ಮ್ಯಾಗಜಿನ್ ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ ಎಂದೂ ಅವರು ಹೇಳಿದ್ದಾರೆ.

ಸುಮಾರು 27 ವರ್ಷಗಳ ಸುಧೀರ್ಘ ಅನುಭವಹೊಂದಿರುವ ಆಸ್ಟ್ರೊ , ಕಳೆದ 25 ವರ್ಷಗಳಿಂದ ಉದಯವಾಣಿ ಪತ್ರಿಕೆಯಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ . ಇದುವರೆಗೆ ಛಾಯಾಚಿತ್ರ ಪ್ರಪಂಚದಲ್ಲಿ 188 ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು 500 ಕ್ಕೂ ಅಧಿಕ ರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದಿದ್ದಾರೆ. ಛಾಯಾಚಿತ್ರ ಪತ್ರಿಕೋದ್ಯಮ , ಪೇಜಾವರ ಶ್ರೀಗಳಕುರಿತು ಹಾಗೂ ಉಡುಪಿ ಜಿಲ್ಲೆಯ ಕುರಿತು ಆರು ಪುಸ್ತಕಗಳ ಕೊಡುಗೆಯನ್ನು ನೀಡಿದ್ದಾರೆ. ಶ್ರವಣಬೆಳಗೊಳ ಗೊಮ್ಮಟ ಮೂರ್ತಿ ಅಪರೂಪದ ಫೊಟೋ ಗಳನ್ನು ತೆಗೆದಿದ್ದಾರೆ.

ಸಾಮಾನ್ಯರಿಗೂ ಛಾಯಾಚಿತ್ರ ಶಿಕ್ಷಣವನ್ನು ಅರ್ಥಮಾಡಿಕೊಳ್ಳುವಂತೆ ಬೋಧಿಸುವ ಶೈಲಿಯನ್ನು ಕಂಡು ಕೆನಾನ್ ಸಂಸ್ಥೆ ಇವರನ್ನು ತರಬೇತುದಾರರನ್ನಾಗಿ ಸ್ವೀಕರಿಸಿದೆ. ದಾವಣಗೆರೆ ವಿ.ವಿ. ಪತ್ರಿಕೋದ್ಯಮ ವಿಭಾಗದ ತಾಂತ್ರಿಕ ಸಲಹೆಗಾರರಾಗಿದ್ದಾರೆ. ಕುವೈಟ್, ಬೆಹರೈನ್ ಮತ್ತು ಸಿಂಗಾಪುರದಲ್ಲಿಯೂ ಫೋಟೋಗ್ರಾಫಿ ಶಿಕ್ಷಣ ನೀಡಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ, ಆರ್ಯಭಟ ಪ್ರಶಸ್ತಿಗಳು ಇವರಿಗೆ ಸಂದಿವೆ.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!