spot_img
Wednesday, January 22, 2025
spot_img

ಹಿರಿಯ ಕಲಾವಿದ ಬೇಲ್ತೂರು ರಮೇಶ್ ಅವರಿಗೆ ತಲ್ಲೂರು ಪ್ರಶಸ್ತಿ ಪ್ರದಾನ


ಧಾರೇಶ್ವರ ಬಳಗದಿಂದ ರಾಜಾಂಗಣದಲ್ಲಿ ಯಕ್ಷ ಅಷ್ಟಾಹ
ಕುಂದಾಪುರ. 26: ಶ್ರೀ ಕೃಷ್ಣ ಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಪರ್ಯಾಯ ಶ್ರೀ‌ಅದಮಾರು ಮಠದ ಆಶ್ರಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು, ಕನ್ನಡ ಸಂಸ್ಕೃತಿ ಇಲಾಖೆ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ , ಧಾರೇಶ್ವರ ಯಕ್ಷಬಳಗ ಚಾರಿಟೇಬಲ್ ಟ್ರಸ್ಟ್ ಕಿರಿಮಂಜೇಶ್ವರ ಇವರ ಸಂಯೋಜನೆಯಲ್ಲಿ ನಡೆಯುತ್ತಿರುವ ಯಕ್ಷ ಅಷ್ಟಾಹ ಕಾರ್ಯಕ್ರಮದಲ್ಲಿ ಪ್ರಸಿದ್ಧ ಯಕ್ಷಗಾನ ಕಲಾವಿದ ಬೇಲ್ತೂರು ರಮೇಶ್ ಅವರಿಗೆ ಪ್ರಥಮ ವರ್ಷದ ತಲ್ಲೂರ್ ಫ್ಯಾಮಿಲಿ ಪ್ರಶಸ್ತಿ 2021ನ್ನು ಪ್ರದಾನ ಮಾಡಲಾಯಿತು.

ಪರ್ಯಾಯ ಅದಮಾರು ಮಠದ ಶ್ರೀ‌ಈಶಪ್ರಿಯ ತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡಿ, ಕಲಾವಿದ ಎಂದರೆ ಕಲೆಯನ್ನು ರಕ್ಷಿಸಿ, ಬೆಳೆಸುವವ. ಮುಂದಿನ ಪೀಳಿಗೆ ಅದನ್ನು ಬೆಳೆಸಬೇಕು ಎಂಬ ಹಂಬಲದಿಂದ ಪ್ರಶಸ್ತಿ ಪ್ರದಾನದಂತಹ ಪ್ರೋತ್ಸಾಹಗಳಿರುತ್ತವೆ. ಕಲೆಗಾಗಿ ದಶಕಗಳ ತಮ್ಮನ್ನು ಅರ್ಪಿಸಿಕೊಂಡು ಬರುವುದು ಸುಲಭದ ಮಾತಲ್ಲ. ಕಾಲನ ಹೊಡೆತಕ್ಕೆ ಕಲೆ ಸಿಲುಕದಂತೆ ಉಳಿಸಿಕೊಳ್ಳಬೇಕು ಎಂದರು.

ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಹಳೆ ತಲೆಮಾರಿನ ಕಲಾವಿದರು ಜೀವನದಲ್ಲಿ ಸಂಕಷ್ಟದಲ್ಲಿದ್ದರೂ ಅದೇ ಕಲೆಯಲ್ಲಿ ತೊಡಗಿಸಿಕೊಂಡು ಕಲಾಸೇವೆಯಲ್ಲಿ ತೊಡಗಿಕೊಂಡು ಇಂದಿನ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದ್ದಾರೆ ಎಂದರು.

ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಕರ್ಣಾಟಕ ಬ್ಯಾಂಕ್‌ನ ಸಹಾಯಕ ಜನರಲ್ ಮೆನೆಜರ್ ಬಿ. ರಾಜಗೋಪಾಲ್ ತಂತ್ರಿ, ಯಕ್ಷಸಿರಿ ಟ್ರಸ್ಟ್‌ನ ಡಾ| ಎಚ್. ಎಸ್. ಮೋಹನ್ ಸಾಗರ, ಎಚ್.ಎಸ್. ಮಂಜಪ್ಪ ಸಾಗರ, ಬೇಲ್ತೂರು ರಮೇಶ್ ದಂಪತಿ ಉಪಸ್ಥಿತರಿದ್ದರು.

ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಸ್ವಾಗತಿಸಿ, ಪ್ರಸ್ತಾವಿಸಿದರು. ವಿಮರ್ಶಕ ಎಸ್. ವಿ. ಉದಯ ಕುಮಾರ್ ಶೆಟ್ಟಿ ಸಮ್ಮಾನಪತ್ರ ವಾಚಿಸಿ, ಅಭಿನಂದನಾ ಭಾಷಣ ಮಾಡಿದರು. ಕರ್ನಾಟಕ ಜಾನಪದ ಪರಿಷತ್ತಿನ ಉಡುಪಿ ತಾಲೂಕು ಅಧ್ಯಕ್ಷ ಸುನಿಲ್ ಕುಮಾರ್ ನಿರ್ವಹಿಸಿದರು.

30ಕ್ಕೆ ಸಮಾರೋಪ:
6ನೆಯ ವರ್ಷದ ಯಕ್ಷ ಅಷ್ಟಾಹ ಅ.23ರಿಂದ ಅ.30ರವರೆಗೆ ಪ್ರತಿದಿನ ರಾತ್ರಿ 7.30ರಿಂದ ನಡೆಯುತ್ತಿದೆ. ಅ.30ರಂದು ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಶ್ರೀ‌ಈಶಪ್ರಿಯ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಅ.23ರಂದು ಯಕ್ಷಗಾನ ಅಷ್ಟಾಹ ಆರಂಭವಾಗಿದ್ದು ಅ.30ರವರೆಗೆ ಮಾರುತಿ ಪ್ರತಾಪ, ದ್ರೋಣ ಪ್ರತಾಪ, ಚೂಡಾಮಣಿ, ಚ್ಯವನ, ಶ್ರೀಕೃಷ್ಣ ಗಾರುಡಿ, ನೈಮಿಷಾರಣ್ಯ, ದಂಬೋದ್ಭವ, ಸುದರ್ಶನ ವಿಜಯ ಪ್ರಸಂಗಗಳು ಪ್ರದರ್ಶನಗೊಳ್ಳುತ್ತಿದೆ. ಸುಬ್ರಹ್ಮಣ್ಯ ಧಾರೇಶ್ವರ ಯೂಟ್ಯೂಬ್ ಚಾನೆಲ್‌ನಲ್ಲಿ ನೇರಪ್ರಸಾರದ ಸೌಕರ್ಯ ಇದೆ.

ಕಲಾವಿದರಾಗಿ ಹಿಮ್ಮೇಳದಲ್ಲಿ ಸುಬ್ರಹ್ಮಣ್ಯ ಧಾರೇಶ್ವರ, ಚಂದ್ರಕಾಂತ ಮೂಡುಬೆಳ್ಳೆ, ಸುಧೀರ್ ಪೆರ್ಡೂರು, ಗಜಾನನ ಭಂಡಾರಿ ಬೋಳ್ಗೆರೆ, ಶಶಿ ಆಚಾರ್, ಶಿವಾನಂದ ಕೋಟ, ಮುಮ್ಮೇಳದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ, ಅಶೋಕ ಭಟ್ ಸಿದ್ದಾಪುರ, ಶಂಕರ ಹೆಗಡೆ ನೀಲ್ಕೋಡು, ಮುಗ್ವ ಗಣೇಶ ನಾಯ್ಕ್, ಸುಧೀರ ಉಪ್ಪೂರು, ನಾಗೇಶ್ ಕುಳಿಮನೆ, ಲೋಕೇಶ ಗುಣವಂತೆ, ಕಾರ್ತಿಕ ಕಣ್ಣಿ, ಹಾಸ್ಯಪಾತ್ರದಲ್ಲಿ ಶ್ರೀಧರ ಭಟ್ ಕಾಸರಕೋಡ್ ಭಾಗವಹಿಸುತ್ತಿದ್ದಾರೆ

Related Articles

Stay Connected

21,961FansLike
3,912FollowersFollow
22,200SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!