Thursday, November 21, 2024

ಗೋವಿಂದ ಬಿಜೂರ್ ಪುಸ್ತಕ ಬಿಡುಗಡೆ


ಕುಂದಾಪುರ: ಕುಂದಾಪುರದಲ್ಲಿ ತನ್ನ ಸಾತ್ವಿಕ ಹಾಗೂ ಧೀಮಂತ ವ್ಯಕ್ತಿತ್ವದ ಮೂಲಕ ಸಾಮಾಜಿಕ ಅಭಿವೃದ್ಧಿಯಲ್ಲಿ ತನ್ನನ್ನು ತೊಡಗಿಸಿಕೊಂಡು ಎಲ್ಲರ ಪ್ರೀತಿ, ವಿಶ್ವಾಸ ಗಳಿಸಿದ ಗೋವಿಂದ ಬಿಜೂರ್ ಅವರು ಬಗ್ಗೆ ಅವರು ಪುತ್ರಿ, ನಿವೃತ್ತ ಶಿಕ್ಷಕಿ ಶಶಿಕಲಾ ಬಿಜೂರ್ ಪುಸ್ತಕ ಪ್ರಕಟಿಸಿರುವುದು ಅಭಿನಂದನೀಯವಾಗಿದೆ. ಕುಂದಾಪುರದ ಕೆಲವು ಜನಪ್ರಿಯ ವ್ಯಕ್ತಿಗಳ ಬಗ್ಗೆ ಇಂದಿನ ಪೀಳಿಗೆಯವರಿಗೆ ತಿಳಿದಿಲ್ಲ. ಇಂತಹ ಪುಸ್ತಕಗಳು ಪ್ರಕಟವಾದಾಗ ಅವರ ಬಗ್ಗೆ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು ಜನ್ಮಶತಮಾನಂಗಳದಲ್ಲಿ ಗೋವಿಂದ ಬಿಜೂರ್ ಪುಸ್ತಕ ಬಿಡುಗಡೆ ಮಾಡುತ್ತಾ ಖ್ಯಾತ ವಕೀಲರೂ ಸಾಹಿತಿಗಳೂ ಆದ ಎ.ಎಸ್.ಎನ್.ಹೆಬ್ಬಾರ್ ಹೇಳಿದರು.

ಕುಂದಾಪುರದ ಬಿ ಆರ್ ರಾಯರ ಹಿಂದೂ ಶಾಲೆಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ,ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಆಶಯ ಭಾಷಣ ಮಾಡಿದ ಮಾಣಿಗೋಪಾಲ್ ಮಾತನಾಡಿ ,”ಬಸ್ ಟಿಕೇಟ್ ನೀಡುತ್ತಿದ್ದ ಗೋವಿಂದ ಬಿಜೂರ್ ಸಮಾಜವನ್ನು ಬೆಳೆಸುವಲ್ಲಿ ಮಾಡಿದ ಶ್ರಮ ಇಂದಿನ ಪೀಳಿಗೆಗೆ ಅರಿವಾಗದು.ಅದರಲ್ಲೂ ಬಿಲ್ಲವ ಸಮಾಜದ ಏಳಿಗೆಗಾಗಿ ಅವರು ಇತರ ಸಮಾನ ಮನಸ್ಕರೊಂದಿಗೆ ಸೇರಿ ಮಾಡಿದ ಹೋರಾಟ ಎಂದೂ ಮರೆಯಲಾಗದು” ಎಂದರು.

ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ್ ಮಾಸ್ಟರ್ ಉಬ್ಬೇರಿ, ಕರ್ನಾಟಕ ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ಜಸ್ಟಿಸ್ ಮನೋಹರ್, ಪತ್ರಕರ್ತ ಯು.ಎಸ್.ಶೆಣೈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಲೇಖಕಿ ಶಶಿಕಲಾ ಬಿಜೂರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಧುಶ್ರೀ ಸುಂದರ ನಿರೂಪಿಸಿದರು. ಅರವಿಂದ ಬಿಜೂರ್ ವಂದಿಸಿದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!