Thursday, November 21, 2024

ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘ, ಮತ್ತು ಜನ ಔಷಧಿ ಕೇಂದ್ರದ ವತಿಯಿಂದ 5 ಪೊಲೀಸ್ ಠಾಣೆಗಳಿಗೆ ಕೊಡೆ ವಿತರಣೆ


ಕುಂದಾಪುರ, ಜೂ,25: ಉಡುಪಿ ಜಿಲ್ಲಾ ತೋಟಗಾರಿಕಾ ಬೆಳೆಗಾರರ ಸಂಘ, ಉಡುಪಿ ಮತ್ತು ಪ್ರಧಾನಮಂತ್ರಿ ಜನ ಔಷಧಿ ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕು ವ್ಯಾಪ್ತಿಯ ಪೊಲೀಸ್ ಠಾಣೆಯ ಪೊಲೀಸರಿಗೆ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರಿಗೆ ಕೊಡೆ ವಿತರಣೆ ಕಾರ್ಯಕ್ರಮ ಜೂ.24ರಂದು ನಡೆಯಿತು.


ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎ. ಜಿ ಕೊಡ್ಗಿ ಅವರು ಕೊಡೆ ವಿತರಣೆ ಮಾಡಿದರು. ಪೊಲೀಸ್ ಉಪ ನಿರೀಕ್ಷಕರಾದ ಸುಬ್ಬಣ್ಣ ಬಿ ಕೊಡುಗೆ ಸ್ವೀಕರಿಸಿದರು.
ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಬೈಂದೂರು ಕ್ಷೇತ್ರದ ಶಾಸಕ ಬಿ ಎಂ ಸುಕುಮಾರ್ ಶೆಟ್ಟಿ ಕೊಡೆ ವಿತರಿಸಿದರು. ಪೊಲೀಸ್ ಉಪ ನಿರೀಕ್ಷಕರಾದ ಶ್ರೀಧರ ನಾಯ್ಕ ಕೊಡುಗೆ ಸ್ವೀಕರಿಸಿದರು.
ಕಂಡ್ಲೂರು ಪೊಲೀಸ್ ಠಾಣೆಯಲ್ಲಿ ಕಾವ್ರಾಡಿ ಗ್ರಾ.ಪಂ.ಅಧ್ಯಕ್ಷ ವಿಜಯ ಪುತ್ರನ್ ಕೊಡೆ ವಿತರಿಸಿದರು. ಠಾಣೆಯ ಸುಧಾ ಪ್ರಭು ಕೊಡುಗೆ ಸ್ವೀಕರಿಸಿದರು.
ಕುಂದಾಪುರ ಸರ್ಕಲ್ ಇನ್ಸ್ಪೆಕ್ಟರ್ ಕಚೇರಿಯಲ್ಲಿ ಕುಂದಾಪುರ ಪುರಸಭಾ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಕೊಡೆ ವಿತರಿಸಿದರು. ವೃತ್ತ ನಿರೀಕ್ಷಕರಾದ ಗೋಪಿಕೃಷ್ಣ, ಉಪ ನಿರೀಕ್ಷಕರಾದ ಸದಾಶಿವ ಗವರೋಜಿ ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ತೋಟಗಾರಿಕ ಬೆಳೆಗಾರರ ಸಹಕಾರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಕಳೆದ ವರ್ಷ ನಮ್ಮ ಸಹಕಾರ ಸಂಘದ ವತಿಯಿಂದ ಜನೌಷಧ ಕೇಂದ್ರ ಆರಂಭ ಮಾಡಲಾಯಿತು. ಕಳೆದ ಬಾರಿ ಕೊರೋನಾ ಸಂದರ್ಭದಲ್ಲಿ ಸಿದ್ದಾಪುರ ಮತ್ತು ಕೊಕ್ಕರ್ಣೆ ಪ್ರೌಢಶಾಲೆಗಳಿಗೆ ಉಚಿತ ಊಟ ಮತ್ತು ಮಾಸ್ಕ್, ಸ್ಯಾನಿಟೈಸರ್, ಆಶಾ ಕಾರ್ಯಕರ್ತೆಯರಿಗೆ ಗೌರವ ಧನ ನೀಡಿದ್ದೇವೆ. ಈ ಬಾರಿ ನಮ್ಮ ಜನೌಷಧ ಕೇಂದ್ರದ ವ್ಯಾಪ್ತಿಯ ಐದು ಪೊಲೀಸ್ ಠಾಣೆಗಳಿಗೆ ಒಟ್ಟು ೩೦೦ ಕೊಡೆಗಳನ್ನು ನೀಡಿದ್ದೇವೆ ಎಂದರು.


ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಎಚ್.ವಿಠಲ ಶೆಟ್ಟಿ ಶೆಡಿಕೊಡ್ಲು, ನಿರ್ದೇಶಕರಾದ ಕೆ.ಗಣೇಶ ಕಾಮತ್, ಎಸ್.ಅಮರನಾಥ ಚಾತ್ರಾ ಶೆಟ್ಟಿಪಾಲು, ಎ.ವಿಶ್ವನಾಥ ಉಡುಪ, ಕೆ.ಪ್ರದೀಪ ಹೆಬ್ಬಾರ್, ಶಶಿಧರ ಆಲ್ಸೆ ಎಸ್., ಎಸ್.ನಾರಾಯಣ ನಾಯಕ್ ನೇರಳಕಟ್ಟೆ, ವೆರೋನಿಕಾ ಸಲ್ದಾನಾ ಉಡುಪಿ, ವೈದೇಹಿ ಎಸ್., ಡಿ.ಬಾಲಕೃಷ್ಣ ಶೆಟ್ಟಿ ಗುಲ್ವಾಡಿ, ಸಂಘದ ಸಿ‌ಇ‌ಓ ಎಸ್.ವೀರೇಂದ್ರ ಐತಾಳ್ ಮೊದಲಾದವರು ಉಪಸ್ಥಿತರಿದ್ದರು.

Related Articles

Stay Connected

21,961FansLike
3,912FollowersFollow
22,100SubscribersSubscribe
- Advertisement -spot_img
- Advertisement -spot_img
- Advertisement -spot_img
- Advertisement -spot_img

Latest Articles

error: Content is protected !!